Ad Widget

ಸುಳ್ಯ : ವಿಜೃಂಭಣೆಯಿಂದ ನಡೆದ ಮೊಸರು ಕುಡಿಕೆ ಉತ್ಸವ ; “ತರುಣರು ಸಂಘಟನೆಯ ಜವಾಬ್ದಾರಿಯನ್ನು  ಹೊರಬೇಕಿದೆ, ಹಿಂದೂ ಸಮಾಜಕ್ಕೆ ನಾಲ್ಕು ಕಂಟಕವಿದೆ, ಸುಳ್ಯದ ಪ್ರತಿಯೊಂದು ಮನೆ ಮನೆಯೂ ಸಂಘಟನೆಯ ಭಾಗ” – ಚಕ್ರವರ್ತಿ ಸೂಲಿಬೆಲೆ

“ತರುಣರು ಸಂಘಟನೆಯ ಜವಾಬ್ದಾರಿಯನ್ನು  ಹೊರಬೇಕಿದೆ, ಹಿಂದೂ ಸಮಾಜಕ್ಕೆ ನಾಲ್ಕು ಕಂಟಕವಿದೆ, ಸುಳ್ಯದ ಪ್ರತಿಯೊಂದು ಮನೆ ಮನೆಯೂ ಸಂಘಟನೆಯ ಭಾಗವಾಗಿದೆ” ಎಂದು ಯುವ ಬ್ರಿಗೇಡ್ ಸಂಚಾಲಕ, ಯುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಸುಳ್ಯದಲ್ಲಿ ನಡೆದ ವಿ.ಹೆಚ್.ಪಿ ಸ್ಥಾಪನಾ ದಿನದ ಅಂಗವಾಗಿ ನಡೆದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. “ವಿಶ್ವ ಹಿಂದೂ ಪರಿಷತ್ 61ನೇ ವರ್ಷಕ್ಕೆ ಕಾಲಿರಿಸಿದೆ. ಇದನ್ನು   ಸಂಭ್ರಮದಿಂದ ಆಚರಿಸಬೇಕು ಏಕೆಂದರೇ ಈಗ ಮರಳಿ ಅರಳುವ ಸಮಯವಾಗಿದೆ. ಇದನ್ನು ಸ್ಥಾಪಿಸಿದವರು ಹಿರಿಯರಾಗಿದ್ದಾರೆ ಈಗ ತರುಣರು ಈ ಜವಾಬ್ದಾರಿಯನ್ನು  ಹೊರಬೇಕಿದೆ. ತರುಣರ ಹೊಸ ಪೀಳಿಗೆ ವಿಶ್ವ ಹಿಂದೂ ಪರಿಷತ್ ಗೆ ಸತ್ವವನ್ನು ನೀಡಬೇಕಿದೆ.
ಹಿಂದೂ ಸಮಾಜಕ್ಕೆ ನಾಲ್ಕು ದಿಕ್ಕಿನಿಂದ ಕಂಟಕ ಉಂಟಾಗಲಿದೆ. ಇಸ್ಲಾಂ, ಕ್ರಿಶ್ಚಿಯನಿಟಿ, ಮಾವೋವಾದಿ ಲೆಪ್ಟಿಸ್ಟ್ ಹಾಗೂ ಕಾಂಗ್ರೆಸ್ ಪಕ್ಷ ಇವು ನಾಲ್ಕು ಕಂಟಕಗಳು” ಎಂದರು. “ಧರ್ಮಸ್ಥಳ ಘಟನೆಯನ್ನು ಲೆಪ್ಟಿಸ್ಟ್ ಗಳು ಹೇಗೆ ಬಳಸಿಕೊಂಡಿವೆ ಎಂಬುದು ನಮಗೆ ಈಗ ಅರಿವಾಗಿರಬಹುದು. ಸುಳ್ಯದ ಪ್ರತಿಯೊಂದು ಮನೆ ಮನೆಯೂ ಸಂಘಟನೆಯ ಭಾಗವಾಗಿದೆ. ಒಂದು ಮನೆಯಿಂದ ಒಬ್ಬ ಸದಸ್ಯ ಸಂಘಟನೆಯಲ್ಲಿರುವಂತಹ ತಾಲೂಕು ಅಂತ ಇದ್ರೆ ಅದು ಸುಳ್ಯ. ಇಂದು ಸಮಾಜ ಒಂದಾಗಬೇಕಿದೆ. ನಾವೆಲ್ಲರೂ ಜಾತಿ ಭೇದ ಮರೆತು ನಮ್ಮ ಧರ್ಮ ಹಾಗೂ ಧರ್ಮಕ್ಷೇತ್ರಗಳ ಉಳಿಸಿಕೊಳ್ಳಬೇಕಿದೆ” ಎಂದರು.
ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್‌ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕರಾದ ಚಂದ್ರಶೇಖರ ತಳೂರು ದೀಪ ಪ್ರಜ್ವಲಿಸಿದರು.
ವೇದಿಕೆಯಲ್ಲಿ ಮಂಗಳೂರು ವಿಭಾಗದ ವಿ.ಹೆಚ್.ಪಿ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಪುತ್ತೂರು ಜಿಲ್ಲೆ ವಿ.ಹೆಚ್.ಪಿ ಸಹ ಕಾರ್ಯದರ್ಶಿ ಪ್ರಮೋದ್ ಕಡಬ, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಪೂರ್ವಾಧ್ಯಕ್ಷ ಸೋಮಶೇಖರ ಪೃಕ, ದೈವ ನರ್ತಕ ಸರಸಿಂಗ ಪರವ, ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ತೀರ್ಥಕುಮಾ‌ರ್ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಉಪಾಧ್ಯಕ್ಷ ಹರಿಪ್ರಸಾದ್ ಸುಲಾಯ, ಬಜರಂಗದಳ ಸಂಚಾಲಕ ಹರಿಪ್ರಸಾದ್ ಎಲಿಮಲೆ, ಸತ್ಸಂಗ ಪ್ರಮುಖ ಸತೀಶ್ ಟಿ.ಎನ್, ಕೋಶಾಧಿಕಾರಿ ನವೀನ್ ಎಲಿಮಲೆ, ಮಾತೃ ಶಕ್ತಿ ಸಂಯೋಜಕಿ ಶ್ರೀಮತಿ ರೀನಾ ಚಂದ್ರಶೇಖರ, ದುರ್ಗವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ಉಪಸ್ಥಿತರಿದ್ದರು.
ಶ್ರೀಮತಿ ಸವಿತ ಸುಂತೋಡು ಪ್ರಾರ್ಥಿಸಿದರು. ಬಜರಂಗದಳ ಸುಳ್ಯ ಪ್ರಖಂಡದ ಸಂಯೋಜಕ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. 
ಕು.ವೃಷ್ಣವಿ ರಾವ್ ವೈಯುಕ್ತಿಕ ಗೀತೆ ಪ್ರಸ್ತುತ ಪಡಿಸಿದರು. ನವೀನ್ ಎಲಿಮಲೆ ವಂದಿಸಿದರು.
ವಿಶಾಖ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading