Ad Widget

ಸುಳ್ಯದಲ್ಲಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳಿಗೆ “ಆದರ್ಶ ಜೇನು ಕೃಷಿ ದಂಪತಿ” ಪ್ರಶಸ್ತಿ ಪ್ರಧಾನ

ಜೇನು ಕೃಷಿಕರಾದ ಕುಮಾರ್ ಪೆರ್ನಾಜೆ ಮತ್ತು ಸೌಮ್ಯ ದಂಪತಿ ಹಲವಾರು ವರ್ಷಗಳಿಂದ ಜೇನು ಕೃಷಿ ಬರಹದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ “ಆದರ್ಶ ಜೇನು ಕೃಷಿ ದಂಪತಿ” ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ನಾರಾಯಣ್ ರೈ ಕುಕ್ಕುವಳ್ಳಿ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷರಾದ ಎಚ್ ಭೀಮರಾವ್ ವಾಷ್ಠರ್ ಕೋಡಿಪಾಳ ಆ.3ರಂದು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು.
ಚಂದನ ಸಾಹಿತ್ಯ ವೇದಿಕೆಯು ತನ್ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ 2025 ಸಭಾ ಕಾರ್ಯಕ್ರಮದಲ್ಲಿ ಛಲ ಮತ್ತು ಹಠ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧನೆಯನ್ನು ಮಾಡಬಹುದೆಂದು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಎಚ್ ಭೀಮರಾವ್ ವಾಸ್ಟರ್ ಕೊಡಿಪಾಳ ಅಧ್ಯಕ್ಷರು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇವರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೋಹನ್ ನಂಗಾರ್ ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳು ಸುಳ್ಯ ನೆರವೇರಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ಪ್ರಭಾಕರ್ ಶಿಶಿಲ ಹಿರಿಯ ಸಾಹಿತಿಗಳು, ಸಂಚಾಲಕರು ಜೈನ ಸೇವಾಶ್ರಮ ಅಜ್ಜಾವರ ದೇವರ ಕಳೆಯ ಸುಳ್ಯ , ಶ್ರೀ ಶ್ರೀ  ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಘನ ಉಪಸ್ಥಿತಿಯಲ್ಲಿ ಹಾ.ಮ ಸತೀಶ್ ಬೆಂಗಳೂರು ಸಾಹಿತಿಗಳು ಕೃತಿ ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳು ಶ್ರೀಮತಿ ಸಾವಿತ್ರಿ ದೊಡ್ಡ ಮನೆ ಐವರ್ನಾಡು, ಪೆರುಮಾಳ್ ಲಕ್ಷ್ಮಣ್, ಸವಿತಾ ಕೋಡಂದೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading