Ad Widget

“ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ನೀಡಲು ಪ್ರಥಮ ಆಧ್ಯತೆ” : ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್

ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆ

ಸುಬ್ರಹ್ಮಣ್ಯ ಆಗಸ್ಟ್ 7 : “ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಈಗಾಗಲೇ ಅಗತ್ಯವಿರುವಲ್ಲಿಗೆ ವಿದ್ಯುತ್ ಮಾರ್ಗಗಳ  ಬದಲಾವಣೆ, ವಿದ್ಯುತ್ ಪರಿವರ್ತಕಗಳ ಬದಲಾವಣೆ, ಕಂಬಗಳ ಬದಲಾವಣೆ ಕೆಲಸ ನಡಿಯುತ್ತಿದ್ದು, ಮಳೆಗಾಲದ ಸಮಯವಾದ್ದರಿಂದ ಬಹಳಷ್ಟು ವಿದ್ಯುತ್ ವ್ಯತ್ಯಯ ಆಗುವುದು ಸರ್ವೇಸಾಮಾನ್ಯ, ಆದರೆ ಗ್ರಾಹಕರ ಸಹಕಾರದೊಂದಿಗೆ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಗ್ರಾಹಕರಿಗೆ ಸುರಕ್ಷತೆಯೊಂದಿಗೆ ಗುಣಮಟ್ಟದ ವಿದ್ಯುತ್ ಅನ್ನು  ಒದಗಿಸುವುದಕ್ಕೆ ನಾವು ಪ್ರಧಾನ ಆದ್ಯತೆ ನೀಡುತ್ತೇವೆ” ಎಂದು ಮಂಗಳೂರು ಮೆಸ್ಕಾಂ ವೃತ್ತದ ಅಧೀಕ್ಷಕ  ಇಂಜಿನಿಯರ್ ಕೃಷ್ಣರಾಜ್ ಹೇಳಿದರು.
ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗ ಹಾಗೂ ಸುಳ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಮೆಸ್ಕಾಂ ಗ್ರಾಹಕರು ತಾವು ಅನುಭವಿಸುತ್ತಿರುವ ಬಹಳಷ್ಟು ಸಮಸ್ಯೆಗಳು, ಆಗಬೇಕಾದ ಕೆಲಸಗಳು ಹಾಗೂ ಸುರಕ್ಷತೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಇವುಗಳಲ್ಲಿ ಕೆಲವು,
1) ಸುಬ್ರಹ್ಮಣ್ಯ, ಗುತ್ತಿಗಾರು ಪಂಜ, ನಿಂತಿಕಲ್ಲು ಹಾಗೂ ಕಡಬಕ್ಕೆ ಮುಖ್ಯ ಕೇಂದ್ರವಾಗಿರುವ ಪಂಜದಲ್ಲಿ 110 ಕೆ.ವಿ ವಿದ್ಯುತ್ ಮುಖ್ಯಸ್ಟೇಷನ್ ಆಗಬೇಕೆಂದು ಗ್ರಾಹಕರಾದ ವಸಂತಕುಮಾರ್  ಕೆದಿಲ ಹಾಗೂ ಮೆಸ್ಕಾಂ  ಸಲಹಾ ಸಮಿತಿ ಸದಸ್ಯ ಜಮಾಲುದ್ದೀನ್ ಅಗ್ರಹಿಸಿದರು.
2) ಗುತ್ತಿಗಾರಿನ 33 ಕೆವಿ ಸಬ್ ಸ್ಟೇಷನ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಟೆಲಿಫೋನ್ ಇಲಾಖೆ ಅವರು ಒ.ಎಫ್.ಸಿ ಕೇಬಲ್ ಅನ್ನು ಕಂಬಕ್ಕೆ ಕಟ್ಟಿರುವುದನ್ನು ಲೈನ್ ಮ್ಯಾನ್ ಗಳು ಬಿಚ್ಚಿ ಹಾಕಿರುತ್ತಾರೆ. ಇದರಿಂದ ಗ್ರಾಹಕರಿಗೆ ತುಂಬಾ ತೊಂದರೆ ಆಗಿರುತ್ತದೆ. ಕೂಡಲೇ ಅದನ್ನು ಸರಿಪಡಿಸಬೇಕೆಂದು ಉದಯಕುಮಾರ್ ದೇರಪ್ಪಜ್ಜನ ಮನೆ  ಅಗ್ರಹಿಸಿದರು.
3) ಗುತ್ತಿಗಾರು ಶಾಖೆಯ ಲೈನ್ ಮ್ಯಾನ್ ಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಂದಕ್ಕೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಬೇಕೆಂದು ತಿಳಿಸಿದರು.
4) ಐನೆಕಿದು, ಹರಿಹರ, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರು ಪ್ರದೇಶಗಳಲ್ಲಿ  ಆಗುತ್ತಿರುವ ವಿದ್ಯುತ್ ವ್ಯತ್ಯಯ ಹಾಗೂ ಸಮಸ್ಯೆಗಳ ಬಗ್ಗೆ ಹರೀಶ್ ಮೆಟ್ಟಿನಡ್ಕ, ಪರಮೇಶ್ವರ ಕೆಂಬಾರೆ, ದಿನೇಶ್ ಹಾಲೆಮಜಲು, ವಿಜಯಕುಮಾರ್ ಅಂಙಣ ಅಧಿಕಾರಿಗಳ ಗಮನಸೆಳೆದರು.
5) ಮೆಸ್ಕಾಂ ಬಿಲ್ ನಲ್ಲಿ ಆಗುತ್ತಿರುವ ವ್ಯತ್ಯಾಸ ಗುತ್ತಿಗಾರು ಭಾಗದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದಿನೇಶ್ ಸರಸ್ವತಿ ಮಹಲ್ ವಿವರಿಸಿದ್ದರು.
6) ಮೆಸ್ಕಾಂ ನವರು ಗ್ರಾಹಕರ ಮೀಟರ್ ಕೆಟ್ಟು ಹೋಗಿ ತುಂಬಾ ಸಮಯವಾದರೂ ಬದಲಾವಣೆ ಮಾಡದೆ ಇದ್ದುದನ್ನು ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಜಮಾಲುದ್ದೀನ್ ಅಧಿಕಾರಿಗಳಲ್ಲಿ ತಿಳಿಸಿದರು.
7) ಮಲಯಾಳದಿಂದ ಐನೆಕಿದು-ಹರಿಹರದವರೆಗೆ ಮಾರ್ಗದ ಬದಿಯಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡು ಇರುವ ಮರದ ಕೊಂಬೆಗಳನ್ನು ತೆಗೆಯುವಂತೆ ಸತೀಶ್ ಕೂಜುಗೋಡು ಅಗ್ರಹಿಸಿದರು.
8) ವಿದ್ಯುತ್ ತಂತಿಗಳು ಹಾದು ಹೋಗಿರುವ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಮರದ ಕೊಂಬೆಗಳ  ಕಟಿಂಗ್ ಸಮರ್ಪಕವಾಗಿ ಆಗದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಹಕರು ಕೂಡಲೇ ಮಾಡುವಂತೆ ಅಗ್ರಹಿಸಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೆಂಟಿ ಯೋಜನಾ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ದಿನೇಶ್ ಹಾಲೆಮಜಲು, ಜವಾಲುದ್ದೀನ್ ಹಾಗೂ  ಕೃಷ್ಣಪ್ಪ ನಾಯ್ಕ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ.ಎ, ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಸಪಲ್ಯ, ಸುಳ್ಯ ಉಪ ವಿಭಾಗದ ಹರೀಶ್ ನಾಯ್ಕ್, ಸಹಾಯಕ ಇಂಜಿನಿಯರ್ ಗಳಾದ ಹರಿಕೃಷ್ಣ ಕೆ.ಜಿ, ಚಿದಾನಂದ ಕೆ, ಸುಪ್ರೀತ್ ಕುಮಾರ್, ಕಿರಿಯ ಇಂಜಿನಿಯರ ಗಳಾದ ಪ್ರಸಾದ್ ಕೆ.ವಿ, ಅಭಿಷೇಕ್, ಮಹೇಶ್, ಸುನಿತಾ ಮತ್ತು ಕಚೇರಿ ಹಿರಿಯ ಸಹಾಯಕರಾದ ಗಣೇಶ್, ಹಾಗೂ ಅನುರಾಧ ಉಪಸಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading