Ad Widget

ಕವನ : ಸೃಷ್ಟಿಗೊಂದು ಕಾರಣ…

ಸುರಿದ ಮಳೆ ಹನಿಗೂ ತಿಳಿಯಲಾಗಲಿಲ್ಲ ತಾನೇಕೆ ಆಗಸವ ಬಿಟ್ಟು ಭೂಮಿಗೆ ಬಂದೆ ಎಂದು, ಮಣ್ಣಿಗೆ ಸೇರಿದೆ ಎಂದು, ಅರಿಯುವಷ್ಟರಲ್ಲಿ ಆರಿ ಹೋಯಿತು ಇಂಗಿ ಮಣ್ಣ ಸೇರಿತು ಇಂದು, ಆದರೂ ಅದು ಮಣ್ಣಲ್ಲಿ ಸೇರಲು ಕಾರಣವೂ ಇತ್ತು ಒಂದು, ಆ ಕಾರಣವು ಅದಕ್ಕರಿವಿಲ್ಲದೇ ಪೂರ್ಣವಾಯಿತು ಇಂದು...ಹಾರಿದ ದೂಳಿನ ಕಣಕ್ಕೂ ಅರಿಯಲಾಗಲಿಲ್ಲ ತಾನೇಕೆ ಹಾರಿದೆ ಎಂದು, ಭುವಿಯ ಬಿಟ್ಟು...

ಅಡ್ಕಾರ್ ಮಹೋತ್ಸವ ; 2,500 ರೂಪಾಯಿ ಮೌಲ್ಯದ ಬಹುಮಾನಗಳನ್ನು ಗೆದ್ದ ಗೀತಾ ಶೇಖರ್ ಉಳುವಾರು ಅರಂತೋಡು

ಸುಳ್ಯದ ಪ್ರಸಿದ್ಧ ಗೃಹೋಪಯೋಗಿ ವಸ್ತುಗಳ ಮಳಿಗೆ ಅಡ್ಕಾರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು 30ನೇ ವಸಂತಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ ಗ್ರಾಹಕರ ಪ್ರತೀ ಖರೀದಿಗೆ ಬಂಪರ್ ಬಹುಮಾನ, ವೀಕ್ಲಿ ಬಹುಮಾನ ಹಾಗೂ ಸ್ಕ್ರಾಚ್ ಕಾರ್ಡ್ ಮುಖಾಂತರ 10 ಲಕ್ಷಕ್ಕೂ ಮಿಕ್ಕಿ ಗೆಲ್ಲುವ ಅವಕಾಶ ಒದಗಿಸಿದೆ.ಅಡ್ಕಾರ್ ಮಹೋತ್ಸವವು ಆ.25 ರಂದು ಆರಂಭವಾಗಿದ್ದು, ಸೆ.07 ರವರೆಗೆ ನಡೆಯಲಿದೆ.ಆ.31 ರಂದು ಸ್ಕ್ರಾಚ್ ಕಾರ್ಡ್ ನಲ್ಲಿ...
Ad Widget

ಅಂಬಟೆಡ್ಕದ ಆಯುರ್ವೇದಿಕ್ ಆಸ್ಪತ್ರೆ ಬಳಿ ಶ್ರೀ ಆಟೋಮೊಬೈಲ್ ಸ್ಪೇರ್ಸ್ ಶುಭಾರಂಭ

ಸುಳ್ಯದ ಅಂಬಟೆಡ್ಕದ ಕೆ.ವಿ.ಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ  ಶ್ರೀ ಆಟೋಮೊಬೈಲ್ ಸ್ಪೇರ್ಸ್ ಸಂಸ್ಥೆ ಆ.31 ರಂದು ಶುಭಾರಂಭಗೊಂಡಿತು. ಇಲ್ಲಿ ನಾಲ್ಕು ಚಕ್ರದ ವಾಹನಗಳ ಬಿಡಿಭಾಗಗಳು ಲಭ್ಯವಿರಲಿದೆ.ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭಾರೈಸಿದರು. ಅತಿಥಿಗಳಾಗಿ ನ.ಪಂ. ಸದಸ್ಯರಾದ ಎಂ ವೆಂಕಪ್ಪ ಗೌಡ, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್‌, ವರ್ತಕರ ಸಂಘದ...

ಕುಕ್ಕೆ ದೇವಳದಲ್ಲಿ ಹೊಸ್ತಾರೋಗಣೆ ; ಕದಿರು ಕಟ್ಟುವುದು ; ತೆನೆ ವಿತರಣೆ

ಸುಬ್ರಹ್ಮಣ್ಯ : ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆ.31 ಆದಿತ್ಯವಾರದಂದು ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹಕ್ಕೆ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತಾರಾಮ...

ಯೋಗ ಪಟು ಗೌರಿತಾಳಿಗೆ ಕರುನಾಡ ತಾರೆ ರಾಜ್ಯ ಪ್ರಶಸ್ತಿ

ಶ್ರೀ ಸರ್ವೇಜನಾ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್(ರಿ.) ನಾಗರ ಬಾವಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಭಾಗಿತ್ವದಲ್ಲಿ ಆ.31 ರಂದು ಸವಾಯಿ ಗಂಧರ್ವ ಕಲಾಮಂದಿರ ಹುಬ್ಬಳ್ಳಿಯಲ್ಲಿ ಯೋಗ ಪಟು ಗೌರಿತಾ ಕೆ.ಜಿ ಅವರಿಗೆ “ಕರುನಾಡ ತಾರೆ ರಾಜ್ಯ ಪ್ರಶಸ್ತಿ” ಪ್ರಧಾನ ಮಾಡಲಾಯಿತು. ಗೌರಿತಾ ಇದುವರೆಗೆ ಯೋಗದಲ್ಲಿ ಮಾಡಿದ 15 ದಾಖಲೆಗಳನ್ನು ಪರಿಶೀಲಿಸಿ...

ಕಲ್ಲಡ್ಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ದುರ್ಗಾಪರಮೇಶ್ವರಿ ಸೇವಾ ನಿವೃತ್ತಿ

ಮಂಡೆಕೋಲು ಗ್ರಾಮದ ಕಲ್ಲಡ್ಕ ಸ.ಕಿ.ಪ್ರಾ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ದುರ್ಗಾಪರಮೇಶ್ವರಿಯವರು ಆ.31 ರಂದು ಸೇವೆಯಿಂದ ನಿವೃತ್ತರಾದರು.1996ರಲ್ಲಿ ಸ.ಹಿ.ಪ್ರಾ ಶಾಲೆ ಅಡ್ಪಂಗಾಯದಲ್ಲಿ ವೃತ್ತಿ ಸೇವೆ ಆರಂಭಿಸಿ, 2023ರಿಂದ ಸ.ಉ.ಹಿ.ಪ್ರಾ ಶಾಲೆ ಮಂಡೆಕೋಲಿಗೆ ವರ್ಗಾವಣೆಗೊಂಡರು. ಅಲ್ಲಿ ಹದಿಮೂರುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದರು. 2016ರಲ್ಲಿ ಸ.ಕಿ.ಪ್ರಾ.ಶಾಲೆ ಕಲ್ಲಡ್ಕಕ್ಕೆ ವರ್ಗಾವಣೆಗೊಂಡರು. 30 ವರ್ಷಗಳ ಸೇವೆಯ ಬಳಿಕ ಆ.31ರಂದು...

ನಿಟ್ಟೆ ಎನ್ ಎಮ್ ಎ ಎಮ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಅಪೇಕ್ಷ್ ಎಂಪಿ ಆಯ್ಕೆ

ನಿಟ್ಟೆ ಎನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಅಪೇಕ್ಷ್ ಎಂ.ಪಿ. ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇವರು ಗುತ್ತಿಗಾರು ಗ್ರಾಮದ ಮಣಿಯಾನ ನಿವೃತ್ತ ಪಿಡಿಒ ಪುರುಷೋತ್ತಮ ಹಾಗೂ ಪೈಕ ಶಾಲಾ ಮುಖ್ಯಶಿಕ್ಷಕಿ ಸ್ನೇಹಲತಾ ದಂಪತಿಗಳ ಪುತ್ರ.

ಕಂದ್ರಪ್ಪಾಡಿ : ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ

ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ದೇವಚಳ್ಳ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಗಸ್ಟ್ 31 ರಂದು ಕಂದ್ರಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ...

ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಹರಿಹರ ಪಳ್ಳತ್ತಡ್ಕ ಪ್ರಾ.ಕೃ.ಪ.ಸ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನಮನೆ ರವರಿಗೆ ಸನ್ಮಾನ

ಆ.30 ರಂದು ಮಂಗಳೂರಿನಲ್ಲಿ ನಡೆದ ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಂತರಾಮ ಮಣಿಯಾನಮನೆ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

ನಡುಗಲ್ಲು : ಮರಕತ ಶ್ರೀದುರ್ಗಾ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷರಾಗಿ ವಿಜಯ ಕುಮಾರ್ ಚಾರ್ಮತ ; ಕಾರ್ಯದರ್ಶಿಯಾಗಿ ವಿಶ್ವನಾಥ ಕುತ್ಯಾಳ

ನಡುಗಲ್ಲು ಮರಕತ ಶ್ರೀದುರ್ಗಾ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಆ.27 ರಂದು ಸುಬ್ರಹ್ಮಣ್ಯ ಪಾಲ್ತಾಡು ರವರ ಮನೆಯಲ್ಲಿ ನಡೆಯಿತು.ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ವಿಜಯ ಕುಮಾರ್ ಚಾರ್ಮತ ಅವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿಶ್ವನಾಥ ಕುತ್ಯಾಳ ರವರು ಆಯ್ಕೆಯಾದರು.(ವರದಿ : ಉಲ್ಲಾಸ್ ಕಜ್ಜೋಡಿ)
Loading posts...

All posts loaded

No more posts

error: Content is protected !!