Ad Widget

ಸುಬ್ರಹ್ಮಣ್ಯ : ನೂಚಿಲದಲ್ಲಿ ರಸ್ತೆ ಬದಿ ಕುಸಿತ

ಸ್ಥಳಕ್ಕೆ ಭೇಟಿ ನೀಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ

ಕುಕ್ಕೆ ಸುಬ್ರಹ್ಮಣ್ಯದ ನೂಚಿಲ ಎಂಬಲ್ಲಿ 10 ಮನೆಗಳಿಗೆ ಸಂಪರ್ಕ ಕಲ್ಪಿಸುವ ಪಂಚಾಯತ್ ರಸ್ತೆಯ ಎಡಭಾಗದಲ್ಲಿ ಸುಮಾರು 35 ಅಡಿಯಷ್ಟು ಆಳದ ಬರೆ ಇದ್ದು, ಮೊನ್ನೆ ಸುರಿದ ಭಾರೀ ಮಳೆಗೆ ಈ ಬರೆ ಕುಸಿತಗೊಂಡಿದ್ದು, ಮಳೆಗೆ ಇನ್ನಷ್ಟು ಕುಸಿತವಾಗುವ ಸಂಭವವಿದೆ. ಹಾಗೆಯೇ ಈ ರಸ್ತೆಯಲ್ಲಿ ಸಂಚಾರವೂ ಕೂಡ ಕಷ್ಟಕರವಾಗುವ ಪರಿಸ್ಥಿತಿಯಲ್ಲಿ ಇದ್ದು, ಸ್ಥಳಕ್ಕೆ ಇಂದು(ಜು.29) ಸುಳ್ಯ ವಿಧಾನಸಭಾ...

ಸಾಂಸ್ಕೃತಿಕ ಸಂಘ ಹಳೆಗೇಟು : 42ನೇ ವರ್ಷದ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಸಾಂಸ್ಕೃತಿಕ ಸಂಘ ಹಳೆಗೇಟು ಸುಳ್ಯ ಇದರ ಆಶ್ರಯದಲ್ಲಿ ನಡೆಯುವ 42ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸುಳ್ಯ ಹಳೆಗೇಟಿನ ವಸಂತಕಟ್ಟೆಯಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ಬಾಲಗೋಪಾಲ್ ಸೇರ್ಕಜೆ  ಸ್ವಾಗತಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಉಪಾಧ್ಯಕ್ಷರಾದ ಗಣೇಶ  ಕೊಯಿಂಗೋಡಿ, ಶಿವನಾಥ್ ರಾವ್, ಜ್ಞಾನೇಶ್ವರ ಶೇಟ್, ರಾಕೇಶ್ ಕುಂಟಿಕಾನ, ರಾಮಕೃಷ್ಣ ...
Ad Widget

ಐನೆಕಿದು : ಕೆದಿಲ ತರವಾಡು ಮನೆಯಲ್ಲಿ ನಾಗರ ಪಂಚಮಿ ಆಚರಣೆ

ಐನೆಕಿದು ಕೆದಿಲ ತರವಾಡು ಮನೆಯಲ್ಲಿ ಇಂದು ನಾಗರ ಪಂಚಮಿ ನಡೆಯಿತು.ಕುಟುಂಬದ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚರಕ ಜಯಂತಿ ಆಚರಣೆ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜು.29 ರಂದು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ಸಂಹಿತ ಮತ್ತು ಸಿದ್ಧಾಂತ ವಿಭಾಗದ ನೇತೃತ್ವದಲ್ಲಿ ‘ಸ್ಮೃತಿ ಪ್ರಸ್ಥಾನ’ ಚರಕ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರಿನ ಸಂಹಿತ ಮತ್ತು ಸಿದ್ಧಾಂತ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ.ಸುಚಿತ್ರ...

ದೇವಚಳ್ಳ : ತೋಟಕ್ಕೆ ನಿರಂತರ ಆನೆ ದಾಳಿ

ಅಪಾರ ಕೃಷಿ ಹಾನಿ

ದೇವಚಳ್ಳ ಗ್ರಾಮದ ಮಾಯಿಲಪ್ಪ ಮುಂಡೋಡಿ ರವರ ತೋಟಕ್ಕೆ ನಿರಂತರ ದಾಳಿ ನಡೆಸಿ ಅಪಾರ ಕೃಷಿಗೆ ಹಾನಿಮಾಡುತ್ತಿದೆ. ಕಳೆದೊಂದು ವಾರದಿಂದ ನಿರಂತರ ರಾತ್ರಿ ಆನೆ ದಾಳಿ ಮಾಡುತ್ತಿದ್ದು, 100 ಅಡಿಕೆ ಗಿಡ, 6 ತೆಂಗಿನಮರ ಹಾಗೂ ಬಾಳೆ ಗಿಡಗಳನ್ನು ನಾಶ ಮಾಡಿದ್ದು, ಅಪಾರ ನಷ್ಟದಿಂದ ಕೃಷಿಕರು ಕಂಗಾಲಾಗಿದ್ದಾರೆ. ಒಂದು ವಾರದಿಂದ ಪ್ರತಿನಿತ್ಯ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆ...

ಕಲ್ಚರ್ಪೆ : ನಾಗರ ಪಂಚಮಿ ಆಚರಣೆ

ಪೆರಾಜೆ ಸಮೀಪದ ಕಲ್ಚರ್ಪೆ ಶ್ರೀ ಕುರಲ್ ನಗರದ ಶ್ರೀ ವನದುರ್ಗಾ ಮತ್ತು ಸಪರಿವಾರ ದೈವಗಳ ದೈವಸ್ಥಾನದಲ್ಲಿ ಇಂದು ನಾಗರ ಪಂಚಮಿ ಅಂಗವಾಗಿ ನಾಗನಿಗೆ ಹಾಲಾಭಿಷೇಕ, ಸಿಯಾಳಭಿಷೇಕ ಹಾಗೂ ನಾಗತಂಬಿಲ ಸೇವೆಗಳು ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಊರ ಪರವೂರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.

ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಆಶ್ರಿತ್.ಎ.ಸಿ ಅಮೆಮನೆ ಪ್ರಥಮ

ಆಚಾರ್ಯ ಯೋಗ ಯೂತ್ ಕ್ಲಬ್ ಬೆಂಗಳೂರು ಇವರ ಆಶ್ರಯದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಲಯ ಶ್ರೀ ರಾಜರಾಜೇಶ್ವರಿ ನಗರ ಬೆಂಗಳೂರು ಇಲ್ಲಿ ನಡೆದ ಐದನೇ ವರ್ಷದ ಕರ್ನಾಟಕ ರಾಜ್ಯಮಟ್ಟದ  ಮುಕ್ತ ಯೋಗಾಸನ ಸ್ಪರ್ಧೆಯ 08 ರಿಂದ 10 ವಯೋಮಿತಿ ಬಾಲಕರ ವಿಭಾಗದಲ್ಲಿ ಆಶ್ರಿತ್.ಎ.ಸಿ ಅಮೆಮನೆ ಇವರು ಪ್ರಥಮ ಸ್ಥಾನವನ್ನು ಹಾಗೂ ವೈಯಕ್ತಿಕ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ರನ್ನರ್...

ಕೊಡಿಯಾಲ : ನಾಗರ ಪಂಚಮಿ ಆಚರಣೆ

ಕೊಡಿಯಾಲದ ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಶಂಕರ ಮಯ್ಯ ರವರ ನೇತೃತ್ವದಲ್ಲಿ ನಾಗನಿಗೆ ಹಾಲಾಭಿಷೇಕ, ಸಿಯಾಳಭಿಷೇಕ ಹಾಗೂ ನಾಗತಂಬಿಲ ಸೇವೆಗಳು ದೇವಾಲಯದ ಆಡಳಿತ ಮಂಡಳಿ ಹಾಗೂ ಊರ-ಪರವೂರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.
error: Content is protected !!