Ad Widget

ಮರ್ಕಂಜ : “ಆಟಿದ ಗೌಜಿ” ಕಾರ್ಯಕ್ರಮ

ಸರ್ಕಾರಿ ಪ್ರೌಢಶಾಲೆ ಮರ್ಕಂಜ ಹಾಗೂ ಶ್ರೀ ಗಜಾನನ ಯುವತಿ ಮಂಡಲ(ರಿ.)ಬೊಮ್ಮಾರು ಇವರ ಜಂಟಿ ಆಶ್ರಯದಲ್ಲಿ ಮರ್ಕಂಜ ಸರ್ಕಾರಿ ಪ್ರೌಢಶಾಲೆಯಲ್ಲಿ ಆ.09 ರಂದು “ಆಟಿದ ಗೌಜಿ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಹಾಗೂ ಯುವತಿ ಮಂಡಲದ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ರೀತಿಯ ಜಾನಪದ ಕ್ರೀಡೆಗಳ ಸ್ಪರ್ಧೆಗಳು ನಡೆಯಿತು. ನಂತರ ಶಾಲಾ ಮಕ್ಕಳು ಹಾಗೂ ಯುವತಿ ಮಂಡಲದವರು ತಂದಿದ್ದ ಸುಮಾರು 27 ಬಗೆಯ ಆಟಿಯ ವಿವಿಧ ತಿನಿಸುಗಳ ವೀಕ್ಷಣೆ ನಡೆಯಿತು. ಹಾಗೂ ಅತ್ಯುತ್ತಮ ಆಟಿಯ ಅಡುಗೆ ವಿಜೇತರನ್ನು ಆಯ್ಕೆ ಮಾಡಲಾಯಿತು. ನಂತರ ಶಾಲಾ ಮಕ್ಕಳು ತಂದಿರುವ ಹಳೆಯ ಕಾಲದ ವಸ್ತುಗಳ ಪ್ರದರ್ಶನವನ್ನು ವೀಕ್ಷಣೆ ಮಾಡಿ ಅತೀ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿ ತಂದಿರುವ ವಿಜೇತ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.
ನಂತರ ನಡೆದ ಆಟಿಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಭೀಮಗುಳಿ ವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಹೊಸೋಳಿಕೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಗ್ರಾಮದ ಹಿರಿಯರಾದ ರಾಮಣ್ಣ ಗೌಡ ರವರು ನೇಜಿ ನೆಡುವ ಮುಖಾಂತರ ಜಾನಪದ ಶೈಲಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಖ್ಯಾತ ಜಾನಪದ ರಂಗ ಕಲಾವಿದರಾದ ರಮೇಶ್ ಮೆಟ್ಟಿನಡ್ಕ ರವರು ಆಟಿ ಆಚರಣೆಯ ಮಹತ್ವವನ್ನು ಸವಿವರವಾಗಿ ವಿವರಿಸುತ್ತಾ ಪಾಡ್ದನ, ಜಾನಪದ ಹಾಡುಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಅಚ್ಚುತ ಗೌಡ, ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಆನಂದ ಬಾಣೂರು, ಶಾಲಾ ಮುಖ್ಯ ಶಿಕ್ಷಕರಾದ ವೀಣಾ.ಎಂ.ಟಿ, ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ಪ್ರತಿಮಾ ರೆಂಜಾಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಶಿಕಾಂತ ಗುಳಿಗಮೂಲೆ ಹಾಗೂ ವಿದ್ಯಾರ್ಥಿ ನಾಯಕಿ ಕುಮಾರಿ ಸುಭೀಕ್ಷಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಶಾಲಾ ಶಿಕ್ಷಕರಾದ ರುಕ್ಮಿಣಿ ರವರು ವಾಚಿಸಿ ಅತಿಥಿಗಳ ಮುಖೇನ ಬಹುಮಾನಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕರಾದ ವೀಣಾ.ಎಂ.ಟಿ ರವರು ಸ್ವಾಗತಿಸಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್.ಎಂ.ಟಿ ರವರು ಧನ್ಯವಾದಗಳನ್ನು ಸಮರ್ಪಿಸಿದರು.
ಇಂಗ್ಲಿಷ್ ಶಿಕ್ಷಕರಾದ ಮಲ್ಲಿಕಾ.ಟಿ ರವರು ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಗಜಾನನ ಯುವತಿ ಮಂಡಲದ ಸದಸ್ಯರಿಂದ ಆಟಿ ಕಳಂಜ ಪ್ರದರ್ಶನ ಹಾಗೂ ರಮೇಶ್ ಮೆಟ್ಟಿನಡ್ಕ ರವರ ಹಾಡುಗಳಿಗೆ ಸಾಮೂಹಿಕ ಜಾನಪದ ನೃತ್ಯ ನಡೆದು ನಂತರ ಆಟಿ ತಿನಿಸುಗಳ ಸಹಭೋಜನ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು, ಶ್ರೀ ಗಜಾನನ ಯುವತಿ ಮಂಡಲದ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading