Ad Widget

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ – ಶೇ.12 ಡಿವಿಡೆಂಡ್ ಘೋಷಣೆ

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಪ್ರಧಾನ ಕಛೇರಿಯ ಎ.ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿತು.
ವರದಿ ವಾಚನದ ಬಳಿಕ ಸದಸ್ಯರಾದ ಜಯರಾಮ ಮುಂಡೋಳಿಮೂಲೆ ಮಾತನಾಡಿ ಕೃಷಿಕ ಸದಸ್ಯರಿಂದ ಅಲ್ಪ ಮೊತ್ತ ಪಡೆದು ಅಧ್ಯಯನ ಪ್ರವಾಸ  ಏರ್ಪಡಿಸಲು ಸಲಹೆ ನೀಡಿದರು.
ವಿವಿಧ ಚರ್ಚೆಗಳು ನಡೆದು ಅಜ್ಜಾವರ ಗ್ರಾಮಕ್ಕೆ 2 ಎಕರೆ ಭೂಮಿ ಖರೀದಿಸಲು ತೀರ್ಮಾನಿಸಲಾಯಿತು.
ಸುಳ್ಯ ಮತ್ತು ಅಜ್ಜಾವರ ಶಾಖೆಯನ್ನು ಪ್ರತ್ಯೇಕಿಸುವ ಕುರಿತು ಸುದೀರ್ಘ ಚರ್ಚೆ ನಡೆದು ಸಂಘದ ಕ್ಷೇಮನಿಧಿಯು ಈಗ ಇರುವ ರೂ 4 ಕೋಟಿಗಳಿಂದ ರೂ.10.00 ಕೋಟಿಗಳಿಗೆ ಏರಿಕೆಯಾದ ನಂತರ ಈ ಬಗ್ಗೆ ಯೋಚನೆ ಮಾಡುವುದೆಂದು ಸಂಘದ ಮತ್ತು ಸದಸ್ಯರ ಹಿತದೃಷ್ಟಿಯಿಂದ ಸೂಕ್ತ ಎಂದು ತೀರ್ಮಾನಿಸಲಾಯಿತು. 
ದುಗಲಡ್ಕ ಶಾಖೆಯ ಕಟ್ಟಡ ಹಾಳಾಗಿದ್ದು ಹೊಸತಾಗಿ ನಿರ್ಮಾಣ ಮಾಡಲು ಕೆ.ಟಿ. ವಿಶ್ವನಾಥ್ ಸಲಹೆ ನೀಡಿದರು. ಅಧ್ಯಕ್ಷರಾದ ವಿಕ್ರಮ್ ಎ.ವಿ ಮಾತನಾಡಿ ದುಗಲಡ್ಕ ಶಾಖೆಯ ಕಟ್ಟಡದ ರಸ್ತೆ ಮಾರ್ಜಿನ್ ವಿಚಾರ ಪರಿಶೀಲಿಸಬೇಕಿದ್ದು ಈ ಬಗ್ಗೆ ಕ್ರಮವಿಡುವುದಾಗಿ ತಿಳಿಸಿದರು.
ಹೊಸ ಯೋಜನೆಗಳು:
ಅಧ್ಯಕ್ಷರಾದ  ವಿಕ್ರಮ್.ಎ ವಿರವರು ಅಧ್ಯಕ್ಷೀಯ ಮಾತುಗಳನ್ನಾಡಿ ಬೆಳೆ ಸಾಲ ಹೊಂದಿದ ಕೃಷಿಕ ಸದಸ್ಯರಿಗೆ ರೂ 1.00 ಲಕ್ಷದವರೆಗೆ ಓವರ್ ಡ್ರಾಫ್ಟ್ ಖಾತೆ ಯೋಜನೆ ಮತ್ತು ಎಲ್ಲಾ ಸದಸ್ಯರಿಗೆ ಚಿನ್ನ ಖರೀದಿ ಸಾಲದ ಯೋಜನೆಯನ್ನು ನೂತನವಾಗಿ ಜಾರಿಗೊಳಿಸುವುದಾಗಿ ತಿಳಿಸಿದರು.
ಅಜ್ಜಾವರ ಶಾಖೆಗೆ ಶೀಟ್ ಅಳವಡಿಕೆ ಮಾಡುವುದಾಗಿ ಮತ್ತು ಸುಳ್ಯದ ಹಳೆ ಬ್ಯಾಂಕ್ ಕಟ್ಟಡಕ್ಕೆ ಶೀಟ್ ಅಳವಡಿಕೆ ಮಾಡಬೇಕಿದ್ದು ಮುಖ್ಯ ರಸ್ಥೆ ಅಗಲೀಕರಣದ ಕಾರಣ ರಿಸ್ಕ್ ತೆಗೆದುಕೊಳ್ಳುವುದು ಹೇಗೆ ಎಂದು ಮಹಾಸಭೆಯ ಸಲಹೆ ಕೋರಿದರು.
2026ನೇ ಮೇ ತಿಂಗಳೊಳಗೆ ಸುಳ್ಯಕ್ಕೆ ಬೈಪಾಸ್ ಅಥವಾ ಮುಖ್ಯ ರಸ್ಥೆ ಅಗಲೀಕರಣದ ಬಗ್ಗೆ ಗೊತ್ತಾಗಬಹುದಾಗಿದ್ದು ಮೇ ತಿಂಗಳಲ್ಲಿ ಶೀಟ್ ಅಳವಡಿಸಲು ಸದಸ್ಯರಾದ ಬಾಲಕೃಷ್ಣ, ದಾಮೋದರ ಮಂಚಿ ಕೆ ಮೊದಲಾದವರು ಸಲಹೆ ನೀಡಿದರು.
ಸಂಘದ ನಿರ್ದೇಶಕಿ ಶ್ರೀಮತಿ ನವ್ಯ ಚಂದ್ರಶೇಖರ ಧನ್ಯವಾದ ಅರ್ಪಿಸಿದರು.
ಸಂಘದ ಉಪಾದ್ಯಕ್ಷರಾದ ಚಂದ್ರಶೇಖರ ನಡುಮನೆ ಸ್ವಾಗತಿಸಿದರು.
ಸಂಘದ ಕಾರ್ಯವ್ಯಾಪ್ತಿಯಲ್ಲಿ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವ 7 ಜನ ಮಹಿಳಾ ಸಿಬ್ಬಂದಿಗಳಿಗೆ ಸಂಘದ ಆಡಳಿತ ಮಂಡಳಿ ವತಿಯಿಂದ ಮಹಾಸಭೆಯಲ್ಲಿ ಗೌರವಾರ್ಪಣೆ ಏರ್ಪಡಿಸಲಾಯಿತು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ತಲಾ ರೂ. 2,000/- ದಂತೆ ಪ್ರೋತ್ಸಾಹಕವಾಗಿ ಶತಾಬ್ದಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಂಘದ ಸದಸ್ಯರ ಮಕ್ಕಳ ಪೈಕಿ ಈ ವರ್ಷ ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಕು.ಸ್ವರ್ಣಲತಾ ವೆಂಕಟ್ರಮಣ ಮುಳ್ಯ ಇವರನ್ನು ಮತ್ತು ಬಿ.ಎ.ಎಂ.ಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದ ಕು. ಸನ್ನಿಧಿ ಶಿವರಾಮ ಕೇರ್ಪಳ ಇವರನ್ನು ಸನ್ಮಾನಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading