Ad Widget

ಸುಬ್ರಹ್ಮಣ್ಯ: ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಶೀಲಾ ಗಣೇಶ್ ಆಯ್ಕೆ

ಸುಬ್ರಹ್ಮಣ್ಯ : ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಸುಬ್ರಹ್ಮಣ್ಯ ಇದರ 2025ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೀಲಾ ಗಣೇಶ್ ಆಯ್ಕೆಯಾಗಿದ್ದಾರೆ.  ಕಾರ್ಯದರ್ಶಿಯಾಗಿ ಸುಭಾಷಿಣಿ ಶಿವರಾಮ್ ಮತ್ತು ಕೋಶಾಧಿಕಾರಿಯಾಗಿ ತ್ರಿವೇಣಿ ದಾಮ್ಲೆ ನೇಮಕಗೊಂಡಿದ್ದಾರೆ.
2024ನೇ ಸಾಲಿನ ಸಮಿತಿ ಅಧ್ಯಕ್ಷೆ ಪೂಜಾ ಕಲ್ಲೂರಾಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾರದಾ ಭಟ್, ಶೋಭಾ ನಲ್ಲೂರಾಯ, ವನಜಾ ಭಟ್, ಪೂಜಾ ಕಲ್ಲೂರಾಯ, ವಿಜಯಲಕ್ಷ್ಮೀ ಕಲ್ಲೂರಾಯ, ಲತಾ ಸರ್ವೇಶ್ವರ ಭಟ್, ಆಶಾ.ವಿ.ಶೆಣೈ, ಗಂಗಾದೇವಿ, ಸರ್ವಮಂಗಳ ಆಯ್ಕೆಯಾದರು.
ಆ.8ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನೆರವೇರಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading