Ad Widget

ಅರಂತೋಡು : ಅಗ್ನಿ ದುರಂತಕ್ಕೆ ತುತ್ತಾದ ಪಂಚಾಯತ್ ಘನ ತ್ಯಾಜ್ಯ ವಿಲೇವಾರಿ ಘಟಕದ ಪುನರ್ ನಿರ್ಮಾಣಕ್ಕೆ ಸಹಕಾರಿ ಸಂಘದಿಂದ 1 ಲಕ್ಷ ರೂಪಾಯಿ ಧನ ಸಹಾಯ ಘೋಷಣೆ

ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜು.09 ರಂದು ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಇದರ ಪುನರ್ ನಿರ್ಮಾಣಕಾಗಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಹಾಗೂ  ಜನಪ್ರತಿನಿಧಿಗಳ ಭೇಟಿ ಮಾಡಿ ಮನವಿ ಮಾಡಿದ್ದರು. ಇದೀಗ ಆರಂತೋಡು -ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಸಮಿತಿ ಸಭೆಯಲ್ಲಿ ಸಂಘ ದ ಉಪಾಧ್ಯಕ್ಷರು, ಆಡಳಿತ ಸಮಿತಿ ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳ ಉಪಸ್ಥಿತಿಯಲ್ಲಿ  ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರಿಗೆ ಸಹಾಯ ಹಸ್ತಕ್ಕಾಗಿ ಜು.29 ರಂದು ಮನವಿ ಸಲ್ಲಿಸಿದ್ದರು. ಮನವಿಗೆ ತಕ್ಷಣ ಸ್ಪಂದಿಸಿದ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಆಡಳಿತ ಸಮಿತಿ ಸದಸ್ಯರಲ್ಲಿ ಚರ್ಚೆ ನಡೆಸಿ “ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ  ಘಟಕವಾಗಿರುವುದರಿಂದ  ನಮಗೂ ಹೆಮ್ಮೆಯ ಸಂಗತಿಯಾಗಿರುವುದರಿಂದ ಅದರ ಪುನರ್ ನಿರ್ಮಾಣಕ್ಕೆ ನಮ್ಮ ಸಂಸ್ಥೆಯ ಕೊಡುಗೆ ಅಗತ್ಯತೆಯನ್ನು ಆಡಳಿತ ಸಮಿತಿ ಸದಸ್ಯರಿಗೆ ಮನವರಿಕೆ ಮಾಡಿ” ಸಹಕಾರಿ ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ 1 ಲಕ್ಷ ರೂಪಾಯಿ ಸಹಾಯಧನ ನೀಡಲು ಘೋಷಣೆ ಮಾಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading