Ad Widget

ಸುಳ್ಯ : ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ಮಹಾಸಭೆ – ಅಧ್ಯಕ್ಷರಾಗಿ ಶರತ್ ಅಡ್ಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ ಪುನರಾಯ್ಕೆ



ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ಮಹಾಸಭೆ ಆಗಸ್ಟ್ 14 ರಂದು ಜರಗಿತು. ಸಂಘದ ಅಧ್ಯಕ್ಷರಾದ ಶರತ್ ಅಡ್ಯಡ್ಕ ಅರಂತೋಡು ಸಭೆಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಉದ್ಘಾಟನೆಯನ್ನು ಗೌರವ ಅಧ್ಯಕ್ಷರಾದ ಶಿವಪ್ರಸಾದ್ ಕೆ ಜೆ ಕೊಡಿಯಾಲಬೈಲು ನೆರವೇರಿಸಿದರು. ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯ ವರದಿಯನ್ನು ಪ್ರದೀಪ್ ಪಂಜ ವಾಚಿಸಿದರು. ಕೋಶಾಧಿಕಾರಿ ರಫೀಕ್ ಬಿ ಎಮ್ ಲೆಕ್ಕ ಪತ್ರ ಮಂಡಿಸಿದರು
ಸಂಘದ ಉಪಾಧ್ಯಕ್ಷರಾದ ಉನೈಸ್ ಪೆರಾಜೆ, ಮೀಡಿಯಾ ಕಾರ್ಯದರ್ಶಿಯಾದ ರಫೀಕ್ ಬಾಳೆಮಕ್ಕಿ ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಕೊಡಿಯಲ್ ಬೈಲು, ಅಧ್ಯಕ್ಷರಾಗಿ ಶರತ್ ಅಡ್ಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ ,ಕೋಶಾಧಿಕಾರಿಯಾಗಿ ರಫೀಕ್ ಬಿ ಎಂ ಎ ,ಉಪಾಧ್ಯಕ್ಷರಾಗಿ ಉನೈಸ್ ಪೆರಾಜೆ , ಜೊತೆ ಕಾರ್ಯದರ್ಶಿ ಮಿಥುನ್ ಸುಳ್ಯ ,ಕಾರ್ಯದರ್ಶಿಯಾಗಿ ಪುನೀತ್ ಸಂಕೇಶ ಕುಕ್ಕುಜಡ್ಕ, ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ, ಮೀಡಿಯಾ ಕಾರ್ಯದರ್ಶಿ ಅಬ್ದುಲ್ ರಝಾಕ ( ಅಚ್ಚು ), ರೆಸ್ಕ್ಯೂ ಕಾರ್ಯದರ್ಶಿ ಬಷೀರ್ ಆರ್ ಬಿ., ಕಾನೂನು ಸಲಹೆಗಾರರಾಗಿ ಕೇಶವ ಚಂದ್ರ ಭಟ್ ಬೆಳ್ಳಾರೆ, ಮತ್ತು ವಿಭಾಗವಾರು ಸಹಾಯಕ ಕಾರ್ಯದರ್ಶಿಗಳಾಗಿ ರಫೀಕ್ ಬಾಳೆಮಕ್ಕಿ (ಪೈನಾನ್ಸಿಯಲ್) ಶಮೀರ್ ಸಿ ಎ ( ಸಂಘಟನೆ) , ಶರತ್ ಕಲ್ಲುಗುಂಡಿ (ರೆಸ್ಕ್ಯೂ), ಉದಯ ಪಂಜ (ಮಿಡಿಯಾ) ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಗೆ ವಿನಯ್ ಅರಂತೋಡು,ಹಮೀದ್ ಬೆಳ್ಳಾರೆ,ಸಿದ್ದೀಕ್ ಜಟ್ಟಿಪಳ್ಳ,ಹನೀಫ್ ಜಯನಗರ, ಜಯಪ್ರಕಾಶ್ ನೆಕ್ರಾಜೆ, ಪ್ರಶಾಂತ, ಸೀತಾರಾಮ ಮಡಿಕೇರಿ, ಹಿಮಕರ ಊರುಬೈಲು, ಪ್ರದೀಪ್ ಪಂಜ, ಪ್ರಥ್ವಿರಾಜ್ ಬೆಳ್ಳಾರೆ, ಕಿರಣ್ ಕುಮಾರ್ ಸುಳ್ಯ, ಸದಾಶಿವ ಬೆಳ್ಳಾರೆ, ಅನುಪ್ ಬೆಳ್ಳಾರೆ, ಬಾಲಸುಬ್ರಹ್ಮಣ್ಯಂ ದುಗ್ಗಲಡ್ಕ ಇವರನ್ನು ಅಯ್ಕೆ ಮಾಡಲಾಯಿತು.
ಪ್ರ.ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿ, ಕಾರ್ಯದರ್ಶಿ ಪುನೀತ್ ಸಂಕೇಶ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading