Ad Widget

ಕುರುಂಜಿಗುಡ್ಡೆ : ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಅವೈಜ್ಞಾನಿಕ ರಸ್ತೆ ಹಂಪ್ಸ್ ; ವಾಹನ ಸವಾರರಿಗೆ ಸಂಕಷ್ಟ

ಸುಳ್ಯದ ಕೋರ್ಟ್ ಹಿಂಭಾಗದಿಂದ ಕುರುಂಜಿಗುಡ್ಡೆ ಸಂಪರ್ಕಿಸುವ ರಸ್ತೆಯ ತಿರುವಿನ ಬಳಿಯಲ್ಲಿ ವೇಗನಿಯಂತ್ರಕ ಹಂಪ್ಸ್ ಅಳವಡಿಸಲಾಗಿತ್ತು.‌ ನಗರದಾದ್ಯಂತ ಕುಡಿಯುವ ನೀರಿನ ಪೈಪು ಅಳವಡಿಸುವ  ಕಾಮಗಾರಿ ಸಂದರ್ಭ ಇಲ್ಲಿ ರಸ್ತೆಯ ಅರ್ಧ ಭಾಗವನ್ನು ಅಗೆದು ಕಾಮಗಾರಿ ನಡೆಸಲಾಗಿದೆ.‌ ನಂತರದಲ್ಲಿ ರಸ್ತೆಗೆ ಕಾಂಗ್ರೆಟ್ ಹಾಕಿ ಸರಿಪಡಿಸಿದರೂ ವೇಗ ನಿಯಂತ್ರಕ ಹಂಪ್ಸ್ ಅನ್ನು ಪೂರ್ಣಗೊಳಿಸಿಲ್ಲ. ರಸ್ತೆಯ ಒಂದು ಭಾಗಕ್ಕೆ ಮಾತ್ರ ಹಂಪ್ ಇದ್ದು, ವಾಹನ ಸವಾರರಿಗೆ  ತೊಂದರೆಯಾಗುತ್ತಿದೆ. ಏರು ರಸ್ತೆಯ ತಿರುವಿನ ಸಮೀಪದಲ್ಲೇ ಈ ಅಪೂರ್ಣ ಹಂಪ್ಸ್ ಇರುವ ಕಾರಣದಿಂದ ವಾಹನ ಚಾಲಕರಿಗೆ ಗೊಂದಲ ಉಂಟಾಗುತ್ತಿದ್ದು, ವಾಹನ ಸವಾರರು ಹಂಪ್ಸ್ ತಪ್ಪಿಸಲು ರಾಂಗ್ ಸೈಡ್ ಬರುತ್ತಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತ ಗಮನಹರಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading