Ad Widget

ಕುಶಾಲನಗರ : ಕಾರು ಬೈಕ್ ಭೀಕರ ಅಪಘಾತ ; ಪೆರುವಾಜೆಯ ಯುವಕ ಮೃತ್ಯು

ಕುಶಾಲನಗರದ ಆನೆಕಾಡು ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬೈಕ್‌ ಸವಾರ ಪೆರುವಾಜೆಯ ಕಾರ್ತಿಕ್ ಭಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಅವಿವಾಹಿತರಾಗಿದ್ದ ಅವರು ಮೈಸೂರಿನ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಅರ್ನಾಡಿ ವಿಷ್ಣು ಭಟ್ ರವರ ಪುತ್ರ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್...

ಅರಂತೋಡು : ಸಂಜೀವಿನಿ ಮಾಸಿಕ ಸಂತೆ

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲ್ಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಅರಂತೋಡು ಮತ್ತು ದುರ್ಗಾಮಾತಾ ಸಂಜೀವಿನಿ ಒಕ್ಕೂಟ ಅರಂತೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರಂತೋಡು ಗ್ರಾಮ ಪಂಚಾಯತ್ ವಠಾರದಲ್ಲಿ  ಸಂಜೀವಿನಿ ಮಾಸಿಕ ಸಂತೆ ನಡೆಯಿತು. ಸಭಾ...
Ad Widget

ಆಗಸ್ಟ್ 7 ರಂದು ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ

ಸುಬ್ರಹ್ಮಣ್ಯ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನಸಂಪರ್ಕ ಸಭೆಯು ಆಗಸ್ಟ್ 07 ಗುರುವಾರದಂದು ಸುಬ್ರಹ್ಮಣ್ಯ ಉಪ ವಿಭಾಗ ಕಚೇರಿಯಲ್ಲಿ ಜರಗಲಿರುವುದು. ಮಂಗಳೂರು ಮೆಸ್ಕಾಂ ಕಾರ್ಪೊರೇಟ್ ಕಚೇರಿಯ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಅವರು ಅಧ್ಯಕ್ಷತೆ ವಹಿಸಲಿರುವರು.ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ದೂರವಾಣಿ ಕರೆ ಸಂಖ್ಯೆ(08257-200699) ಮೂಲಕ ಸಲ್ಲಿಸಬಹುದೆಂದು...

ಶಿವರಾಮ ಗೌಡ ಎಣ್ಣೆಮಜಲು ನಿಧನ

ಬಳ್ಪ ಗ್ರಾಮದ ಶಿವರಾಮ ಗೌಡ ಎಣ್ಣೆಮಜಲು ಆ.02 ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲೀಲಾವತಿ, ಪುತ್ರ ಪುನಿತ್, ಪುತ್ರಿಯರಾದ ಶ್ರೀಮತಿ ವಾಣಿ, ಶ್ರೀಮತಿ ವೀಣಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕಾಣೆಯಾಗಿದ್ದಾರೆ : ಯಶವಂತ.ಕೆ.   ಸದ್ರಿ ವ್ಯಕ್ತಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಿದ ಸುಬ್ರಹ್ಮಣ್ಯ ಪೋಲಿಸ್ ಠಾಣೆ

ಸುಳ್ಯ ತಾಲೂಕು ಕಲ್ಮಕಾರು ಗ್ರಾಮದ ಕಾಜಿಮಡ್ಕ ಲಿಂಗಪ್ಪ ಗೌಡ ರವರ ಪುತ್ರ ಯಶವಂತ.ಕೆ(50 ವರ್ಷ) ಎಂಬುವವರು ಜುಲೈ 14 ರಂದು ಐನೆಕಿದು ಗ್ರಾಮದ ಪಾದೆಮೂಲೆಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದು, ಸದ್ರಿ ವ್ಯಕ್ತಿ ಕಂಡುಬಂದಲ್ಲಿ ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
error: Content is protected !!