Ad Widget

ಪಂಜ : ಲಯನ್ಸ್ ಕ್ಲಬ್ ಹಾಗೂ ಕಂದಾಯ ಇಲಾಖೆ ನಾಡಕಛೇರಿಯ ಜಂಟಿ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಧ್ವಜಸ್ತಂಭ ಕೊಡುಗೆ

(ವರದಿ : ಉಲ್ಲಾಸ್ ಕಜ್ಜೋಡಿ) ಲಯನ್ಸ್ ಕ್ಲಬ್ ಪಂಜ ಹಾಗೂ ಕಂದಾಯ ಇಲಾಖೆ ನಾಡಕಛೇರಿ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಆ.15 ರಂದು ಪಂಜ ನಾಡಕಛೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಧ್ವಜಸ್ತಂಭ ಕೊಡುಗೆ ಕಾರ್ಯಕ್ರಮ ನಡೆಯಿತು.
ನೂತನ ಧ್ವಜಸ್ತಂಭದ ಉದ್ಘಾಟನೆಯನ್ನು ಉಪ ತಹಶೀಲ್ದಾರ್ ಚಂದ್ರಕಾಂತ್.ಎಂ.ಆರ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಾಗೇಶ್ ಕಿನ್ನಿಕುಮೇರಿ ಧ್ವಜಾರೋಹಣವನ್ನು ನೆರವೇರಿಸಿದರು.
ವೇದಿಕೆಯಲ್ಲಿ ಪಂಜ ಹೋಬಳಿ ಕಂದಾಯ ನಿರೀಕ್ಷಕರಾದ ರಂಜನ್ ಕಲ್ಕುದಿ, ಲಯನ್ಸ್ ವಲಯಾಧ್ಯಕ್ಷರಾದ ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿ ಕರುಣಾಕರ ಎಣ್ಣೆಮಜಲು, ಕೋಶಾಧಿಕಾರಿ ಲ| ವಾಸುದೇವ ಮೆಲ್ಪಾಡಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಲ| ಸಂತೋಷ್ ಜಾಕೆ ಉಪಸ್ಥಿತರಿದ್ದರು.
ಲ| ಸಂತೋಷ್ ಜಾಕೆ ಸ್ವಾಗತಿಸಿದರು.
ಲ| ತುಕಾರಾಮ ಏನೆಕಲ್ಲು ಧ್ವಜಾರೋಹಣ ಕಾರ್ಯಕ್ರಮವನ್ನು ನಿರೂಪಿಸಿದರು.
ವಾಸುದೇವ ಮೆಲ್ಪಾಡಿ ವಂದಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು, ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading