Ad Widget

ಮಾವಿನಕಟ್ಟೆ : ಆಟಿದ ಕೂಟ ಮತ್ತು ಕ್ರೀಡಾಕೂಟ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಸುಳ್ಯ ತಾಲೂಕು ಗುತ್ತಿಗಾರು ವಲಯದ ಮಾವಿನಕಟ್ಟೆ ಒಕ್ಕೂಟದಲ್ಲಿ ಆಟಿದ ಕೂಟ ಮತ್ತು ಕ್ರೀಡಾಕೂಟವು ಮಾವಿನ ಕಟ್ಟೆ ಶ್ರೀ ಮಹಾ ವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು.

. . . . . . . . .

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೇಜಿ ನೆಡುವುದರ ಮೂಲಕ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಬಾಬು ಮಾಸ್ತರ್ ಅಚ್ರಪ್ಪಾಡಿ ಚಾಲನೆ ನೀಡಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಮಾತನಾಡಿ ಆಟಿ ತಿಂಗಳ ಮಹತ್ವ ಧಾರ್ಮಿಕ ಆಚಾರ ವಿಚಾರಗಳು ನಮ್ಮ ನಂಬಿಕೆ ಸಂಸ್ಕೃತಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಆರ್ಥಿಕ ಪ್ರಗತಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಗುತ್ತಿಗಾರು ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ಬಿ ಪೂರ್ಣಚಂದ್ರ ಬೊಮ್ಮದೇರೆ – ಪೈಕರವರು ಆಟಿ ಉತ್ಸವ ಹಾಗೂ ಸದಸ್ಯರಿಗೆ ನಡೆದ ಕ್ರೀಡಾಕೂಟದ ಬಗ್ಗೆ ಶುಭ ಹಾರೈಸಿದರು.
ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ಗುತ್ತಿಗಾರು ವಲಯದ ಒಕ್ಕೂಟದ ಅಧ್ಯಕ್ಷ ಯೋಗೀಶ ದೇವರವರು ಯೋಜನೆಯ ಸದಸ್ಯರಿಗೆ ದೊರಕಿದ ಸೌಲಭ್ಯಗಳ ಬಗ್ಗೆ ಹಾಗೂ ಇಂತಹ ಕಾರ್ಯಕ್ರಮಗಳು ಸದಸ್ಯರಿಗೆ ಇನ್ನು ಸ್ಫೂರ್ತಿಯಾಗಲಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ಮಾವಿನಕಟ್ಟೆ ಒಕ್ಕೂಟದ ಅಧ್ಯಕ್ಷ ಭಾನುಪ್ರಕಾಶ್ ತಳೂರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಘಗಳ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮತ್ತು ವಿದ್ಯಾನಿಧಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸುಮಾರು 9 ವರ್ಷಗಳಿಂದ ನಿರಂತರವಾಗಿ ಸೇವಾಪ್ರತಿನಿಧಿಯಾಗಿ ಸೇವೆಗೈದ ಶ್ರೀಮತಿ ಉಷಾಲತರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು.

. . . . . . .

ಕು.‌ ಸಾನ್ವಿ ಹೆಚ್ ತಳೂರು ಪ್ರಾರ್ಥಿಸಿದರು. ವಲಯದ ಮೇಲ್ವಿಚಾರಕರಾದ ರಾಜೇಶ್ ಟಿ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.‌ ಗಿರೀಶ್ ಟಿ. ಪಿ. ತಳೂರು ವಂದಿಸಿದರು.‌ ಗುತ್ತಿಗಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಲೋಕೇಶ್ವರ ಡಿ. ಆರ್ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading