Ad Widget

ಆ.10 ; ಅರೆಭಾಷೆ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಅಕಾಡೆಮಿ ಹಾಗೂ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದೊಂದಿಗೆ “ಅರೆಭಾಷೆ ಜಂಬರ ಆಟಿ ಕೂಟ”

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಅಕಾಡೆಮಿ ಹಾಗೂ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಸಹಯೋಗದೊಂದಿಗೆ ” ಅರೆಭಾಷೆ ಜಂಬರ ಆಟಿ ಕೂಟ ” ಆಗಸ್ಟ್ 10 ರಂದು ಅಡ್ಕಾರ್ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿ ಪರ ಕೃಷಿಕ ಗಂಗಾಧರ ಅಡ್ಕಾರ್ ಅವರು ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಜಾಲ್ಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರ್ ಅವರು ಆಗಮಿಸಲಿದ್ದಾರೆ.
ಆ.10  ಮದು ಬೆಳಗ್ಗಿನಿಂದ ಕುಣಿತ ಭಜನೆ ,ಸೋಬಾನೆ, ನೇಜಿಹಾಡು, ಕಾಯಿಗೆ ಕಲ್ಲು ಹೊಡೆಯುವುದು, 5 ರಿಂದ 10 ವರ್ಷದ ಮಕ್ಕಳಿಗೆ ಲಕ್ಕಿಗೇಮ್ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ “ಆಟಿ ಗಮ್ಮತ್ ಊಟ” ಭೋಜನ ನಡೆಯಲಿದೆ.

. . . . . . . . .

ಮಧ್ಯಾಹ್ನ  ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ವಹಿಸಲಿದ್ದಾರೆ. ಸಾಧಕರ ಸನ್ಮಾನವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ಮಾಡಲಿದ್ದಾರೆ. ಆಟಿ ಬಗ್ಗೆ ಎಂ.ಜಿ.ಎಂ. ವಿದ್ಯಾಸಂಸ್ಥೆಯ ಸಂಚಾಲಕರಾದ ದೊಡ್ಡಣ್ಣ ಬರೆಮೇಲು ಮಾತನಾಡಲಿದ್ದಾರೆ. ಕನಕಮಜಲು ಸೊಸೈಟಿ ಅಧ್ಯಕ್ಷರಾದ ಸುಧಾಕರ ಕಾಮತ್ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಡ್ಕಾರ್ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರಿಪ್ರಕಾಶ್ ಅಡ್ಕಾರು, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.‌ ಗಂಗಾಧರ, ನಿವೃತ್ತ ಯೋಧರಾದ ಅಡಂತಡ್ಕ ದೇರಣ್ಣ ಗೌಡ , ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ , ದೇವಸ್ಥಾನದ ಮುಖ್ಯಸ್ಥರಾದ ಗುರುರಾಜ್ ಭಟ್ ಅಡ್ಕಾರ್ ಹಾಗೂ ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿರಲಿದ್ದಾರೆ..
ಪತ್ರಿಕಾಗೋಷ್ಠಿಯಲ್ಲಿ ಅರೆಬಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಾರ್ಯಕ್ರಮದ ಸಂಚಾಲಕ ಅರೆಭಾಷೆ ಅಕಾಡೆಮಿಯ ಸದಸ್ಯ ಡಾ. ಎನ್. ಎ. ಜ್ಞಾನೇಶ್,  ಅಕಾಡೆಮಿ ಮಾಜಿ ಸದಸ್ಯ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಹಾಗೂ ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಅವರು ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading