Ad Widget

ಯುವಸ್ಫೂರ್ತಿ ಸೇವಾ ಸಂಘದ ವತಿಯಿಂದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯ ದಶ ಸಂಭ್ರಮ ಕಾರ್ಯಕ್ರಮ – ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕಲ್ಮಡ್ಕ : ಹತ್ತನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ದಶ ಸಂಭ್ರಮ ಕಾರ್ಯಕ್ರಮ ಯುವಸ್ಫೂರ್ತಿ ಸೇವಾ ಸಂಘ(ರಿ.) ಕಲ್ಮಡ್ಕ ಇದರ ವತಿಯಿಂದ ದಿನಾಂಕ 16 ಮತ್ತು 17 ಆಗಸ್ಟ್, 2025 ಶನಿವಾರ ಹಾಗೂ ಆದಿತ್ಯವಾರದಂದು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಸಭಾಂಗಣದಲ್ಲಿ ನಡೆಯಿತು. ಗ್ರಾಮದೈವ ಶ್ರೀ ನೆಲ್ಲೂರಾಯ ದೈವಸ್ಥಾನದ ಮೊಕ್ತೇಸರರಾದ ಶ್ರೀ ಗಂಗಾಧರ ಗೌಡ ಮರಕ್ಕಡ ದೀಪ ಪ್ರಜ್ವಲನೆ ನಡೆಸಿ “ದಶ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನವೋದಯ ಸಂಘದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಬಿ ಶಿವರಾಮ ಕಲ್ಮಡ್ಕ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಧರ್ಮಪಾಲ ಗೌಡ ಮರಕ್ಕಡ, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯ ನಿರ್ವಾಣಾಧಿಕಾರಿಯವರಾದ ಶ್ರೀ ಪ್ರಶಾಂತ್ ಜೋಗಿಬೆಟ್ಟು, ಶ್ರೀ ರಾಮ ಮಂದಿರ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ರಮೇಶ್ ತಿಪ್ಪನಕಜೆ ಸಾರ್ವಜನಿಕ ದೇವತಾರಾಧನಾ ಸಮಿತಿ ಅಧ್ಯಕ್ಷರಾದ ಶ್ರೀ ಪೂವಪ್ಪ ಗೌಡ ಶೆಟ್ಟಿಗದ್ದೆ, ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಲೋಕಯ್ಯ ನಾಯ್ಕ ಬೊಳಿಯೂರು,ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಅಧ್ಯಕ್ಷರಾದ ಶ್ರೀ ವಿಜಯ್ ಕುಮಾರ್ ಉಬರಡ್ಕ, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷರಾದ ಶ್ರೀ ಲಕ್ಷ್ಮೀ ನಾರಾಯಣ ನಡ್ಕ, ಮರಾಠಿ ಸಂಘ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀ ಸೀತಾರಾಮ ಕಡಂಬುಕಾನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಜ್ರಾಕ್ಷಿ ಶ್ರೀಕಾಂತ್ ಕಲ್ಮಡ್ಕ, ಸಂಸ್ಕಾರ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ನಳಿನಿ ಬಾಲಕೃಷ್ಣ ರೈ ಎಣ್ಮೂರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಘದ ಸದಸ್ಯರಾದ ಶ್ರೀ ರಾಮಚಂದ್ರ ಕಾಚಿಲ ಪ್ರಾರ್ಥನೆಯನ್ನು ನೆರವೇರಿಸಿದರು. ಅಶ್ವತ್ ಕುಳ್ಸಿಗೆ ಸ್ವಾಗತಿಸಿ ಜಯಂತ ಆರ್ ಕೆ ಧನ್ಯವಾದ ನೆರವೇರಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಶನಿವಾರ ರಾತ್ರಿ ಗಂಟೆ 7 ರಿಂದ ಸಂಸ್ಕಾರ ಅಂಗನವಾಡಿ ಕೇಂದ್ರ ಕಲ್ಮಡ್ಕ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ಕಲಾ ಸಾರಥಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ಪುಷ್ಕಲ್ ಕುಮಾರ್ ತೋನ್ಸೆ ತಂಡದವರಿಂದ ಶ್ರೀ ಕೃಷ್ಣ ತುಲಾಭಾರ ಕಥಾ ಕೀರ್ತನಾ ಕಾರ್ಯಕ್ರಮ ನಡೆಯಿತು.
ದಿನಾಂಕ 17 ಆಗಸ್ಟ್ 2025 ರಂದು ಪೂರ್ವಾಹ್ನ ಪುರುಷರ ಹಾಗೂ ಮಹಿಳೆಯರ ವಿಭಾಗದ ಮೊಸರು ಕುಡಿಕೆ ಹಾಗೂ ವಿವಿಧ ಸ್ಪರ್ಧೆಗಳು ಹಾಗೂ ಮುದ್ದು ಪುಟಾಣಿಗಳ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು.
ಅಪರಾಹ್ನ ಮೂರು ಗಂಟೆಯಿಂದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ದತ್ತಾಂಜನೇಯ ಕ್ಷೇತ್ರ,ದಕ್ಷಿಣ ಗಾಣಗಾಪುರ ಮಹಾಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರು ಆಶೀರ್ವಚನ ನೀಡಿದರು.
ಸಭಾಧ್ಯಕ್ಷತೆಯನ್ನು ಯುವಸ್ಪೂರ್ತಿ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಮ ಕೊಳೆಂಜಿಕೋಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಶ್ ಕುಮಾರ್ ಕರಿಕ್ಕಳ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಕಾನತ್ತೂರು, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಪಿ ಉದಯ್ ಕುಮಾರ್ ಬೆಟ್ಟ, ಸಂಗಮ ಕಲಾ ಸಂಘ(ರಿ.) ಇದರ ಅಧ್ಯಕ್ಷರಾದ ಶ್ರೀ ಶ್ಯಾಮ್ ಭಟ್ ಕೆರೆಕ್ಕೋಡಿ,ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಮೊಕ್ತೇಸರರಾದ ಶ್ರೀ ರಾಮಚಂದ್ರ ಎಡಪತ್ಯ ಉಪಸ್ತಿತರಿದ್ದರು.
ಸನ್ಮಾನ ಸಮಾರಂಭ: ವೇದಿಕೆಯಲ್ಲಿ ಕಲಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ರಂಗಕರ್ಮಿ ಶ್ರೀ ಮಹಾಬಲ ಕೆರೆಕ್ಕೋಡಿ ಇವರಿಗೆ “ಕಲ್ಮಡ್ಕ ಕಲಾ ಗೌರವ” ಹಾಗೂ ಶಿಕ್ಷಕಿ ಶ್ರೀ ಮತಿ ಗಿರಿಜಾ ಮಾಳಪ್ಪಮಕ್ಕಿ ಇವರಿಗೆ ಗೌರವ ಅಭಿನಂದನೆ ಹಾಗೂ ಕಲಾವಿದ, ಅಖಿಲ ಭಾರತ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸಾಯಿ ನಾರಾಯಣ ಶೆಟ್ಟಿಗದ್ದೆ ಇವರಿಗೆ ಹುಟ್ಟೂರ ಅಭಿನಂದನೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಇದರ ನಿವೃತ ಮುಖ್ಯ ಗುರುಗಳಾದ ಶ್ರೀ ವಿ ಸುಬ್ರಾಯ ಓಣಿಯಡ್ಕ ಅಭಿನಂದನ ಭಾಷಣ ಮಾಡಿದರು. ವಕೀಲರ ಸಂಘ ಸುಳ್ಯ ಇದರ ಉಪಾಧ್ಯಕ್ಷರಾದ ಶ್ರೀ ದಿಲೀಪ್ ಬಾಬ್ಲುಬೆಟ್ಟು, ಪಂಬೆತಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶ್ರೀ ಗಣೇಶ ಭೀಮಗುಳಿ ಹಾಗೂ ಯುವಸ್ಪೂರ್ತಿ ಸೇವಾ ಸಂಘದ ಪೂರ್ವಾಧ್ಯಕ್ಷರುಗಳಾದ ಶ್ರೀ ಶೇಷಪ್ಪ ಮಾಳಪ್ಪಮಕ್ಕಿ, ಶ್ರೀ ಹರೀಶ್ ಮಾಳಪ್ಪಮಕ್ಕಿ, ಶ್ರೀ ಕರುಣಾಕರ ಶೆಟ್ಟಿಗದ್ದೆ,ಶ್ರೀ ಅಶೋಕ್ ಗೊಳ್ತಾಜೆ, ಶ್ರೀ ದೇವಿಪ್ರಸಾದ್ ಮರಕ್ಕಡ ಹಾಗೂ ಉಪಾಧ್ಯಕ್ಷರಾದ ಶ್ರೀ ಚಿದಾನಂದ ಮಾಳಪ್ಪಮಕ್ಕಿ,ಕಾರ್ಯದರ್ಶಿ ಶ್ರೀ ನವೀನ್ ಮೂಲೆಮನೆ ವೇದಿಕೆಯಲ್ಲಿ ಉಪಸ್ತಿತರಿದ್ದರು.
ಶ್ರೀ ಸಚಿತ್ ಕಲ್ಮಡ್ಕ ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಚಿದಾನಂದ ಮಾಳಪ್ಪಮಕ್ಕಿ, ಶ್ರೀ ಜಯಪ್ರಕಾಶ್ ಮಾಳಪ್ಪಮಕ್ಕಿ ಹಾಗೂ ಶ್ರೀ ನಿತಿನ್ ಮಾಳಪ್ಪಮಕ್ಕಿ ಸನ್ಮಾನ ಪತ್ರ ವಾಚಿಸಿದರು. ಶ್ರೀ ಪುನೀತ್ ಮೂಲೆಮನೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀ ರಂಜಿತ್ ಮಾಳಪ್ಪಮಕ್ಕಿ ಧನ್ಯವಾದ ನೆರವೇರಿಸಿದರು. ಶ್ರೀ ತೀರ್ಥಾನಂದ ಕೊಡಂಕಿರಿ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿದರು.
ಶ್ರೀ ನವೀನ್ ಮೂಲೆಮನೆ,ಜಯರಾಜ್ ಕಡಂಬುಕಾನ, ಶೇಷಪ್ಪ ಮಾಳಪ್ಪಮಕ್ಕಿ, ಶ್ರೀ ಮತಿ ವಜ್ರಾಕ್ಷಿ ಶ್ರೀಕಾಂತ್, ಜಯಂತ ಆರ್ ಕೆ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರುಗಳ ಕೂಡುವಿಕೆಯಿಂದ “ಪಾಂಚಜನ್ಯ – ರಾಧಾ ವಿಲಾಸ – ಗರುಡ ಗರ್ವಭಂಗ” ಯಕ್ಷಗಾನ ಬಯಲಾಟ ನಡೆಯಿತು. ಶ್ರೀ ಸಚಿತ್ ಕಲ್ಮಡ್ಕ, ಶ್ರೀ ಪುನೀತ್ ಮೂಲೆಮನೆ ಕಾರ್ಯಕ್ರಮಗಳನ್ನು ಆಯೋಜಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading