Ad Widget

ಬೆಳ್ಳಾರೆ ಜ್ಞಾನದೀಪದಲ್ಲಿ “ನಶೆಮುಕ್ತ ಭಾರತ” ಜಾಗೃತಿ ಕಾರ್ಯಕ್ರಮ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುಳ್ಯ ಶಾಖೆ ಮತ್ತು ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ "ನಶೆಮುಕ್ತ ಭಾರತ ಅಭಿಯಾನ"ದ ಅಂಗವಾಗಿ ಜಾಗೃತಿ ಮತ್ತು ರಕ್ಷಾ ಬಂಧನ ಕಾರ್ಯಕ್ರಮ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುಳ್ಯ ಶಾಖೆಯ ಮುಖ್ಯಸ್ಥೆ ಉಮಾ ಕಾರ್ಯಕ್ರಮವನ್ನು ಉದ್ಘಾಟಿಸಿ, ರಕ್ಷಾ ಬಂಧನ ಸಂದೇಶ ಮತ್ತು ನಶೆ ಮುಕ್ತ...

ಸುಳ್ಯ : ವಿಶ್ವ ಅಂಗದಾನ ದಿನಾಚರಣೆಯ ಅಂಗವಾಗಿ ಬೀದಿ ನಾಟಕ ಪ್ರದರ್ಶನ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಆ.11 ರಂದು ವಿಶ್ವ ಅಂಗದಾನ ದಿನಾಚರಣೆಯ ಕುರಿತು ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅಂಗದಾನದ ಜಾಗೃತಿ ಮೂಡಿಸುವ ಸಲುವಾಗಿ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಚನಾ ಶಾರೀರ ವಿಭಾಗದ ಮುಂದಾಳತ್ವದಲ್ಲಿ, ಎನ್.ಎಂ.ಸಿ ಕಾಲೇಜಿನ ಐ.ಕ್ಯೂ.ಏ.ಸಿ...
Ad Widget

ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ವತಿಯಿಂದ ವಾಟರ್ ಬೆಡ್ ವಿತರಣೆ

ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ಜಾಲ್ಸೂರು ಗ್ರಾಮದ ರಾಧಾಕೃಷ್ಣ ಕುಕ್ಕಂದೂರು ಅವರಿಗೆ ವಾಟರ್ ಬೆಡ್ ವಿತರಣೆ ಮಾಡಲಾಯಿತು. ಕೆಲದಿನಗಳ ಹಿಂದೆ ಪಾಶ್ರುವಾಯು ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವಾಟರ್ ಬೆಡ್ ಅನ್ನು ಸುಳ್ಯ ವಲಯದ ಮೇಲ್ವಿಚಾರಕರಾದ ದಿನೇಶ್ ರವರು ಅವರ ಮನೆಯವರಿಗೆ ವಿತರಿಸಿದರು. ಈ...

ಮರ್ಕಂಜ : “ಆಟಿದ ಗೌಜಿ” ಕಾರ್ಯಕ್ರಮ

ಸರ್ಕಾರಿ ಪ್ರೌಢಶಾಲೆ ಮರ್ಕಂಜ ಹಾಗೂ ಶ್ರೀ ಗಜಾನನ ಯುವತಿ ಮಂಡಲ(ರಿ.)ಬೊಮ್ಮಾರು ಇವರ ಜಂಟಿ ಆಶ್ರಯದಲ್ಲಿ ಮರ್ಕಂಜ ಸರ್ಕಾರಿ ಪ್ರೌಢಶಾಲೆಯಲ್ಲಿ ಆ.09 ರಂದು “ಆಟಿದ ಗೌಜಿ” ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಹಾಗೂ ಯುವತಿ ಮಂಡಲದ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ರೀತಿಯ ಜಾನಪದ ಕ್ರೀಡೆಗಳ ಸ್ಪರ್ಧೆಗಳು ನಡೆಯಿತು. ನಂತರ ಶಾಲಾ ಮಕ್ಕಳು ಹಾಗೂ ಯುವತಿ ಮಂಡಲದವರು...

ಹರಿಹರ ಪಳ್ಳತ್ತಡ್ಕ : 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಆ.26 ರಿಂದ 28 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಆ.11 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರ ಪ್ರಾರ್ಥನೆಯೊಂದಿಗೆ...

ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವರಮಹಾಲಕ್ಷ್ಮೀ ಹಾಗೂ ಕೃಷ್ಣ ಜನ್ಮಾಷ್ಟಮಿ ಆಫರ್ – ಗ್ರಾಹಕರಿಗೆ ಈ ವಾರ ಕೊನೆಯ ಅವಕಾಶ

ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆಯಾದ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ 'ಕರ್ನಾಟಕ ಗೋಲ್ಡ್ ಫೆಸ್ಟಿವಲ್' ಆಗಸ್ಟ್ 1 ರಿಂದ ಆರಂಭಗೊಂಡಿದ್ದು ಅಕ್ಟೋಬರ್ 5 ರವರೆಗೆ ನಡೆಯಲಿದೆ. ವರಮಹಾಲಕ್ಷ್ಮೀ ಹಾಗೂ ಕೃಷ್ಣ ಜನ್ಮಾಷ್ಟಮಿ ಆಫರ್ ಆ.17ರವರೆಗೆ ಇರಲಿದ್ದು, ಈ ಸೌಲಭ್ಯವು ಈ ಒಂದು ವಾರ ಮಾತ್ರ ಲಭ್ಯವಿರಲಿದೆ. ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಸಲುವಾಗಿ ಗ್ರಾಹಕರಿಗೆ 50 ಚಿನ್ನ ಮತ್ತು...

ಅಮ್ಮ ಚಿಣ್ಣರ ಮನೆ ಪೋಷಕ ಸಮಿತಿ ರಚನೆ – ಅಧ್ಯಕ್ಷರಾಗಿ ಹರಿಪ್ರಸಾದ್ ಅತ್ಯಾಡಿ,ಉಪಾಧ್ಯಕ್ಷರಾಗಿ ಡಾ.ಅಮಿತ್ ಕುಮಾರ್ ಹಾಗೂ ಶ್ರೀಮತಿ ರೋಹಿಣಿ ಕುಲದೀಪ್ ಆಯ್ಕೆ

ಕಳೆದ 19 ವರ್ಷಗಳಿಂದ ಕಾರ್ಯಚರಿಸುತ್ತಿರುವ ಅಮ್ಮ ಚಿಣ್ಣರ ಮನೆ ಪೋಷಕ ಸಮಿತಿ ಸಭೆ ಆ.9ರಂದು ನಡೆಯಿತು. ಈ ಸಂದರ್ಭದಲ್ಲಿ 2025-26 ನೇ ಸಾಲಿನ ನೂತನ ಸಮಿತಿ ರಚನೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಹರಿಪ್ರಸಾದ್ ಅತ್ಯಾಡಿ, ಉಪಾಧ್ಯಕ್ಷರುಗಳಾಗಿ ಡಾ.ಅಮಿತ್ ಕುಮಾರ್ ಮತ್ತು ಶ್ರೀಮತಿ ರೋಹಿಣಿ ಕುಲದೀಪ್, ಸದಸ್ಯರುಗಳಾಗಿ ಯೋಗೀಶ್, ಶ್ರೀಮತಿ ನಿಶ್ಮಿತಾ ಧನಂಜಯ್, ಶ್ರೀಮತಿ ಪಲ್ಲವಿ ರಾಜೇಶ್,...

ಐವರ್ನಾಡು : ಸಹಕಾರಿ ಸಂಘದ ಮಹಾಸಭೆ ; ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಣೆ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರ ಅಧ್ಯಕ್ಷತೆಯಲ್ಲಿ ಆ.9 ರಂದು ಸಂಘದ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ರವರು ಸ್ವಾಗತಿಸಿ ಮಾತನಾಡಿ "ಸಂಘವು ವರದಿ ವರ್ಷದಲ್ಲಿ 273.13ಕೋಟಿ ವ್ಯವಹಾರ ನಡೆಸಿ 76.10 ಲಕ್ಷ ಲಾಭ ಗಳಿಸಿರುತ್ತದೆ. ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲಾಗುವುದು" ಎಂದು...

ಕುಕ್ಕೆಯಲ್ಲಿ ನಿರಂತರ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಆಗಸ್ಟ್ 10 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೇಶಾದ್ಯಂತ ಸಾವಿರಾರು ಮಂದಿ ದಿನಂಪ್ರತಿ ದೇವರ ದರ್ಶನಕ್ಕೆ ಬಂದು ಪ್ರಸಾದ ಸ್ವೀಕರಿಸಿ ಹೋಗುತ್ತಿರುತ್ತಾರೆ. ಆದರೆ ಸ್ವಚ್ಛತೆ ಬಗ್ಗೆ ಏನೆಂದು ಅರಿವಿಲ್ಲದಂತೆ ರಸ್ತೆ ಬದಿ, ಪಾರ್ಕಿಂಗ್ ಬದಿ, ಸಾನಘಟ್ಟದ ಬದಿ, ಅಂಗಡಿ ಮುಂಗಟ್ಟುಗಳ ಬದಿಯಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಂದರಲ್ಲಿ ಕಸ ಬಿಸಾಡುತ್ತಿರುವುದು ನಿರಂತರವಾಗಿ ನಡೆಯುತ್ತಿದೆ....

ಮೇನಾಲ : ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಶ್ರೀ ಕೃಷ್ಣ ಭಜನಾ ಮಂದಿರ(ರಿ.) ಮೇನಾಲ, ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಮೇನಾಲ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಆ.10ರಂದು ಮೇನಾಲ ಭಜನಾ ಮಂದಿರದ ಬಳಿಯ ಮೈದಾನದಲ್ಲಿ ನಡೆಯಿತು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ...
Loading posts...

All posts loaded

No more posts

error: Content is protected !!