Ad Widget

ಅಡ್ಡನಪಾರೆ : ರಕ್ಷಾಬಂಧನ ಕಾರ್ಯಕ್ರಮ

ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿ ಅಡ್ಡನಪಾರೆ ಇದರ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಆ.09 ರಂದು ನಡೆಯಿತು.
ಅನಿತಾ ನವೀನ್ ಪೈಕ ಬೌದ್ಧಿಕ್ ನೀಡಿ ರಕ್ಷಾ ಬಂಧನದ ಮಹತ್ವ ವಿವರಿಸಿದರು. ಧರ್ಮದ ರಕ್ಷಣೆಯ ಬಗ್ಗೆ ಹಿರಿಯರ ಕೊಡುಗೆಗಳ ನೆನಪಿಸಿದರು.
ಶೋಭಾವತಿ ಅಡ್ಡನಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪರಸ್ಪರ ರಾಖಿ ಕಟ್ಟಿ ಶುಭಹಾರೈಸಿದರು.
ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿಯ ಸಂಘಟನೆಗಾಗಿ ದೇಶದಾದ್ಯಂತ ಸಂಚರಿಸಿ ಶ್ರಮಿಸಿ ಇತ್ತೀಚೆಗೆ ಅಗಲಿದ ಹಿರಿಯ ಮಹಿಳೆ ಪ್ರಮೀಳಾ  ಅವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಲಕ್ಷ್ಯ ಕಡಪಳ ಸ್ವಾಗತಿಸಿ, ದೇಶ್ನಿ ಕಡಪಳ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading