Ad Widget

ಸುಳ್ಯ : ಆಟೋ ರಿಕ್ಷಾ ಚಾಲಕರ ಸಂಘದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

ಸುಳ್ಳ ತಾಲೂಕು ಆಟೋರಿಕ್ಷಾ ಚಾಲಕರ ಸಂಘ ಬಿ.ಎಂ.ಎಸ್ ಸಂಯೋಜಿತ ಇದರ ಇದರ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಪುರೋಹಿತ್ ನಾಗರಾಜ್ ಭಟ್   ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ರಕ್ಷಾಬಂಧನದ ಮಹತ್ವವನ್ನು ವಿವರಿಸಿದರು. 
ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಪಿ.ಗೋಪಾಲಕೃಷ್ಣ ಭಟ್ ಮಾತನಾಡಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ.ಎಸ್ ಶುಭ ಹಾರೈಸಿದರು.
ರಕ್ಷಾ ಬಂಧನದ ಸಂದೇಶ ಹಾಗೂ ಎಲ್ಲರಿಗೂ ಅಂಚೆ ಮೂಲಕ ಶುಭಾಶಯ ಕೋರುತ್ತಿರುವ ಪುರೋಹಿತ್ ನಾಗರಾಜ್ ಭಟ್ ಅವರಿಗೆ ಸಾಲು ಹೊದಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ರವಿ ಎಸ್,  ಉಪಾಧ್ಯಕ್ಷರಾದ ಪ್ರಶಾಂತ್ ಭಟ್, ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ, ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್, ನಿರ್ದೇಶಕ ಲೋಕೇಶ್, ಭಾನುಪ್ರಕಾಶ್, ದರ್ನೇಶ್, ಪ್ರದೀಪ್, ಪ್ರಸನ್ನ, ಜನಾರ್ಧನ, ಗೋಪಾಲ ಜಾಲ್ಸೂರು, ರೋಹಿತ್, ಜಗದೀಶ್ ಎನ್.ಆರ್, ಕಾರ್ತಿಕ್, ಭಾಸ್ಕರ,  ವೇಣುಗೋಪಾಲ, ಚಾಮಯ್ಯ ಶಿವಾನಂದ, ಮಹೇಶ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ ಸ್ವಾಗತಿಸಿದರು. ಉಪಾಧ್ಯಕ್ಷರಾದ ಪ್ರಶಾಂತ್ ಭಟ್ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading