Ad Widget

ಸುಳ್ಯ : ವಿದ್ಯುತ್ ನಿರಂತರ ಕಣ್ಣುಮುಚ್ಚಾಲೆ – ಮಧ್ಯಾಹ್ನ ಆಗಮಿಸಿದ 33 ಕೆ.ವಿ ವಿದ್ಯುತ್  ಲೈನ್ ಮತ್ತೆ ಫಾಲ್ಟ್

ಕಳೆದ ಮೂರು ದಿನಗಳಿಂದ ನಿರಂತರ ವಿದ್ಯುತ್ ಕಣ್ಣುಮುಚ್ಚಾಲೆ ಆಟದಂತಾಗಿದ್ದು, ನಿನ್ನೆ ಸಂಜೆ ಹೋದ ಕರೆಂಟ್ ಇಂದು ಮಧ್ಯಾಹ್ನ ಸುಳ್ಯಕ್ಕೆ ಆಗಮಿಸಿತ್ತು. ಇದೀಗ ಮತ್ತೆ ಇಂದು ಸಂಜೆ ಮತ್ತೆ 33 ಕೆ.ವಿ ಸುಳ್ಯ ಲೈನ್ ಕೈಕೊಟ್ಟಿದ್ದು,  ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ವಿದ್ಯುತ್ ವಿಳಂಬವಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ.

ಜಾಲ್ಸೂರು : ಶ್ರೀ ಗುರು ರಾಘವೇಂದ್ರ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ಇದರ 26 ನೇ ಶ್ರೀ ಗುರು ರಾಘವೇಂದ್ರ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಜಾಲ್ಸೂರಿನ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದಲ್ಲಿ ಇಂದು ನಡೆಯಿತು. ಇದರ ಉದ್ಘಾಟನೆಯನ್ನು ಶ್ರೀ ಗುರು ರಾಘವೇಂದ್ರ ಭಜನಾ ಮಂದಿರ ಅಧ್ಯಕ್ಷರಾದ ಜಯರಾಮ್ ರೈ ರವರು  ಹಣ್ಣಿನ ಗಿಡವನ್ನು...
Ad Widget

ಕಲ್ಮಡ್ಕ : ಉದ್ಯಮಿ ಸತೀಶ್ ಎನ್.ಎಸ್.‌  ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಬ್ಯಾಗ್ ವಿತರಣೆ

ಕಲ್ಮಡ್ಕ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ (ಮಾಸ್ಟರ್ ಕ್ರಾಪ್ಟ್ಸ್ ) ಉದ್ಯಮಿ ಸತೀಶ್ ಎನ್.ಎಸ್.‌ ಅವರು ಶಾಲೆಯ 62 ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಬ್ಯಾಗ್ ವಿತರಣೆ ಕಾರ್ಯಕ್ರಮ ಜು. 26 ರಂದು ಶಾಲೆಯಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಾಯಿನಾರಾಯಣ ಕೆ ವಹಿಸಿದ್ದರು. ಹಿ.ವಿ.‌ಸಂಘದ ನಿರ್ದೇಶಕರಾದ ಸುಬ್ರಾಯ ಓಣ್ಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಗ್...

ಬಾಳಿಲ: ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿ (ರಿ) ಬಾಳಿಲ ಇದರ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕರು ಮತ್ತು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಅಧ್ಯಕ್ಷರಾದ ಮಾಧವ ಬಿ ಕೆ, ಶಾಲಾ...

33 ಕೆವಿ ವಿದ್ಯುತ್ ಲೈನ್ ಮೇಲೆ ವಿವಿಧೆಡೆ ಮರ ಬಿದ್ದು ಹಾನಿ –  ಭರದಿಂದ ಸಾಗಿದ ದುರಸ್ಥಿ ಕಾರ್ಯ – ಮಧ್ಯಾಹ್ನದ ವೇಳೆಗೆ ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ ನಿರೀಕ್ಷೆ

33 ಕೆವಿ ಸುಳ್ಯ ಲೈನ್ ನ ಮೇಲೆ ವಿವಿಧೆಡೆ  ಮರ ಹಾಗೂ ಗೆಲ್ಲು ಬಿದ್ದ ಪರಿಣಾಮ ನಿನ್ನೆ ಸಂಜೆಯಿಂದ ಸುಳ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದು, ಕುಂಬ್ರ, ಅಮ್ಚಿನಡ್ಕ, ಆನೆಗುಂಡಿ ಸಮೀಪ ಬಿದ್ದಿರುವ ಮರ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇಂದು ಮಧ್ಯಾಹ್ನದ ವೇಳೆಗೆ ಪುತ್ತೂರು ಕಡೆಯಿಂದ  ವಿದ್ಯುತ್ ಸರಬರಾಜು ಆಗುವ ನಿರೀಕ್ಷೆ ಇದೆ ಎಂದು ಮಾಹಿತಿ ಲಭ್ಯವಾಗಿದೆ....

ಸುಳ್ಯ : ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ “ಆಟಿದ ಕೂಟ”

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಸುಳ್ಯ ಶಾಖೆಯಲ್ಲಿ ಜು.26 ರಂದು “ಆಟಿದ ಕೂಟ” ನಡೆಯಿತು.ಆಟಿ ತಿಂಗಳು ಹಾಗೂ ನಾಗರ ಪಂಚಮಿಯ ಪ್ರಯುಕ್ತ ಜಿ.ಎಲ್ ಗ್ರಾಹಕರಿಗೆ ಹಾಗೂ ಸಿಬ್ಬಂದಿಗಳಿಗೆ ವಿಶೇಷ ಆಟಿಯ ತಿಂಡಿ-ತಿನಿಸುಗಳಾದ ಪತ್ರೋಡೆ, ಗೇನಸಾಲೆ ಹಾಗೂ ಕಷಾಯದ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸುಳ್ಯ ತಾಲೂಕು ಆಸ್ಪತ್ರೆಯ ನೂತನ ಆಡಳಿತ ವೈದ್ಯಾಧಿಕಾರಿಯವರಿಗೆ ಸುಳ್ಯ ಯುವ ಕಾಂಗ್ರೆಸ್ ನಿಂದ ಸ್ವಾಗತ

ಸುಳ್ಯ ತಾಲೂಕು ಆಸ್ಪತ್ರೆಗೆ ನೂತನ ವೈದ್ಯಾಧಿಕಾರಿಯಾಗಿ ಈ ಹಿಂದೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಇದೀಗ ಸುಳ್ಯ ತಾಲೂಕು ಆಸ್ಪತ್ರೆಗೆ ವರ್ಗಾವಣೆಗೊಂಡು ಬಂದು ಆಡಳಿತ ವೈದ್ಯಾಧಿಕಾರಿಯಾಗಿ ನಿಯುಕ್ತರಾಗಿರುವ ಶ್ರೀ ನವೀನ್ ಎಸ್.ಎನ್ ಅವರಿಗೆ ಸುಳ್ಯ ಯುವ ಕಾಂಗ್ರೆಸ್ ವತಿಯಿಂದ ತಾಲೂಕು ಆಸ್ಪತ್ರೆಯಲ್ಲಿ ಭೇಟಿಯಾಗಿ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ...

ಯೋಧರ ತ್ಯಾಗ ಬಲಿದಾನಗಳನ್ನು ವಿದ್ಯಾರ್ಥಿಗಳು ಸದಾ ನೆನೆಯಬೇಕು – ಕೆ.ಪಿ.ಜಗದೀಶ್ ; ಅರಂತೋಡು: ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿನ ಕಲಾ ಸಂಘ ಮತ್ತು ವಿಜ್ಞಾನ ಸಂಘಗಳ ಆಶ್ರಯದಲ್ಲಿಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವದಲ್ಲಿ ನಿವೃತ ಸೈನಿಕರಾದ ಶ್ರೀ ಕೆ ಪಿ ಜಗದೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಗಿಲ್ ಯೋಧರ ತ್ಯಾಗ ಬಲಿದಾನಗಳನ್ನು ವಿದ್ಯಾರ್ಥಿಗಳು ಸದಾ ನೆನೆಯಬೇಕು ಮತ್ತು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರಿ ಸೇವೆ ಸಲ್ಲಿಸಬೇಕೆಂದು...

ಸಂಪಾಜೆ :  ಕಲ್ಲುಗುಂಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ

ಸುಳ್ಯ ತಾಲೂಕು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಿಕ್ಷಣ ತರಗತಿ ಕೊಠಡಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿ ವೇಲು ಉದ್ಘಾಟನೆ ಮಾಡಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಅವಕಾಶ ಕಲ್ಪಿಸಿರುವುದರಿಂದ ಬಡವರ ಮಕ್ಕಳಿಗೆ ಅನುಕೂಲವಾಗಿದೆ ಕಾರ್ಯಕ್ರಮ ಆರಂಭಿಸಿದ ಸಿದ್ದರಾಮಯ್ಯ ಸರಕಾರಕ್ಕೆ...

ಕೊರಂಬಠ : ಮರ ಬಿದ್ದು 2 ಗಂಟೆಗಳ ಕಾಲ ನಡುಗಲ್ಲು-ಹರಿಹರ ರಸ್ತೆ ಬಂದ್ ; ವಾಹನ ಸಂಚಾರ ಸ್ಥಗಿತ

ನಡುಗಲ್ಲು-ಹರಿಹರ ರಸ್ತೆ ಮಧ್ಯದ ಕೊರಂಬಠ ಎಂಬಲ್ಲಿ ಬೃಹತ್ ಮರವೊಂದು ಬಳ್ಳಿಗಳ ಸಹಿತವಾಗಿ ಬಿದ್ದ ಪರಿಣಾಮ ವಾಹನ ಸಂಚಾರವು ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.‌ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ರಸ್ತೆಯನ್ನು ಪುನರ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Loading posts...

All posts loaded

No more posts

error: Content is protected !!