Ad Widget

ಸುಳ್ಯ ವಲಯ ಫೊಟೋಗ್ರಾಫರ್ ಅಸೋಸಿಯೇಶನ್‌ ಅಧ್ಯಕ್ಷರಾಗಿ ಶಶಿ ಗೌಡ ಕೊಯಿಂಗೋಡಿ ಪುನರಾಯ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೆ.ಜಿ., ಕೋಶಾಧಿಕಾರಿಯಾಗಿ ಶ್ರೀಮತಿ ವಸಂತಿ ಹರೀಶ್ ಆಯ್ಕೆ

ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಸುಳ್ಯ ವಲಯದ 2024-25 ಸಭೆಯು ಜು. 22ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ವಲಯ ಅಧ್ಯಕ್ಷ ರಾದ ಶಶಿಗೌಡ ಕೊಯಿಂಗೋಡಿ ಅಧ್ಯಕ್ಷತೆ ವಹಿಸಿದ್ದರು.

. . . . . . . . .

ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ವಲಯದ ಸ್ಥಾಪಕಾಧ್ಯಕ್ಷರಾದ ಗೋಪಾಲ್ ಸುಳ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಬಂಟ್ವಾಳ, ಜಿಲ್ಲಾ ಸಂಚಾಲಕ ಕರುಣಾಕರ ಕಾನಂಗಿ, ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ಕಲಾತ್ರಿ , ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್ ರಾವ್, ಜಿಲ್ಲಾ ವಲಯದ ಕಟ್ಟಡ ಸಮಿತಿ ಸದಸ್ಯರಾದ ಲೋಕೇಶ್ ಸುಬ್ರಹ್ಮಣ್ಯ, ವಲಯದ ಮಾಜಿ ಅಧ್ಯಕ್ಷ ಕರುಣಾಕರ ಎಣ್ಣೆಮಜಲು, ವಲಯದ ಕಾರ್ಯದರ್ಶಿ ದಿನೇಶ್ ಏನೆಕಲ್ಲು, ಖಜಾಂಜಿ ವೆಂಕಟೇಶ್ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ವಲಯದ ಸದಸ್ಯರ ಮಕ್ಕಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘದ ಸದಸ್ಯರನ್ನು ಸಭೆಯಲ್ಲಿ ಗುರುತಿಸಿ ಸನ್ಮಾನಿಸಯಿತು.

. . . . . . .

ನೂತನವಾಗಿ ವಿವಾಹವಾದ ಸಂಘದ ಸದಸ್ಯರನ್ನು ಅಭಿನ೦ದಿ ಸಲಾಯಿತು. ಹಾಗೂ ಸಂಘಕ್ಕೆ ಸೇರ್ಪಡೆಗೊಂಡ ಸದಸ್ಯರನ್ನು ಸ್ವಾಗತಿಸಲಾಯಿತು. ಸಂಘದ ಸದಸ್ಯರಾಗಿದ್ದು, ರಕ್ತದಾನ ಮಾಡುತ್ತಿರುವ ದಾನಿಗಳನ್ನು ಗುರುತಿಸಲಾಯಿತು. ಜಿಲ್ಲಾಧ್ಯಕ್ಷ ಪದ್ಮಪ್ರಸಾದ್, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಕೋಶಾಧಿಕಾರಿ ನವೀನ್ ರೈ ಪಂಜಳರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ಆರೋಗ್ಯ ವಿಮೆ ಯನ್ನು ಸಂಘದ ವತಿಯಿಂದ ವ್ಯವಸ್ಥೆ ಮಾಡಲಾಗಿದ್ದು ಈ ಬಗ್ಗೆ ಜಿಲ್ಲಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇದೇ ಸಂದರ್ಭದಲ್ಲಿ ನಡೆಯಿತು. ಅಧ್ಯಕ್ಷರಾಗಿ ಶಶಿ ಗೌಡ ಕೊಯಿಂಗೋಡಿ ಪುನರಾಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಸುಧಾಕರ ರೈ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೆ.ಜಿ., ಕೋಶಾಧಿಕಾರಿಯಾಗಿ ಶ್ರೀಮತಿ ವಸಂತಿ ಹರೀಶ್ ಆಯ್ಕೆಯಾದರು.
ಉಪಾಧ್ಯಕ್ಷ ರಾಗಿ ಪ್ರಶಾಂತ್ ಶೇಣಿ, ಜತೆ ಕಾರ್ಯದರ್ಶಿ ಅವಿನ್ ಬೆಟ್ಟಂಪಾಡಿ, ಕ್ರೀಡಾ ಕಾರ್ಯದರ್ಶಿ ಕಿರಣ್ ಸುಳ್ಯ, ಸಂಘಟನಾ ಕಾರ್ಯದರ್ಶಿ ಸುಮಂತ್, ಛಾಯಾ ಕಾರ್ಯದರ್ಶಿ ಕೀರ್ತನ್ ಸುಳ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಶಿವಪ್ರಸಾದ್ ರೈ ಸುಳ್ಯ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಭರತ್ ಬೆಳ್ಳಾರೆ, ಯಕ್ಷಿತ್ ಕಲ್ಲುಗುಂಡಿ, ಉಲ್ಲಾಸ್ ಮುಚ್ಚಾರ, ಪ್ರಕಾಶ್ ಸುಬ್ರಹ್ಮಣ್ಯ, ರಮೇಶ್ ಸುಳ್ಯ, ಜಿಲ್ಲಾ ಕಾರ್ಯಕಾರಿ ಸಮಿತಿ ಗೆ ಶಶಿಗೌಡ ಸುಳ್ಯ, ಸತೀಶ್ ಕೆ.ಜಿ.ಸುಳ್ಯ, ಪರಂ ಸುಳ್ಯ, ಲೋಕೇಶ್ ಸುಬ್ರಹ್ಮಣ್ಯ, ಅನುರಾಜ್ ಪಂಜ, ಸುಧಾಕರ ರೈ ಬೆಳ್ಳಾರೆ ಆಯ್ಕೆಯಾದರು.ಕರುಣಾಕರ ಎಣ್ಣೆಮಜಲು ಸ್ವಾಗತಿಸಿದರು. ವಸಂತಿ ಹರೀಶ್ ರಾವ್ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading