Ad Widget

ಸುಳ್ಯ : 27ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ

“ಭಜನಾ ಸಂಸ್ಕಾರ ಉಳಿಯಬೇಕು ಎಂಬುದು ಪೂಜ್ಯರ ಕನಸು” : ಸುಬ್ರಹ್ಮಣ್ಯ ಪ್ರಸಾದ್

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ 27ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಸೋಮಶೇಖರ ಪೈಕ ಇವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಇದರ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಭಜನಾ ಕಾರ್ಯಕ್ರಮ ಕೇವಲ ಮನೆಯಲ್ಲಿ ಅಲ್ಲ ಇಡೀ ಸಮಾಜದಲ್ಲಿ ಆಗಬೇಕು, ಮನುಷ್ಯನಿಗೆ ಆರೋಗ್ಯ ಮತ್ತು ನೆಮ್ಮದಿ ಬೇಕು ಅಂದರೆ ಭಗವಂತನ ನಾಮಸ್ಮರಣೆ ಮಾಡಬೇಕು, ಭಜನೆಯಿಂದ ಆರೋಗ್ಯ ಮತ್ತು ನೆಮ್ಮದಿಯನ್ನು ಖಂಡಿತವಾಗಿಯೂ ಪಡೆದುಕೊಳ್ಳಬಹುದು, ಕಲಿಯುಗದಲ್ಲಿ        ದೇವರನ್ನೊಲಿಸಿಕೊಳ್ಳಲು ಭಜನೆ ಸುಲಭ ದಾರಿ ಎಂದು ಹೇಳುತ್ತಾ ಭಜನ ಸಂಸ್ಕಾರ ಉಳಿಯ ಬೇಕು ಎಂಬುವುದು ಪೂಜ್ಯರ ಆಶಯವು ಕೂಡ ಆಗಿದೆ” ಎಂದರು.
ತಾಲೂಕು ಹಾಗೂ ವಲಯದ ನಿಕಟಪೂರ್ವ ಪದಾಧಿಕಾರಿಗಳಿಂದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಲಾಯಿತು.
ಯೋಜನಾಧಿಕಾರಿಗಳಾದ ಮಾಧವ ಗೌಡ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಪರಿಷತ್ತಿನ ಧ್ಯೆಯೋದ್ದೇಶಗಳು ಮತ್ತು ಸುಳ್ಯ ತಾಲೂಕು ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾದ ವರದಿಯನ್ನು ತಯಾರಿಸಿ ಮಾಹಿತಿಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಭಜನಾ ಪರಿಷತ್ತಿನ ಗೌರವಾಧ್ಯಕ್ಷರಾದ  ಯತೀಶ್ ರೈ ದುಗ್ಗಲಡ್ಕ, ಉಪಾಧ್ಯಕ್ಷರಾದ ನಾರಾಯಣ ಕೊಡ್ತುಗುಳಿ, ತಾಲೂಕು ಕಾರ್ಯದರ್ಶಿಗಳಾದ ಸತೀಶ್ ಟಿ.ಎನ್, ಉಪಾಧ್ಯಕ್ಷರಾದ ಶ್ರೀಮತಿ ಸಂಧ್ಯಾ ಮಂಡೆಕೋಲು, ತಾಲೂಕು ಕೋಶಾಧಿಕಾರಿಗಳಾದ ನಾರಾಯಣ ಕಳಂಜ, ತಾಲೂಕು ಯೋಜನಾಧಿಕಾರಿಗಳಾದ  ಮಾಧವ ಗೌಡ, ಜಿಲ್ಲಾ ಭಜನಾ ಪರಿಷತ್ತು ಸಮನ್ವಯಾಧಿಕಾರಿ ಸಂತೋಷ ಪಿ ಅಳಿಯೂರು ಮತ್ತಿತರರು ಉಪಸ್ಥಿತರಿದ್ದರು.
ಯೋಜನಾಧಿಕಾರಿ ಮಾಧವ ಗೌಡ ರವರು ಸ್ವಾಗತಿಸಿ, ಶ್ರೀಮತಿ ಕುಸುಮ ಬಾಳುಗೋಡು ಪ್ರಾರ್ಥಿಸಿದರು. ಗೌರವಾಧ್ಯಕ್ಷರಾದ ಯತೀಶ್ ರೈ ದುಗಲಡ್ಕ ವಂದಿಸಿದರು.
ಭಜನಾ ಪರಿಷತ್ತಿನ ಸಮನ್ವಯ ಅಧಿಕಾರಿಯವರಾದ  ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading