Ad Widget

ಹರಿಹರ ಪಳ್ಳತ್ತಡ್ಕ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ “ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ”

ಅಂತಾರಾಷ್ಟ್ರೀಯ ಲಯನ್ಸ್, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಆ.21 ರಂದು ಹರಿಹರ ಪಳ್ಳತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ” ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ| ಶ್ರೀಮತಿ ವಿಮಲಾ ರಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿಜಯದಾಸ್ ವಾಡ್ಯಪ್ಪನಮನೆ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ದೇವಕಿ ನೆತ್ತಾರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀಮತಿ ಮೀನಾಕ್ಷಿ ರಾಮಚಂದ್ರ ಪಳಂಗಾಯ, ಶ್ರೀಮತಿ ಪಾರ್ವತಿ ಪುರುಷೋತ್ತಮ ಹಾಗೂ ಶ್ರೀಮತಿ ನಿರ್ಮಲಾ ಸುಬ್ಬಪ್ಪ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲ| ರಂಗಯ್ಯ ಶೆಟ್ಟಿಗಾರ್ ಪಿ.ಎಂ.ಜೆ.ಎಫ್ “ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಮತ್ತು ಅವರ ಬುದ್ಧಿವಂತಿಕೆಯಿಂದ ಸ್ಫೂರ್ತಿ ಪಡೆಯುವ ಮಹತ್ವದ” ಬಗ್ಗೆ ಹಾಗೂ ಲ| ರಾಮಚಂದ್ರ ಪಳಂಗಾಯ ಎಂ.ಜೆ.ಎಫ್ “ನಮ್ಮ ಹಿರಿಯರನ್ನು ಗೌರವಿಸುವ ಹಾಗೂ ಗೌರವಿಸುವ ಮಹತ್ವದ” ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಸಹಶಿಕ್ಷಕಿಯರಾದ ಶ್ರೀಮತಿ ಭವ್ಯ, ಶ್ರೀಮತಿ ಜಯಶ್ರೀ, ಶ್ರೀಮತಿ ಪವಿತ್ರ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಚೈತ್ರ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು.
ಲ| ಕೃಷ್ಣಕುಮಾರ್ ಬಾಳುಗೋಡು ಸ್ವಾಗತಿಸಿದರು.
ಲ| ವಿಷ್ಣುಪ್ರಸಾದ್ ಪಾತಿಕಲ್ಲು ಹಾಗೂ ಶ್ರೀಮತಿ ಸ್ವಾತಿ ದಿನೇಶ್ ಅತಿಥಿಗಳ ಪರಿಚಯ ಮಾಡಿದರು.
ಶ್ರೀಮತಿ ಭಾರತಿ ದಿನೇಶ್ ವಂದನಾರ್ಪಣೆ ಮಾಡಿದರು.
ಶ್ರೀಮತಿ ಗಾಯತ್ರಿ ಕೃಷ್ಣ ಕುಮಾರ್ ಬಾಳುಗೋಡು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading