Ad Widget

ಶಿರಾಡಿ : ನದಿ ನೀರು ಹರಿದು ರಸ್ತೆ ಹಾನಿ ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು

ವಿಪರೀತ ಮಳೆಯಿಂದಾಗಿ ಶಿರಾಡಿ ಗ್ರಾಮದ ಮುಂಡಾಜೆ-ಕುದ್ಕುಳಿ-ಬರಮೇಲು ಮುಖ್ಯ ರಸ್ತೆಯ ಬದಿಯಲ್ಲಿ ಹರಿಯುತ್ತಿರುವ ನದಿಯ ನೀರು ರಸ್ತೆಯಲ್ಲಿ ಹರಿದು ರಸ್ತೆ ಹಾನಿಗೊಳಗಾಗಿದ್ದು, ಸ್ಥಳಕ್ಕೆ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಮಾರು 200 ಮೀಟರ್ ನಷ್ಟು ತಡೆಗೋಡೆ ಇಲ್ಲದೇ ನೀರು ರಸ್ತೆಯಲ್ಲಿ ಹರಿದು ಪಕ್ಕದ ಕೃಷಿ ತೋಟಗಳಿಗೂ ಹಾನಿಯಾಗಿರುವುದನ್ನು ಸ್ಥಳೀಯರು ಶಾಸಕರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಭಾಸ್ಕರ್ ಇಚ್ಲಂಪಾಡಿ,  ಮಧುಸೂದನ್ ಕೊಂಬಾರ್, ಕಿಶೋರ್ ಶಿರಾಡಿ, ಪ್ರಕಾಶ್ ಶಿರಾಡಿ, ಪಂಚಾಯತ್ ಸದಸ್ಯರಾದ ಲಕ್ಷ್ಮಣ ಹಾಗೂ ಊರಿನವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading