Ad Widget

ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ನಡೆದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭ

“ಯುವ ಜನಾಂಗ ಸಂಘಟಿತರಾಗಲು ಧಾರ್ಮಿಕ ಆಚರಣೆಗಳು ಬುನಾದಿ” : ಯಶವಂತ ರೈ ಅಭಿಮತ

ಸುಬ್ರಹ್ಮಣ್ಯ : “ಧಾರ್ಮಿಕ ಆಚರಣೆಗಳು ಯುವ ಜನಾಂಗವು ಸಂಘಟಿತರಾಗಲು ಬುನಾದಿಯಾಗುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಸ್ಕಾರ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ನಡೆಸಲು ಉತ್ಸಾಹ ತೋರಬೇಕು. ಆಧುನಿಕ ಯುಗದಲ್ಲಿ ಯುವ ಜನಾಂಗವು ಧಾರ್ಮಿಕ ಆಚರಣೆಗಳತ್ತ ಮನ ಮಾಡುತ್ತಿದ್ದಾರೆ ಅನ್ನುವುದು ನಮ್ಮ ಸಂಸ್ಕೃತಿಯ ಔನತ್ಯದ ಧ್ಯೋತಕವಾಗಿದೆ. ಪ್ರಾಚೀನ ಸಾಂಸ್ಕೃತಿಕ ವಿಚಾರಧಾರೆಗಳು ಚಿರಸ್ಥಾಯಾಗಿರಲು ಕೃಷ್ಣಲೀಲೋತ್ಸವವು ಸಹಕಾರಿ. ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕಾರ ಸಂಸ್ಕೃತಿಗಳು ಅಜರಾಮರವಾಗಿ ಉಳಿಯಲು ಅಡಿಗಲ್ಲಾಗಿದೆ” ಎಂದು ನಿವೃತ್ತ ಮುಖ್ಯಗುರುಗಳಾದ ಕೆ.ಯಶವಂತ ರೈ ಹೇಳಿದರು.
ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ನಡೆದ 21ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“ಧರ್ಮ ಮತ್ತು ಸಂಸ್ಕೃತಿಯ ಜಾಗೃತಿಗಾಗಿ ಕೃಷ್ಣ ಲೀಲೋತ್ಸವವನ್ನು ಆಚರಿಸಲಾಗುತ್ತಿದೆ. ಉತ್ಸವಗಳ ಮೂಲಕ ಮಕ್ಕಳಿಗೆ ಆಟೋಟ ಮತ್ತು ಮನೋರಂಜನೆ ನೀಡುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಅದನ್ನು ಚಿರಾಯುಗೊಳಿಸುವ ಕಾರ್ಯ ನಡೆಯುತ್ತಿದೆ” ಎಂದರು.
ಗೌರವಾರ್ಪಣೆ : ಸಮಾರಂಭದಲ್ಲಿ ಕುಕ್ಕೆ ದೇವಳದ ನಿವೃತ್ತ ಕಚೇರಿ ಅಧೀಕ್ಷಕರಾದ ಪದ್ಮನಾಭ ಶೆಟ್ಟಿಗಾರ್, ಶ್ರೀ ದೇವಳದ ನಿವೃತ್ತ ಸಿಬ್ಬಂದಿಗಳಾದ ರಮೇಶ್ ಭಟ್ ಎಸ್, ವೆಂಕಟರಮಣ, ಜಯಂತಿ, ರತಿ ಶೆಟ್ಟಿ, ರಾಷ್ಟ ಮಟ್ಟದ ಕಬಡ್ಡಿ ಆಟಗಾರ ಆಶಿಶ್ ಕೆ.ವೈ ಕೋಟೆಬಾಗಿಲು ಪರವಾಗಿ ಅವರ ತಾಯಿ ಸಂಧ್ಯಾಮಣಿ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್.ಇಂಜಾಡಿ ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ಮೊಸರು ಕುಡಿಕೆ ಉತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.
ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಮಾನಾಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್.ಇಂಜಾಡಿ, ಸದಸ್ಯರಾದ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ವಿಶ್ವನಾಥ ನಡುತೋಟ, ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಸಂತೋಷ್ ಕುಲ್ಕುಂದ, ಬಿಎಂಎಸ್ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಸುಬ್ಬಪ್ಪ ಕುಲ್ಕುಂದ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ಜಯಪ್ರಕಾಶ್.ಆರ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಮಲಾ ರಂಗಯ್ಯ, ಸೀನಿಯರ್ ಚೇಂಬರ್ ಅಧ್ಯಕ್ಷರಾದ ವೆಂಕಟೇಶ್ ಎಚ್.ಎಲ್ ಮುಖ್ಯ ಅತಿಥಿಗಳಾಗಿದ್ದರು.
ಸಮಿತಿಯ ಸ್ಥಾಪಕಾಧ್ಯಕ್ಷರಾದ ಉಮೇಶ್ ಕೆ.ಎನ್, ಕಾರ್ಯದರ್ಶಿ ನಿತಿನ್ ಭಟ್ ವೇದಿಕೆಯಲ್ಲಿದ್ದರು.
ಸಮಿತಿ ಸದಸ್ಯರಾದ ರತ್ನಾಕರ.ಎಸ್ ಬಹುಮಾನಿತರ ಪಟ್ಟಿ ವಾಚಿಸಿದರು.
ಪೂರ್ವಾಧ್ಯಕ್ಷರಾದ ಡಾ.ಸಿದ್ದಲಿಂಗ ಎಸ್.ಎಸ್ ಕಾರ್ಯಕ್ರಮ ನಿರೂಪಿಸಿದರು.
ಪೂರ್ವಾಧ್ಯಕ್ಷರಾದ ದೀಪಕ್ ನಂಬಿಯಾರ್ ವಂದಿಸಿದರು. ಶ್ರೀಕೃಷ್ಣ ಶರ್ಮ ಸಹಕರಿಸಿದರು.
ಕಾರ್ಯಕ್ರಮದ ಬಳಿಕ ಪೂರ್ವಾಧ್ಯಕ್ಷರಾದ ಶ್ರೀಧರ ಭಟ್ ಮತ್ತು ನಿತಿನ್ ಭಟ್ ಸತತ 21ನೇ ವರ್ಷ ಭಕ್ತಾಭಿಮಾನಿಗಳಿಗೆ ಉಪಹಾರವನ್ನು ವಿತರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading