Ad Widget

ಸುಳ್ಯ ಮೊಸರು ಕುಡಿಕೆ ಉತ್ಸವ : ಪ್ರಥಮ ಶಾಸ್ತಾವು ರೆಂಜಾಳ, ದ್ವಿತೀಯ ಯುವ ಕೇಸರಿ ಮುಳ್ಯ ಅಟ್ಲೂರು, ತೃತೀಯ ಹೆಚ್.ಟಿ.ಎಂ.ಸಿ. ಸುಳ್ಯ

ಸುಳ್ಯ : ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾ ವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್‌ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 12ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ.19 ರಂದು ಸುಳ್ಯದ
ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮೊಸರುಕುಡಿಕೆ ಎಣ್ಣೆ ಕಂಬ ಏರುವ ಸ್ಪರ್ದೆಯಲ್ಲಿ ಜಗದೀಶ್ ಅಡಿಗರ ಪ್ರಥಮ ಸ್ಥಾನ ಪಡೆದು ರೂ 5,000 ನಗದು ತನ್ನದಾಗಿಸಿಕೊಂಡರು.
ನಗರದಾದ್ಯಂತ ಕಟ್ಟಿದ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.15,025 ಮತ್ತು ಶಾಶ್ವತ ಫಲಕ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ, ದ್ವಿತೀಯ ಬಹುಮಾನ ರೂ.10,025 ಮತ್ತು ಶಾಶ್ವತ ಫಲಕ ಯುವ ಕೇಸರಿ ಬಳಗ ಮುಳ್ಯ ಅಟ್ಲೂರು ಹಾಗೂ ತೃತೀಯ ಬಹುಮಾನ ರೂ.7,025 ಮತ್ತು ಶಾಶ್ವತ ಫಲಕ ಹೆಚ್.ಟಿ.ಎಂ.ಸಿ ಸುಳ್ಯ ಪಡೆದುಕೊಂಡಿತು.
ಸ್ಪರ್ಧೆಯಲ್ಲಿ ವಿ.ಹೆಚ್.ಪಿ ಕರಿಕೆ, ಯುವಶಕ್ತಿ ದಾಸರಬೈಲು, ಟೀಮ್ ಛತ್ರಪತಿ ಕಡಬ, ಓಂ ಫ್ರೆಂಡ್ಸ್ ಅಜ್ಜಾವರ, ವೀರ ಸಾವರ್ಕರ್ ಆರಂಬೂರು, ಟೀಮ್ ಕಪಿಲ ಚಾರ್ವಕ, ಟೀಮ್ ವೀರ ಸಾವರ್ಕರ್ ಸುಳ್ಯ, ಅನ್ನಪೂರ್ಣ ಪವರ್ ಬಾಯ್ಸ್ ಸುಳ್ಯ ತಂಡಗಳು ಭಾಗವಹಿಸಿದ್ದವು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading