- Saturday
- March 7th, 2026
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್.ದ.ಕ ಮತ್ತು ಉಡುಪಿ ಜಿಲ್ಲೆ(ರಿ.), ಸುಳ್ಯ ವಲಯ ಪ್ರಸ್ತುತಪಡಿಸುವ ಕೃಷ್ಣಾಷ್ಟಮಿ ಸಂಭ್ರಮದ ಮಕ್ಕಳ ಫೋಟೋಸ್ಪರ್ಧೆ 2025 "ಕೃಷ್ಣ /ರಾಧಾ ಕಲರವ" ಇದರ ಪೋಸ್ಟರ್ ಅನ್ನು ಸುಳ್ಯದ ಆಸ್ತಾ ಸ್ಟುಡಿಯೋದಲ್ಲಿ ಬಿಡುಗಡೆಗೊಳಿಸಲಾಯಿತು.ವಲಯದ ಅಧ್ಯಕ್ಷರಾದ ಶಶಿ ಗೌಡ, ಸ್ಥಾಪಕಾಧ್ಯಕ್ಷರಾದ ಗೋಪಾಲ್ ಕೃಷ್ಣ, ಉಪಾಧ್ಯಕ್ಷರಾದ ಪ್ರಶಾಂತ್ ಶ್ರೇಣಿ, ಕೋಶಾಧಿಕಾರಿ ವೆಂಕಟೇಶ್, ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್.ಪಿ...
“ಕಾಲೇಜು ಜೀವನ ವಿದ್ಯಾರ್ಥಿಗಳ ಪಾಲಿಗೆ ಬಂಗಾರವಾದ ಜೀವನದ ಜೊತೆಗೆ ಬಂಗಾರದಂತ ಅವಕಾಶಗಳು ಲಭಿಸುತ್ತದೆ. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಜನೆಯ ಸಮಯದಲ್ಲಿ ಶ್ರಮಪಟ್ಟು ಸಾಧನೆ ಮಾಡಿದರೆ ಆ ಸಾಧನೆ ಮುದೊಂದು ದಿನ ಬದುಕಿಗೆ ದಾರಿದೀಪವಾಗಬಹುದು” ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿನ ಪ್ರಾಂಶುಪಾಲರಾದ ಸತೀಶ್ ಕುಮಾರ್.ಕೆ.ಆರ್...
ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ ವಿಧಿ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮವು ಜು.30 ರಂದು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ಇವರು ದೀಪ...
ನಿಂತಿಕಲ್ಲು ಚೊಕ್ಕಾಡಿ ಸುಳ್ಯ ಮಾರ್ಗದಲ್ಲಿ ಚಿನ್ನದ ಬ್ರಾಸ್ಲೈಟ್ ಕಳೆದು ಹೋಗಿದೆ. ಸಿಕ್ಕಿದವರು ದಯವಿಟ್ಟು ಹಿಂತಿರುಗಿಸಬೇಕೆಂದು ಚೇತನ್ ಪೈಕ (+917259903963) ವಿನಂತಿಸಿದ್ದಾರೆ.
ಸೋಣಂಗೇರಿ ಸಮೀಪ 6 ತಿಂಗಳ ಹಿಂದೆ ನಡೆದ ಕಾರು ಮತ್ತು ಸ್ಕೂಟಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ನಿವಾಸಿ ಉದಯಕುಮಾರ್(47) ಎಂಬವರು ನಿಧನರಾಗಿದ್ದಾರೆ.ಅಪಘಾತದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ಉದಯಕುಮಾರ್ ರ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಬಳಿಕ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತಾದರೂ ಅವರು ಕೋಮಾ ಸ್ಥಿತಿಯಲ್ಲೇ ಇದ್ದರು. ಜು.29ರಂದು ತೀವ್ರ...
ಛತ್ತೀಸ್ ಘಡ್ ನಲ್ಲಿ ಇಬ್ಬರು ಕ್ರೈಸ್ತ ಧರ್ಮಿಯರು ಸೇರಿ ಮೂವರನ್ನು ಸತ್ಯಕ್ಕೆ ದೂರವಾದ ಕಾರಣಗಳನ್ನು ಮುಂದಿಟ್ಟು ಬಂಧಿಸಿ ಜೈಲಿಗೆ ಹಾಕಲಾಗಿದೆ. ಇದು ಅತ್ಯಂತ ಹೀನಾಯ ಕೆಲಸ ಆಗಿದ್ದು, ಸರಕಾರ ಹಾಗೂ ಕೆಲವು ಸಂಘಟನೆಗಳು ಒಟ್ಟು ಸೇರಿ ಭಾರತದ ಸಂವಿಧಾನದಲ್ಲಿ ಹೇಳಿರುವ ಜಾತ್ಯಾತೀತ ಹಾಗೂ ಸಮಾಜವಾದ ಹಕ್ಕುಗಳ ಉಲ್ಲಂಘನೆ ಮಾಡಿರುತ್ತದೆ. ಇದು ಭಾರತದ ಪ್ರಜ್ಞಾವಂತ ಜನರು ಒಪ್ಪುವ...
ಕುಕ್ಕೆ ಸುಬ್ರಹ್ಮಣ್ಯದ ನೂಚಿಲ ಎಂಬಲ್ಲಿ 10 ಮನೆಗಳಿಗೆ ಸಂಪರ್ಕ ಕಲ್ಪಿಸುವ ಪಂಚಾಯತ್ ರಸ್ತೆಯ ಎಡಭಾಗದಲ್ಲಿ ಸುಮಾರು 35 ಅಡಿಯಷ್ಟು ಆಳದ ಬರೆ ಇದ್ದು, ಮೊನ್ನೆ ಸುರಿದ ಭಾರೀ ಮಳೆಗೆ ಈ ಬರೆ ಕುಸಿತಗೊಂಡಿದ್ದು, ಮಳೆಗೆ ಇನ್ನಷ್ಟು ಕುಸಿತವಾಗುವ ಸಂಭವವಿದೆ. ಹಾಗೆಯೇ ಈ ರಸ್ತೆಯಲ್ಲಿ ಸಂಚಾರವೂ ಕೂಡ ಕಷ್ಟಕರವಾಗುವ ಪರಿಸ್ಥಿತಿಯಲ್ಲಿ ಇದ್ದು, ಸ್ಥಳಕ್ಕೆ ಇಂದು(ಜು.29) ಸುಳ್ಯ ವಿಧಾನಸಭಾ...
ಸಾಂಸ್ಕೃತಿಕ ಸಂಘ ಹಳೆಗೇಟು ಸುಳ್ಯ ಇದರ ಆಶ್ರಯದಲ್ಲಿ ನಡೆಯುವ 42ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸುಳ್ಯ ಹಳೆಗೇಟಿನ ವಸಂತಕಟ್ಟೆಯಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ಬಾಲಗೋಪಾಲ್ ಸೇರ್ಕಜೆ ಸ್ವಾಗತಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಉಪಾಧ್ಯಕ್ಷರಾದ ಗಣೇಶ ಕೊಯಿಂಗೋಡಿ, ಶಿವನಾಥ್ ರಾವ್, ಜ್ಞಾನೇಶ್ವರ ಶೇಟ್, ರಾಕೇಶ್ ಕುಂಟಿಕಾನ, ರಾಮಕೃಷ್ಣ ...
ಐನೆಕಿದು ಕೆದಿಲ ತರವಾಡು ಮನೆಯಲ್ಲಿ ಇಂದು ನಾಗರ ಪಂಚಮಿ ನಡೆಯಿತು.ಕುಟುಂಬದ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜು.29 ರಂದು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ಸಂಹಿತ ಮತ್ತು ಸಿದ್ಧಾಂತ ವಿಭಾಗದ ನೇತೃತ್ವದಲ್ಲಿ ‘ಸ್ಮೃತಿ ಪ್ರಸ್ಥಾನ’ ಚರಕ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರಿನ ಸಂಹಿತ ಮತ್ತು ಸಿದ್ಧಾಂತ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ.ಸುಚಿತ್ರ...
Loading posts...
All posts loaded
No more posts
