Ad Widget

ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ – ಗ್ಯಾರಂಟಿ ಅನುಷ್ಠಾನ ಸಮಿತಿಯ ನಿರಂತರ ಪ್ರಯತ್ನದ ಫಲದಿಂದ ದುಗ್ಗಲಡ್ಕ ಟೌನ್ ಫೀಡರ್ ಮತ್ತು ಉಬರಡ್ಕ ಗ್ರಾಮ ಸುಳ್ಯ ಮೆಸ್ಕಾಂ ಶಾಖೆಗೆ ಅಳವಡಿಕೆ

ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆ ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. “ಈ ಹಿಂದೆ ನಡೆದ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆದ ಗ್ಯಾರಂಟಿ ವಿಲೇವಾರಿ ಶಿಬಿರ ಮತ್ತು ಮಾಸಿಕ ಪ್ರಗತಿ ಪರಿಶೀಲನಾ...

ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂಬುಲೆನ್ಸ್ ಚಾಲಕ ಹನೀಫ್ ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ಶ್ರೀಮತಿ ಸೀತಾ ಅವರಿಗೆ ಸನ್ಮಾನ

ಜಯನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಜೀವ ರಕ್ಷಕ ಅಂಬುಲೆನ್ಸ್ ಚಾಲಕ ಹನೀಫ್ ಅವರನ್ನು ಬೆಂಗಳೂರಿನ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಹನೀಫ್ ಅವರು ಹಲವಾರು ಸಂದರ್ಭಗಳಲ್ಲಿ ತುರ್ತು ಸೇವೆಗಾಗಿ ಜೀವ ಹಂಗು ತೊರೆದು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದರು. ಹಾಗೂ ಕೆನರಾ ಬ್ಯಾಂಕ್ ಸುಳ್ಯದಲ್ಲಿ ಉದ್ಯೋಗಿಯಾಗಿ...
Ad Widget

ದೇವಚಳ್ಳ : ಅರಿವು ಕೇಂದ್ರದಲ್ಲಿ ಗ್ರಂಥಪಾಲಕರ ದಿನಾಚರಣೆ – ಮಕ್ಕಳಿಗೆ ಸ್ಪರ್ಧಾ ಕಾರ್ಯಕ್ರಮ

ಅರಿವು ಕೇಂದ್ರ ದೇವಚಳ್ಳದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಆ.16 ರಂದು ಆಚರಿಸಲಾಯಿತು.  ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ "ನನ್ನ ದೇಶ ನನ್ನ ಪರಿಕಲ್ಪನೆ" ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ, 5ನೇ ತರಗತಿಯಿಂದ 7ನೇ ತರಗತಿಯವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ, 3ನೇ ತರಗತಿಯಿಂದ 4ನೇ ತರಗತಿ ಯವರಿಗೆ ಭಾರತದ ಧ್ವಜ ಬಿಡಿಸಿ ಬಣ್ಣ ತುಂಬುವ...

ಅರಂತೋಡು : ದುರ್ಗಾ ಕೆಟರರ್ಸ್ ಶುಭಾರಂಭ

ಅರಂತೋಡಿನಲ್ಲಿ ರಾಮಕೃಷ್ಣ ಪಾರೆಮಜಲು & ಶುಜನ್   ಪಾರೆಮಜಲು ಮಾಲಕತ್ವದ ದುರ್ಗಾ ಕೆಟರರ್ಸ್ ಆ.22 ರಂದು ದುರ್ಗಾ ಮಾತಾ ಭಜನಾ ಮಂದಿರದಲ್ಲಿ ಶುಭಾರಂಭಗೊಂಡಿತು.   ದುರ್ಗಾ ಮಾತಾ ಭಜನಾ ಮಂದಿರದ ಅಧ್ಯಕ್ಷ  ತೀರ್ಥರಾಮ ಅಡ್ಕಬಳೆ ಪ್ರಾರ್ಥಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿ "ಕಳೆದ 10 ವರ್ಷಗಳಿಂದ ಉತ್ತಮ ಅಡುಗೆ ತಯಾರಿಸಿ ಮೆಚ್ಚುಗೆ ಪಡೆದಿದ್ದಾರೆ....

ನಾಳೆ (ಆ.23) ಅರಂತೋಡಿನಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

ಅರಂತೋಡು ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ, ಪುತ್ತೂರು ವಿಭಾಗದ ಸಹಕಾರದೊಂದಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಆಗಸ್ಟ್ 23 ರಂದು ಅರಂತೋಡಿನ ಪಟೇಲ್ಸ್ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ ಗಂಟೆ 9:00 ರಿಂದ ಆರಂಭವಾಗಲಿದೆ.ಟೋಕನ್‌ಗಳನ್ನು ಸ್ಥಳದಲ್ಲೇ ಕೊಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಕರುಣಾಕರ ಪಾಂಗಲಾಯಿರವರು ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆ

ಆಲೆಟ್ಟಿ ಗ್ರಾಮದ ಕರುಣಾಕರ ಪಾಂಗಲಾಯಿರವರು ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ 48ನೇ ಸಾಲಿನ ಮಹಾಸಭೆಯಲ್ಲಿ 2025-26ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಆಲೆಟ್ಟಿ ಗ್ರಾಮದ ತಲೆಪಳ್ಳ ನಾರಾಯಣ ನಾಯ್ಕರವರ ಪುತ್ರರಾಗಿರುವ ಇವರು ಕೇಂದ್ರ ಸರ್ಕಾರದ ನೌಕರಿಯಲ್ಲಿ ಸುಧೀರ್ಘ 40 ವರ್ಷಗಳ ಕಾಲ ಸೇವೆಗೈದು ನಿವೃತ್ತರಾದ ನಂತರ ಸಾಮಾಜಿಕ ಹಾಗೂ ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಬೆಳ್ಳಾರೆ :  5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಗ್ಲೋಬಲ್ ಸರ್ವಲೆನ್ಸ್ ಸಿಸ್ಟಮ್ ಸಂಸ್ಥೆ – ಆರಿಕೋಡಿ ಶ್ರೀಗಳಿಂದ ಆಶೀರ್ವಚನ

ಬೆಳ್ಳಾರೆಯ ಗ್ಲೋಬಲ್ ಸರ್ವಲೆನ್ಸ್ ಸಿಸ್ಟಮ್ ಸಂಸ್ಥೆ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.  ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಸಂಸ್ಥೆಗೆ ಭೇಟಿ ನೀಡಿ, ದೀಪ ಬೆಳಗಿಸಿ, ಆಶೀರ್ವಾದಿಸಿದರು.ಈ ಶುಭ ಸಂದರ್ಭದಲ್ಲಿ  ಕೂಸಪ್ಪ ಗೌಡ ಮುಗುಪ್ಪು, ಪತ್ರಕರ್ತ ಯಶ್ವಿತ್ ಕಾಳಮನೆ, ಪ್ರೇಮ್ ಸ್ಟುಡಿಯೋ ಮಾಲಕ ಪ್ರೇಮ್ ಬೆಳ್ಳಾರೆ,...

ಕೆ‌.ವಿ.ಜಿ ಆಯುರ್ವೇದ ಕಾಲೇಜಿನಲ್ಲಿ ದಿ.ಕುರುಂಜಿ ಜಾನಕಿ ವೆಂಕಟ್ರಮಣ ಗೌಡರ 13ನೇ ವರ್ಷದ ಪುಣ್ಯತಿಥಿ ಆಚರಣೆ

ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಸಹಧರ್ಮಿಣಿ ದಿವಂಗತ ಕುರುಂಜಿ ಜಾನಕಿ ವೆಂಕಟ್ರಮಣ ಗೌಡರ 13ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ನುಡಿ ನಮನ ಕಾರ್ಯಕ್ರಮವು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆ.22ರಂದು ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್(ರಿ.) ಸುಳ್ಯ ಇದರ...

ಆ.23 : ಫೋಟೋಗ್ರಾಫರ್ ಅಸೋಸಿಯೇಶನ್ ಆಯೋಜಿಸಿದ ರಾಧಾ-ಕೃಷ್ಣ ಮಕ್ಕಳ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ

ವರ್ಲ್ಡ್ ಫೋಟೋಗ್ರಾಫಿ ಡೇ ಪ್ರಯುಕ್ತ ಆಯೋಜಿಸಿದ ಫೋಟೋ ಎಕ್ಸಿಬಿಷನ್ ಮತ್ತು ಮಕ್ಕಳ ರಾಧಾ ಕೃಷ್ಣ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆಯು ಆ.23 ಶನಿವಾರದಂದು ಬೆಳಗ್ಗೆ 10.30ಕ್ಕೆ ರೋಟರಿ ಕ್ಲಬ್, ರೋಟರಿ ಇನ್ನರ್ವೀಲ್, ರೋಟರಿ ಸಿಟಿ, ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯ ಇದರ ಸಹಯೋಗದಲ್ಲಿ ರೋಟರಿ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
Loading posts...

All posts loaded

No more posts

error: Content is protected !!