Ad Widget

ಸರಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ 79ನೇ ಸ್ವಾತಂತ್ರೋತ್ಸವ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ

ಸರಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ 79ನೇ ಸ್ವಾತಂತ್ರೋತ್ಸವ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಸ್ಮಾರ್ಟ್ ಟಿವಿ ಉದ್ಘಾಟನೆ ಮತ್ತು ನೀರಿನ ಟ್ಯಾಂಕ್ ಕಾಮಗಾರಿಗೆ ಗುದ್ದಲಿ ಪೂಜೆ ಆ.15 ರಂದು ನಡೆಯಿತು.
ಧ್ವಜಾರೋಹಣ ವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕಣೆಮರಡ್ಕ ರವರು ನೆರವೇರಿಸಿದರು.
ಅತಿಥಿಗಳಾಗಿ ಅವಿನಾಶ್ ಡಾಕ್ಟರ್ ಅಜ್ಜಾವರ, ಅಬ್ದುಲ್ ರಹಿಮಾನ್ ಸಂಕೇಶ್, ಬಾಲಕೃಷ್ಣ ಮಾಸ್ತರ್ ಅಜ್ಜಾವರ, ಯಶೋಧರ ಮಾಸ್ತರ್ ನಾರಾಲು, ಜಗದೀಶ್ ಮಂಡೆಕೋಲು, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶೌಕತ್ ಅಲಿ, ಚನಿಯ ಕಲ್ತಡ್ಕ, ಗುರುರಾಜ್ ಅಜ್ಜಾವರ, ಮಧುರಾ ಮಂಡೆಕೋಲು, ಶಶ್ಮಿ ಭಟ್ ಅಜ್ಜಾವರ, ಸುಜಾತ ಕರ್ಲಪ್ಪಾಡಿ, ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ಲಾ ಅಜ್ಜಾವರ, ಸದಸ್ಯರಾದ ರಾಹುಲ್ ಅಡ್ಪಂಗಾಯ ರವರು ಅತಿಥಿಗಳಾಗಿ ಭಾಗವಹಿಸಿದ್ದರು.
ಮುಖ್ಯೋಪಾಧ್ಯಾಯರಾದ  ಗೋಪಿನಾಥ್ ಮೆತ್ತಡ್ಕ  ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಕ್ಷಕಿ ಉಮಾವತಿಯವರು ನಿರೂಪಣೆ ಮಾಡಿದರು.
ಶಿಕ್ಷಕಿ ರೇವತಿಯವರು ವಂದನಾರ್ಪಣೆ ಮಾಡಿದರು.
ಅಕ್ಷರದಾಸೋಹ  ಮುಖ್ಯ ಅಡುಗೆಯವರಾಗಿದ್ದು ನಿವೃತ್ತಿ ಹೊಂದಿದ ಧರ್ಮಾವತಿಯವರನ್ನು ಮತ್ತುನಿವೃತ್ತ ಶಿಕ್ಷಕರುಗಳಾದ ಬಾಲಕೃಷ್ಣ ಮಾಸ್ತರ್, ಯಶೋಧರ ಮಾಸ್ತರ್ ಮತ್ತು ಪದ್ಮನಾಭ ಮಾಸ್ತರ್ ಅವರನ್ನು  ಸನ್ಮಾನಿಸಲಾಯಿತು.
ಪ್ರೌಢಶಾಲೆಯ 2001-02 ಶೈಕ್ಷಣಿಕ ವರ್ಷದ 10ನೆಯ ತರಗತಿ ವಿದ್ಯಾರ್ಥಿಗಳು ತಮ್ಮ ಅಗಲಿದ ಸಹಪಾಠಿಗಳಾದ ಶುಭಾಶಿನಿ, ಸೀತಾರಾಮ ಮತ್ತು ಶ್ರೀಲತಾ ರವರ ಸ್ಮರಣಾರ್ಥ ಎರಡು ಸ್ಮಾರ್ಟ್ ಟಿವಿಗಳನ್ನು ಶಾಲೆಗೆ ಕೊಡುಗೆಯಾಗಿ  ನೀಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ದೇವಸ್ಥಾನದ ಆಡಳಿತ ಟ್ರಸ್ಟಿ ಲೀಲಾ ಮನಮೋಹನ್ ರವರ ಸಹಕಾರದೊಂದಿಗೆ ಸಿಹಿ ತಿಂಡಿ ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading