Ad Widget

ಗುತ್ತಿಗಾರು ಸರಕಾರಿ ಪಿ.ಎಂ.ಶ್ರೀ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸರಕಾರಿ ಮಾದರಿ ಹಿರಿಯ ಪಿಎಂ ಶ್ರೀ ಶಾಲೆ ಗುತ್ತಿಗಾರು ಇಲ್ಲಿ ಆಗಸ್ಟ್ 15 ರಂದು 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆಯನ್ನು ಮಾಡಲಾಯಿತು.ಧ್ವಜಾರೋಹಣವನ್ನು ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ನೆರವೇರಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಬಲಿದಾನಗೈದ ನೇತಾರರನ್ನು ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಮಾವತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಯಾನಂದ...

ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ವಿಕಾಸ ಸಭಾಭವನದ ಎದುರು ಭಾರತದ 79ನೇ ಸ್ವಾತಂತ್ರೋತ್ಸವದ  ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿಡಿಓ ಶ್ಯಾಮ್ ಪ್ರಸಾದ್, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad Widget

ದೇವಚಳ್ಳ ಗ್ರಾಮ ಪಂಚಾಯತ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗ್ರಾಮ ಪಂಚಾಯತ್ ದೇವಚಳ್ಳದಲ್ಲಿ ಧ್ವಜಾರೋಹಣವನ್ನು ಪ್ರೇಮ ಚನಿಯಪ್ಪ ಕಲ್ಲುಪಣೆ, LCRP ಸಂಜೀವಿನಿ ಸ್ವ-ಸಹಾಯ ಸಂಘ ಇವರು ನೆರವೇರಿಸಿದರು. ನಂತರ ಅಮೃತ ಸರೋವರ ಕಂದ್ರಪ್ಪಾಡಿ ಬಳಿ ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ಹಿರಿಯಡ್ಕರವರು ಧ್ವಜಾರೋಹಣ ನೆರೆವೇರಿಸಿದರು.ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಪಂಚಾಯತ್ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿ...

ಬೆಳ್ಳಾರೆ : ಝಕರಿಯ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬೆಳ್ಳಾರೆ ಝಕರಿಯ ಜುಮುಅ: ಮಸೀದಿಯಲ್ಲಿ79 ನೇ ಸ್ವಾತಂತ್ರ್ಯ ದಿನಾಚರಣೆ ಆಯಿತು. ಮುಹಮ್ಮದ್ ನವವಿ ಮುಂಡೋಳೆ ದಿಕ್ಸೂಚಿ ಭಾಷಣ ಮಾಡಿದರು. ಹಿದಾಯತುಲ್ ಇಸ್ಲಾಂ ಹೈಯರ್ ಸೆಖೆಂಡರಿ ಮದರಸ ಬೆಳ್ಳಾರೆಯ ವಿದ್ಯಾರ್ಥಿಗಳು ಶಿಕ್ಷಕರು ಇಲ್ಲಿ ಬಂದಿದ್ದರು.ಮಸೀದಿ ಖತೀಬರಾದ ನಸೀಹ್ ದಾರಿಮಿ ಪ್ರಾರ್ಥನೆ ನೀಡಿದರು. ಮಸೀದಿಯ ಆಡಳಿತ‌ ಖೊಮ್ಮಿಟೆ ಅಧ್ಯಕ್ಷ ಯು.‌ಹೆಚ್ ಅಬೂಬಖರ್ ಮಂಗಳ ಮತ್ತು ಉಪಾಧ್ಯಕ್ಷ ಅಬ್ದುಲ್ ಖಾದರ್...

ಬೆಳ್ಳಾರೆ ಗ್ರಾಮ ಪಂಚಾಯತ್ ನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ಳಾರೆ ಗ್ರಾಮ ಪಂಚಾಯತಿನಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು‌. ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ  ಧ್ವಜಾರೋಹಣ ನೆರವೇರಿಸಿದರು. ಪಂಚಾಯತ್ ಉಪಾಧ್ಯಕ್ಷರು ಸರ್ವ ಸದಸ್ಯರು ಪಿ.ಡಿ.ಒ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ,ಅಮರ ಸುಳ್ಯ ಸಮರ ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್...

ಏರಣಗುಡ್ಡೆಯಲ್ಲಿ 79 ನೇ ಸ್ವತಂತ್ರ ದಿನಾಚರಣೆ

ಗುತ್ತಿಗಾರು ಗ್ರಾಮದ ಏರಣಗುಡ್ಡೆ ಯಲ್ಲಿ 79 ನೇ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು.  ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪುಟ್ಟಮ್ಮ ರವರು ಧ್ವಜಾರೋಹಣ ನೆರವೇರಿಸಿದರು.  ಬಿಟ್ಟಿ ನೆಡುನಿಲಂ ರವರು ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.  ಅಚ್ಚುತ ಮಲ್ಕಜೆ ಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸೇರಿದ ಎಲ್ಲರಿಗೂ ಸಿಹಿ ಹಂಚಲಾಯಿತು.

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯ ಸ್ವಾತಂತ್ರ್ಯ ದಿನಾಚರಣೆ

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಿಂದ  ವಿದ್ಯಾಲಯದವರೆಗೆ ಅದ್ದೂರಿಯ ಮೆರವಣಿಗೆಯಲ್ಲಿ ಬಂದು ನಂತರ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣವನ್ನು ವಾಯು ಸೇನೆಯ ನಿವೃತ್ತ ಯೋಧರಾದ ಶ್ರೀ ಜೆ.ಪಿ.ಎಂ ಚೆರಿಯನ್ ನೆರವೇರಿಸಿದರು.  ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಮಾಸ್ಟರ್  ಅಭಿನಂದನಾ ಶರ್ಮ ವಹಿಸಿದ್ದರು. ಹಾಗೆ ಧ್ವಜಾರೋಹಣ ನೆರವೇರಿಸಿದ ಶ್ರೀ...

ಹರಿಹರ ಪಳ್ಳತ್ತಡ್ಕ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಹರಿಹರ ಪಳ್ಳತ್ತಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.15 ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಿಜಯದಾಸ್ ವಾಡ್ಯಪ್ಪನಮನೆ ಧ್ವಜಾರೋಹಣವನ್ನು ನೆರವೇರಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಶ್ರೀಮತಿ ಭವ್ಯ ರವರು “ಸ್ವಾತಂತ್ರ್ಯ ದಿನಾಚರಣೆಯ ಮಹತ್ವ” ದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ  ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು...

ಬೆಳ್ಳಾರೆ : ಬ್ರಿಟಿಷರ ವಿರುದ್ಧ ಹೋರಾಟ ನಡೆದಿದ್ದ ಐತಿಹಾಸಿಕ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆದಿದ್ದ ಐತಿಹಾಸಿಕ ಸ್ಥಳ ಬೆಳ್ಳಾರೆ ಬಂಗ್ಲೆಗುಡ್ಡೆಯ ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷೆ ನಮಿತಾ ಎಲ್ ರೈ ಧ್ವಜಾರೋಹಣ ನೆರವೇರಿಸಿದರು. ಸುಳ್ಯ ಅಮರ ಸಮರ ಹೋರಾಟ ಸಮಿತಿ ಹಾಗೂ ಬೆಳ್ಳಾರೆಯ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ವತಿಯಿಂದ ಐತಿಹಾಸಿಕ ಕಾರ್ಮಕ್ರಮ ನಡೆಯಿತು.ಅರೆಭಾಷೆ ಅಖಡೆಮಿ ಅಧ್ಯಕ್ಷರಾದ...

ಸುಬ್ರಹ್ಮಣ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಸುಬ್ರಹ್ಮಣ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಸಪಲ್ಯ ರವರು ಧ್ವಜಾರೋಹಣವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಸಹಾಯಕ ಇಂಜಿನಿಯರ್ ಚಿದಾನಂದ.ಕೆ, ಸಹಾಯಕ ಇಂಜಿನಿಯರ್ ಹರಿಕೃಷ್ಣ, ಸಹಾಯಕ ಲೆಕ್ಕಾಧಿಕಾರಿ ಗಣೇಶ್, ಕಿರಿಯ ಇಂಜಿನಿಯರ್ ಬಾಲಕೃಷ್ಣ, ಕಿರಿಯ ಇಂಜಿನಿಯರ್ ಸಬ್ ಸ್ಟೇಷನ್ ಜೆ.ಇ ಸುನೀತಾ ಹಾಗೂ ಪಂಜ ಶಾಖೆಯ ಸಿಬ್ಬಂದಿಗಳು, ಗುತ್ತಿಗಾರು ಶಾಖೆಯ...
Loading posts...

All posts loaded

No more posts

error: Content is protected !!