- Saturday
- March 7th, 2026
ದೇವಚಳ್ಳ ಗ್ರಾಮದ ಮಾಯಿಲಪ್ಪ ಮುಂಡೋಡಿ ರವರ ತೋಟಕ್ಕೆ ನಿರಂತರ ದಾಳಿ ನಡೆಸಿ ಅಪಾರ ಕೃಷಿಗೆ ಹಾನಿಮಾಡುತ್ತಿದೆ. ಕಳೆದೊಂದು ವಾರದಿಂದ ನಿರಂತರ ರಾತ್ರಿ ಆನೆ ದಾಳಿ ಮಾಡುತ್ತಿದ್ದು, 100 ಅಡಿಕೆ ಗಿಡ, 6 ತೆಂಗಿನಮರ ಹಾಗೂ ಬಾಳೆ ಗಿಡಗಳನ್ನು ನಾಶ ಮಾಡಿದ್ದು, ಅಪಾರ ನಷ್ಟದಿಂದ ಕೃಷಿಕರು ಕಂಗಾಲಾಗಿದ್ದಾರೆ. ಒಂದು ವಾರದಿಂದ ಪ್ರತಿನಿತ್ಯ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆ...
ಪೆರಾಜೆ ಸಮೀಪದ ಕಲ್ಚರ್ಪೆ ಶ್ರೀ ಕುರಲ್ ನಗರದ ಶ್ರೀ ವನದುರ್ಗಾ ಮತ್ತು ಸಪರಿವಾರ ದೈವಗಳ ದೈವಸ್ಥಾನದಲ್ಲಿ ಇಂದು ನಾಗರ ಪಂಚಮಿ ಅಂಗವಾಗಿ ನಾಗನಿಗೆ ಹಾಲಾಭಿಷೇಕ, ಸಿಯಾಳಭಿಷೇಕ ಹಾಗೂ ನಾಗತಂಬಿಲ ಸೇವೆಗಳು ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಊರ ಪರವೂರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.
ಆಚಾರ್ಯ ಯೋಗ ಯೂತ್ ಕ್ಲಬ್ ಬೆಂಗಳೂರು ಇವರ ಆಶ್ರಯದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಲಯ ಶ್ರೀ ರಾಜರಾಜೇಶ್ವರಿ ನಗರ ಬೆಂಗಳೂರು ಇಲ್ಲಿ ನಡೆದ ಐದನೇ ವರ್ಷದ ಕರ್ನಾಟಕ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯ 08 ರಿಂದ 10 ವಯೋಮಿತಿ ಬಾಲಕರ ವಿಭಾಗದಲ್ಲಿ ಆಶ್ರಿತ್.ಎ.ಸಿ ಅಮೆಮನೆ ಇವರು ಪ್ರಥಮ ಸ್ಥಾನವನ್ನು ಹಾಗೂ ವೈಯಕ್ತಿಕ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ರನ್ನರ್...
ಕೊಡಿಯಾಲದ ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಶಂಕರ ಮಯ್ಯ ರವರ ನೇತೃತ್ವದಲ್ಲಿ ನಾಗನಿಗೆ ಹಾಲಾಭಿಷೇಕ, ಸಿಯಾಳಭಿಷೇಕ ಹಾಗೂ ನಾಗತಂಬಿಲ ಸೇವೆಗಳು ದೇವಾಲಯದ ಆಡಳಿತ ಮಂಡಳಿ ಹಾಗೂ ಊರ-ಪರವೂರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.
ದೇವಚಳ್ಳ ಗ್ರಾಮದ ಅಡ್ಡನಪಾರೆ ಕಲ್ಲಾಜೆ ಕುಸುಮಾಧರ ಅವರ ಪತ್ನಿ ಪ್ರಮೀಳಾ (42) ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಇಂದು ವರದಿಯಾಗಿದೆ. ಬ್ರೈನ್ ಹೆಮರೇಜ್ ಗೆ ಒಳಗಾದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪತಿ, ಪುತ್ರ ಭವಿಷ್, ಪುತ್ರಿ ಮಹಿತಾ, ತಂದೆ, ತಾಯಿ, ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮವಾಗಿ ಸುಳ್ಯದ ಬಹುತೇಕ ಎಲ್ಲಾ ಕಡೆಗಳಲ್ಲಿ ಮರಬಿದ್ದು ವಿದ್ಯುತ್ ಕಂಬಗಳು ಹಾನಿಯಾದ ವರದಿಯನ್ನು ಮತ್ತು ಸಮಸ್ಯೆಗೊಳಗಾದ ಪ್ರದೇಶಕ್ಕೆ ಶೀಘ್ರವಾಗಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ಮೆಸ್ಕಾಂ ಎಮ್.ಡಿ ಜಯಕುಮಾರ್ ಅವರಿಗೆ ಕರೆ ಮಾಡಿ ಸುಳ್ಯ ಕಡಬ ಭಾಗದಲ್ಲಿ ಖಾಲಿ ಇರುವ ಪವರ್ ಮ್ಯಾನ್ ಹುದ್ದೆಗಳಿಗೆ ನೇಮಕಗೊಂಡಿರುವ...
ಗೌಡರ ಯುವ ಸೇವಾ ಸಂಘ ಸುಳ್ಯ, ತಾಲೂಕು ಗೌಡ ಮಹಿಳಾ ಘಟಕ ಸುಳ್ಯ ಇದರ ಆಶ್ರಯದಲ್ಲಿ ಮಹಿಳಾ ಘಟಕದ "ವರ್ಷ ಸಂಭ್ರಮ" ಕಾರ್ಯಕ್ರಮ ಸಾಂದೀಪ್ ವಿಶೇಷ ಶಾಲೆಯಲ್ಲಿ ಜು.28 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ವಿನುತಾ ಪಾತಿಕಲ್ಲು ವಹಿಸಿದ್ದರು. ಮುಖ್ಯ ಅತಿಥಿ ಡಾ.ಸಾಯಿಗೀತ ಜ್ಙಾನೇಶ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ...
ಕಳೆದ ಶನಿವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ಐನೆಕಿದು ಗ್ರಾಮದ ಗುಂಡಡ್ಕದಿಂದ ಮಲೆಯಾಳದವರೆಗೆ ಪೈಲಾಜೆ, ಐನೆಕಿದು, ಕೆರೆಕಾಡು ಹಾಗೂ ನವಗ್ರಾಮ ಸೇರಿದಂತೆ ಮುಂತಾದ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಇದ್ದ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿಬಿದ್ದು ಸುಮಾರು 10 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಅಲ್ಲದೇ ರಸ್ತೆಗೆ ಮರಗಳು ಉರುಳಿಬಿದ್ದು ವಾಹನ ಸಂಚಾರ ಸ್ಥಗಿತಗೊಂಡ ಸಂದರ್ಭದಲ್ಲಿ...
ಸುಬ್ರಹ್ಮಣ್ಯ ಜುಲೈ 24 : ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ ಸ್ಥಾಪಕರಾದ ಪೌಲ್ ಹ್ಯಾರಿಸ್ ಅವರ ಸವಿನೆನಪಿನಲ್ಲಿ ರೋಟರಿಯಲ್ಲಿ ಸಲ್ಲಿಸಿದ ಅತ್ಯುನ್ನತ ಸೇವೆಗಾಗಿ ಕೊಡಮಾಡುವ ಪದವಿ ಪೌಲ್ ಹ್ಯಾರಿಸ್ ಫೆಲೋಶಿಪ್(PHF) ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾದ ಚಂದ್ರಶೇಖರ ನಾಯರ್, ಪೂರ್ವಾಧ್ಯಕ್ಷರಾದ ಮೈಲಪ್ಪ ಸಂಕೇಶ ಹಾಗೂ ಕಾರ್ಯದರ್ಶಿ ಚಿದಾನಂದ ಕುಳ ಇವರಿಗೆ ಈ ಬಾರಿ...
ಸುಬ್ರಹ್ಮಣ್ಯ: ಜೆಸಿಐ ಕಡಬ ಕದಂಬ, ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಸೋಮವಾರ ನಡೆಯಿತು.ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್ ಇಂಜಾಡಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ನಿವೃತ್ತ ಸುಭೇದಾರ್ ವಾಸುದೇವ ಗೌಡ ನಡ್ಕ ದಿಕ್ಸೂಚಿ ಭಾಷಣ...
Loading posts...
All posts loaded
No more posts
