Ad Widget

ನೆಲ್ಲೂರು ಕೆಮ್ರಾಜೆ : ಅಪಘಾತದ ಗಾಯಾಳು ಉದಯಕುಮಾರ್ ದಾಸನಕಜೆ ನಿಧನ

ಸೋಣಂಗೇರಿ ಸಮೀಪ 6 ತಿಂಗಳ ಹಿಂದೆ ನಡೆದ ಕಾರು ಮತ್ತು ಸ್ಕೂಟಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ನಿವಾಸಿ ಉದಯಕುಮಾರ್(47) ಎಂಬವರು ನಿಧನರಾಗಿದ್ದಾರೆ.
ಅಪಘಾತದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ಉದಯಕುಮಾರ್ ರ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಬಳಿಕ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತಾದರೂ ಅವರು ಕೋಮಾ ಸ್ಥಿತಿಯಲ್ಲೇ ಇದ್ದರು.
ಜು.29ರಂದು ತೀವ್ರ ಅಸ್ವಸ್ಥಗೊಂಡ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತಾದರೂ ಆ ವೇಳೆಗೆ ಅವರು ಕೊನೆಯುಸಿರೆಳೆದರು.
ಮೃತರು ತಂದೆ ನಾರಾಯಣ ನಾಯಕ್, ತಾಯಿ ವಾರಿಜ, ಪತ್ನಿ ಅನುರಾಧ, ಮಗ ಪವನ್ ಕುಮಾರ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading