Ad Widget

ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ – ಗ್ಯಾರಂಟಿ ಅನುಷ್ಠಾನ ಸಮಿತಿಯ ನಿರಂತರ ಪ್ರಯತ್ನದ ಫಲದಿಂದ ದುಗ್ಗಲಡ್ಕ ಟೌನ್ ಫೀಡರ್ ಮತ್ತು ಉಬರಡ್ಕ ಗ್ರಾಮ ಸುಳ್ಯ ಮೆಸ್ಕಾಂ ಶಾಖೆಗೆ ಅಳವಡಿಕೆ

ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆ ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.
“ಈ ಹಿಂದೆ ನಡೆದ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆದ ಗ್ಯಾರಂಟಿ ವಿಲೇವಾರಿ ಶಿಬಿರ ಮತ್ತು ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ದುಗ್ಗಲಡ್ಕ ಟೌನ್ ಫೀಡರ್ ಹಾಗೂ ಉಬರಡ್ಕ ಗ್ರಾಮವನ್ನು ಮೆಸ್ಕಾಂ ಸುಳ್ಯ ಶಾಖೆಗೆ ಸಂಪರ್ಕಗೊಳಿಸುವಂತೆ ಚರ್ಚಿಸಲಾಗಿದ್ದು, ಗ್ಯಾರಂಟಿ ಸಮಿತಿಯ ನಿರಂತರ ಪ್ರಯತ್ನದ ಸಮಿತಿ ಸದಸ್ಯರು ನಿರಂತರವಾಗಿ ಮೆಸ್ಕಾಂ ಅಧಿಕಾರಿಗಳಿಗೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಈ ಸಂಪರ್ಕ ವ್ಯವಸ್ಥೆಯನ್ನು ಮೆಸ್ಕಾಂ ಇಲಾಖೆ ಮಾಡಿದೆ. ಇದರಿಂದ ದುಗ್ಗಲಡ್ಕ ಪ್ರದೇಶದ ಮತ್ತು ಉಬರಡ್ಕ ಮಿತ್ತೂರು ಗ್ರಾಮದ ಮೆಸ್ಕಾಂ ಗ್ರಾಹಕರಿಗೆ ಸಹಕಾರಿಯಾಗಲಿದೆ” ಎಂದು ಮೆಸ್ಕಾಂ ಇ ಇ ಹರೀಶ್ ನಾಯ್ಕ್ ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರಂಟಿ ಸಮಿತಿ ಸದಸ್ಯ ಭವಾನಿಶಂಕರ್ “ಕಲ್ಮಡ್ಕ ಮೆಸ್ಕಾಂ ಇಲಾಖೆಗೆ ಅಭಿನಂದನೆ ಸಲ್ಲಿಸಿ, ಮೆಸ್ಕಾಂ ಇಲಾಖೆ ಗ್ರಾಹಕರಿಂದ ತಿಂಗಳ ವಿದ್ಯುತ್ ಬಿಲ್ ಗೆ ಅನ್ವಯಿಸುವಂತೆ ಡಿಪಾಸಿಟ್ ಮೊತ್ತ ಸಂದಾಯ ಮಾಡುವಂತೆ ಬಿಲ್ ಗೆ ಸೇರಿಸಿ ಕೊಡುತ್ತಿದ್ದು ಇದರಿಂದ ಗ್ರಾಹಕರಿಗೆ ಸರಿಯಾದ ಮಾಹಿತಿ ಇಲ್ಲದೇ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮೆಸ್ಕಾಂ ಇಲಾಖೆ ಈ ಬಗ್ಗೆ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ತ ಮಾಹಿತಿ ನೀಡಬೇಕೆಂದು” ಅಧಿಕಾರಿಗಳಿಗೆ ಸಲಹೆ ನೀಡಿದರು.
ಸದಸ್ಯ ಈಶ್ವರ್ ಆಳ್ವ ಮಾತನಾಡಿ “ಕೊಡಿಯಾಲ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಹಳೆಯದಾಗಿದ್ದು ಸಂಪರ್ಕ ಆಗಾಗ್ಗೆ ಕಡಿತ ಗೊಳ್ಳುತ್ತಿದೆ. ಆದುದರಿಂದ ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸುವಂತೆ” ಸಲಹೆ ನೀಡಿದರು.
ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ ಆಲೆಟ್ಟಿ “ಗ್ರಾಮದ ಮಾಣಿಮರ್ದು ಎಂಬಲ್ಲಿ ಅರಣ್ಯ ಪ್ರದೇಶದ ಒಳಗೆ ಇರುವ ಪರಿಶಿಷ್ಟ ಪಂಗಡಗಳ 8 ಮನೆಗಳಿಗೆ ಇದುವರೆಗೆ ವಿದ್ಯುತ್ ಸಂಪರ್ಕವಿಲ್ಲದೆ ಇರುವ ಬಗ್ಗೆ ಜಿಲ್ಲಾ ಗ್ಯಾರಂಟಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಇಲಾಖಾಧಿಕಾರಿಗಳು ಈ ಬಗ್ಗೆ ಕೂಡಲೇ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ” ಸೂಚಿಸಿದರು.
ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಆನ್ ಲೈನ್ ಟಿಕೆಟ್ ಬುಕಿಂಗ್ ಕೇಂದ್ರ ಸ್ಥಗಿತವಾಗಿರುವ ಬಗ್ಗೆ ಸದಸ್ಯ ಧನುಷ್ ಕುಕ್ಕೆಟಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ತಾಂತ್ರಿಕ ದೋಷದಿಂದ ಸ್ಥಗಿತ ವಾಗಿದೆ, 2 ದಿನಗಳಲ್ಲಿ ಮತ್ತೆ ಪುನರರಂಭಿಸಲಾಗುವುದು ಎಂದು ಹೇಳಿದರು.
ಕಲ್ಮಡ್ಕ ಗ್ರಾಮಕ್ಕೆ ಬೆಳಿಗ್ಗೆ 10.30ಕ್ಕೆ ಸುಳ್ಯದಿಂದ ತೆರಳುವ ಬಸ್ಸು 2 ವರ್ಷದಿಂದ ಸ್ಥಗಿತ ವಾಗಿರುವುದನ್ನು ಮತ್ತೆ ಪ್ರಾರಂಭಿಸುವಂತೆ ಮತ್ತು ಸಂಜೆ ಪುನಃ 4.30ಕ್ಕೆ ಸುಳ್ಯದಿಂದ ಕಲ್ಮಡ್ಕ ಕ್ಕೆ ಬಸ್ಸು ಸಂಚಾರ ಪ್ರಾರಂಭಿಸುವಂತೆ ಸದಸ್ಯ ಭವಾನಿಶಂಕರ್ ಕಲ್ಮಡ್ಕ ಸಲಹೆ ನೀಡಿದರು. ಸದಸ್ಯೆ ಶ್ರೀಮತಿ ಭವಾನಿ ಬೊಮ್ಮಟ್ಟಿ ಸಹ ಇದಕ್ಕೆ ದನಿಗೂಡಿಸಿದರು. ಕಲ್ಮಡ್ಕಕ್ಕೆ ಸುಳ್ಯದಿಂದ ಬೆಳಿಗ್ಗೆ 10.30ಕ್ಕೆ ತೆರಳುವ ಬಸ್ಸು ಸಂಪರ್ಕ ವನ್ನು ಮತ್ತೆ ಪ್ರಾರಂಭಿಸುವುದಾಗಿ ಅಧಿಕಾರಿಗಳು ಉತ್ತರಿಸಿದರು.
ಅನ್ನಭಾಗ್ಯ ಪಡಿತರ ವಿತರಣೆ ಬಗ್ಗೆ ನ್ಯಾಯಬೆಲೆ ಅಂಗಡಿಗಳಲ್ಲಿ ವೇಳಾಪಟ್ಟಿ ಅಳವಡಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಲಾಯಿತು.
ನ್ಯಾಯಬೆಲೆ ಅಂಗಡಿಗಳಿಗೆ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಬೆಳ್ತಿಗೆ ಮತ್ತು ಕುಚ್ಚಲು ಅಕ್ಕಿಯನ್ನು ಸರಬರಾಜು ಮಾಡುತ್ತಿರುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧ ಪಟ್ಟಂತೆ ಐ.ಟಿ/ ಜಿ.ಎಸ್.ಟಿ ಕಾರಣಗಳಿಂದ ರಿಜೆಕ್ಟ್ ಆಗಿರುವ ಅರ್ಜಿಗಳಿಗೆ ಹಿಂಬರಹ ನೀಡುವಂತೆ ಮೇಲಧಿಕಾರಿಗಳು ಸುತ್ತೋಲೆ ಕಳುಹಿಸಿರುವ ಬಗ್ಗೆ ಸಿ.ಡಿ.ಪಿ.ಓ  ಸಭೆಗೆ ತಿಳಿಸಿದರು. ಐ.ಟಿ/ಜಿ.ಎಸ್.ಟಿ ಸಮಸ್ಯೆ ಎದುರಿಸುತ್ತಿರುವ ಪಲಾನುಭವಿಗಳು ಹೆಚ್ಚಿನವರು ಬಡ ಕುಟುಂಬ ದವರು ಆದುದರಿಂದ ಇದರ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸಭೆಯ ನಡಾವಳಿ ಕಳುಹಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಯುವನಿಧಿ ಯೋಜನೆಯ ಪೋಸ್ಟರ್ ಅನ್ನು ಅನಾವರಣ ಮಾಡಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಮಣಿಕಂಠ ಕೊಳಗೆ, ರಾಜು ನೆಲ್ಲಿಕುಮೇರಿ, ಸೋಮಶೇಖರ್ ಕೇವಳ, ವಿಜೇಶ್ ಹಿರಿಯಡ್ಕ, ರವಿ ಗುಂಡಡ್ಕ, ಶಿಲ್ಪಾ ಇಬ್ರಾಹಿಂ, ಶ್ರೀಮತಿ ಕಾಂತಿ.ಬಿ.ಎಸ್, ಶೇಖರ್ ಮನಿಯಾಣಿ ಮಂಡೆಕೋಲು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading