Ad Widget

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ಸುಳ್ಯ ಇದರ ವತಿಯಿಂದ ಗುರುವಂದನಾ ಕಾರ್ಯಕ್ರಮ

ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್(ರಿ.) (ಎನ್.ಎಸ್.ಎಸ್. ಹಿರಿಯ ಸ್ವಯಂ ಸೇವಕರ ಸಂಘ ಕೆ.ವಿ‌.ಜಿ ಪಾಲಿಟೆಕ್ನಿಕ್ ಸುಳ್ಯ) ಇದರ ವತಿಯಿಂದ  ಗುರುವಂದನಾ ಕಾರ್ಯಕ್ರಮ ಹಾಗೂ ಸಂಘದ ಪ್ರಥಮ ತೈಮಾಸಿಕ  ಸಭೆಯನ್ನು  ಅರಂಬೂರಿನ “ವಿಕಸನ” ಮನೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರು, ಕೆ.ವಿ.ಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದಬಾಲಕೃಷ್ಣ ಗೌಡ ಬೊಳ್ಳೂರು, ಗೌರವ ಸಲಹೆಗಾರರುಗಳಾದ  ಕೆ.ವಿ.ಜಿ...

ಬೆಳ್ಳಾರೆ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ರೋಟರಿ ಕ್ಲಬ್ ಬೆಳ್ಳಾರೆ ವತಿಯಿಂದ ಸಮವಸ್ತ್ರ ಕೊಡುಗೆ

ಬೆಳ್ಳಾರೆ ರೋಟರಿ ಕ್ಲಬ್ ವತಿಯಿಂದ ಬೆಳ್ಳಾರೆ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಆ.15 ರಂದು ಸಮವಸ್ತ್ರವನ್ನು ವಿತರಿಸಲಾಯಿತು.ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ.ಕೆ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ.ಎಲ್ ರೈ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ರೋಟರಿ ಕ್ಲಬ್ ಪೂರ್ವಾಧ್ಯಕ್ಷರುಗಳಾದ ಶಶಿಧರ್ ಬಿ ಕೆ, ರವೀಂದ್ರ ಗೌಡ, ಚಂದ್ರಶೇಖರ ರೈ...
Ad Widget

ಐವರ್ನಾಡಿನಿಂದ ಕಳ್ಳತನವಾಗಿದ್ದ ಪಿಕಪ್ ಪತ್ತೆ – ಪೋಲೀಸರ ಕಾರ್ಯಕ್ಕೆ ಮೆಚ್ಚುಗೆ

ಐವರ್ನಾಡಿನ ಎನ್.ಎಸ್.ಸೌಂಡ್ಸ್ & ಲೈಟಿಂಗ್ಸ್, ಶಾಮಿಯಾನದ ಮಾಲಕ ಸುನಿಲ್‌ ನಿಡ್ಡಾಜೆಯವರ ಪಿಕಪ್ ಆ.11 ರಂದು ತನ್ನ ಅಂಗಡಿ ಎದುರು ನಿಲ್ಲಿಸಿದ್ದರು. ಅಂದು ರಾತ್ರಿ ಪಿಕಪ್ ಕಾಣೆಯಾಗಿತ್ತು. ಈ ಬಗ್ಗೆ ಅವರು ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಮುಖ್ಯ ರಸ್ತೆಯಲ್ಲಿರುವ ಸಿ.ಸಿ.ಕೆಮರಾಗಳನ್ನು ಪರಿಶೀಲಿಸಿದ್ದರು. ಇಂದು ಕಾರ್ಕಳ ತಾಲೂಕಿನ ಮುಡೂರು ಎಂಬಲ್ಲಿ ಪಿಕಪ್...

ಸುಳ್ಯ : ಮೊಸರು ಕುಡಿಕೆ ಉತ್ಸವ ಎಣ್ಣೆ ಕಂಬ ಏರುವ ಸ್ಪರ್ಧೆಯಲ್ಲಿ ಜಗದೀಶ್ ಅಡಿಗರ ಪ್ರಥಮ

ಸುಳ್ಯ ಮೊಸರು ಕುಡಿಕೆ ಉತ್ಸವ ಎಣ್ಣೆ ಕಂಬ ಏರುವ ಸ್ಪರ್ಧೆಯಲ್ಲಿ ಜಗದೀಶ್ ಅಡಿಗರ ಅರಂತೋಡು ಪ್ರಥಮ ಸ್ಥಾನ ಗಳಿಸಿದ್ದು ರೂ. 5000 ಬಹುಮಾನ ಪಡೆದಿದ್ದಾರೆ.

ಪಂಜ : ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿದ ಮಕ್ಕಳು ; ಪೇಪರ್ ಕವರ್ ತಯಾರಿಸಿ ಹಸ್ತಾಂತರ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ “ಪ್ಲಾಸ್ಟಿಕ್" ಮುಕ್ತವಾಗಿಸುವ ನೆಲೆಯಲ್ಲಿ ಶ್ರೀಕ್ಷೇತ್ರದ ಮಕ್ಕಳ ಭಜನಾ ತಂಡದ ಮಕ್ಕಳಿಂದ ಪ್ರಸಾದ ವಿತರಿಸುವ ಕಾಗದದ ಕವರ್ ನ್ನು ತಯಾರಿಸಿ ನೀಡಿದರು. ಪುಟ್ಟ ಸೇವೆಯಾದರೂ ಅರ್ಥಪೂರ್ಣವಾಗಿಸಿದರು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ದೇಗುಲದ ಅರ್ಚಕರಾದ ರಾಮಚಂದ್ರ ಭಟ್ ಶ್ರೀದೇವರಿಗೆ ಪ್ರಾರ್ಥನೆ ಸಲ್ಲಿಸಿ ಮಕ್ಕಳಿಗೆ ಪ್ರಸಾದ ನೀಡಿದರು.

ನಡುಗಲ್ಲು : ಜವಾಹರ್ ಯುವಕ ಮಂಡಲದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಜವಾಹರ್ ಯುವಕ ಮಂಡಲ(ರಿ.) ನಡುಗಲ್ಲು ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಆ.17 ಭಾನುವಾರದಂದು ನಡುಗಲ್ಲು ವಠಾರದಲ್ಲಿ ನಡೆಯಿತು.ಆಟೋಟ ಸ್ಪರ್ಧೆಗಳನ್ನು ಯುವಕ ಯುವತಿ ಮಂಡಲದ ವಠಾರದಲ್ಲಿ ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಸೇವಾ ಟ್ರಸ್ಟ್(ರಿ.) ನಡುಗಲ್ಲು ಇದರ ಅಧ್ಯಕ್ಷರಾದ ರಾಮಚಂದ್ರ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಅಂಗನವಾಡಿ ಮಕ್ಕಳಿಂದ ಹಿಡಿದು ಪುರುಷರ ಹಾಗೂ...

ಬಳ್ಪ : ಆ.31 ರಂದು ಉಚಿತ ವೈದ್ಯಕೀಯ ಶಿಬಿರ

(ವರದಿ : ಉಲ್ಲಾಸ್ ಕಜ್ಜೋಡಿ)ರೋಟರಿ ಕ್ಲಬ್ ಸುಬ್ರಹ್ಮಣ್ಯ, ಗ್ರಾಮ ಪಂಚಾಯತ್ ಬಳ್ಪ, ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ, ವಿಕ್ರಮ ಯುವಕ ಮಂಡಲ ಬಳ್ಪ, ಧರ್ಮಶಾಸ್ತಾವೂ ಭಜನಾ ಮಂಡಳಿ ಬಳ್ಪ ಇವುಗಳ ಆಶ್ರಯದಲ್ಲಿ ಕೆ.ವಿ.ಜಿ ವೈದ್ಯಕೀಯ ಆಸ್ಪತ್ರೆ ಮತ್ತು ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ ಆ.31 ರಂದು ಬಳ್ಪ ಸರಕಾರಿ ಹಿರಿಯ ಪ್ರಾಥಮಿಕ...

ಇಂದು ಸುಳ್ಯದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ – ಸಮಾರೋಪ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿ

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾ ವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 12ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಇಂದು (ಆ.19) ಸುಳ್ಯದಲ್ಲಿ ನಡೆಯಲಿದೆ. ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರು ಆ.19...
error: Content is protected !!