Ad Widget

ನೆತ್ತರಕೆರೆ ತುಳು, ಕನ್ನಡ ಸಿನೆಮಾ ಆ.29ರಂದು ತೆರೆಗೆ

ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ಲಂಚುಲಾಲ್.ಕೆ.ಎಸ್ ನಿರ್ಮಾಣ ಮಾಡಿರುವ, ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ “ನೆತ್ತರಕೆರೆ” ತುಳು, ಕನ್ನಡ ಸಿನಿಮಾ ಆಗಸ್ಟ್ 29 ರಂದು ಬಿಡುಗಡೆಯಾಗಲಿದೆ. 
ಬಹು ದೊಡ್ಡ ತಾರಾಂಗಣ ಇರುವ ಈ ಸಿನಿಮಾ ಟೀಸರ್ ನಿಂದಲೆ ಕುತೂಹಲ ಹುಟ್ಟಿಸಿದೆ.
ತಾಂತ್ರಿಕವಾಗಿ ಛಾಯಾಗ್ರಹಣ ಉದಯ ಬಲ್ಲಾಲ್,  ವಿನೋದ್ ರಾಜ್ ಕೋಖಿಲ ರವರ ಸಂಗೀತ ನಿರ್ದೇಶನ, ಕಾರ್ತಿಕ್ ಮುಲ್ಕಿ ಸಹಕಾರ,  ಗಣೇಶ್ ನೀರ್ಚಾಲ್ ಸಂಕಲನ, ಸಾಹಸ ಮಾಸ್ ಮಾದ, ಟೈಗರ್ ಶಿವು ಮತ್ತು ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಯತೀಶ್ ಪೂಜಾರಿ ಸಹಕರಿಸಿದ್ದಾರೆ.
ಸಿನಿಮಾದ ನಿರ್ಮಾಣ ವ್ಯವಸ್ಥಾಪಕರಾಗಿ ರಾಜೇಶ್ ಕುಡ್ಲ ಹಾಗೂ ವಿಜಯ್ ಮಯ್ಯ, ನಿರ್ದೇಶನ ತಂಡದಲ್ಲಿ ಜಯರಾಜ್ ಪೂಜಾರಿ, ಅವಿನಾಶ್.ಎಸ್ ಆಪ್ತ, ಕಾರ್ತಿಕ್ ಜಯಚಂದ್ರನ್‌, ತುಳಸಿದಾಸ್ ಮಂಜೇಶ್ವರ, ಪತ್ರಿಕೋದ್ಯಮ ಜಗನ್ನಾಥ ಶೆಟ್ಟಿ ಬಾಳ ಸಹಕಾರ ನೀಡಿದ್ದಾರೆ. ಮೇಕಪ್ ಚೇತನ್, ಕಲೆ ವಿಪಿನ್ ಆರ್ಟ್ಸ್, ಪ್ರಚಾರ ಕಲೆ ದೇವಿ ರೈ, ಕಟ್ಟಿಂಗ್ ಮೀಡಿಯಾ ಕಾರ್ತಿಕ್, ಡಿ.ಐ ಮತ್ತು ವಿ.ಎಫ್.ಎಕ್ಸ್ ಸುಪ್ರೀತ್ ಬಿ.ಕೆ, ಡಿ.ಟಿ.ಎಸ್ ನವೀನ್ ರೈ  ಕಾರ್ಯ ನಿರ್ವಹಿಸಿದ್ದಾರೆ.
ಇದು ತುಳುವಿನ 150ನೇ ಸಿನಿಮಾವಾಗಿದ್ದು, ಪ್ರಮುಖವಾಗಿ ಬಹು ಭಾಷಾ ನಟ ಸುಮನ್ ತಲ್ವಾರ್ ಪ್ರಥಮ ಬಾರಿಗೆ ತುಳು ಸಿನಿಮಾವೊಂದರಲ್ಲಿ ಅಭಿನಯಿಸಿರುವುದು ವಿಶೇಷ, ಹಾಗೂ ಈ ಸಿನಿಮಾದಲ್ಲಿ ಬೆಳ್ಳಾರೆಯ ಬಾಯಂಬಾಡಿಯ ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ನಟಿ ಭವ್ಯಶ್ರೀ ಪೂಜಾರಿ ಅವರು ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.
ಇದರೊಂದಿಗೆ ನಾಯರನಾಗಿ ಸ್ವರಾಜ್ ಶೆಟ್ಟಿ, ನಾಯಕಿಯಾಗಿ ದಿಶಾಲಿ ಪೂಜಾರಿ, ಅನಿಲ್ ರಾಜ್ ಉಪ್ಪಳ, ಪುಷ್ಪರಾಜ್ ಬೊಳ್ಳಾರ್, ಮನೀಶ್ ಶೆಟ್ಟಿ, ಉತ್ಸವ್ ವಾಮಂಜೂರ್, ಯುವ ಶೆಟ್ಟಿ, ಪೃತ್ವಿನ್ ಪೊಳಲಿ, ನೀತ್ ಪೂಜಾರಿ, ಚಂದ್ರಶೇಖರ್ ಸಿದ್ಧಕಟ್ಟೆ, ನಮಿತಾ ಕಿರಣ್ ಮೊದಲಾದವರು ಪಾತ್ರಕ್ಕೆ ಜೀವತುಂಬಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading