Ad Widget

ಮರ್ಕಂಜ : ಪ್ರೌಢಶಾಲೆಯಲ್ಲಿ ಪೋಷಕರ ಸಭೆ

ಸರ್ಕಾರಿ ಪ್ರೌಢಶಾಲೆ ಮರ್ಕಂಜದಲ್ಲಿ ಪಠ್ಯಧಾರಿತ ಮೌಲ್ಯಾಂಕನ ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನ, ಸಚೇತನ ಕಾರ್ಯಕ್ರಮ ಹಾಗೂ ಮಾದಕ ವಸ್ತುಗಳ ಜಾಗೃತಿ ಮುಂತಾದ ವಿಷಯಗಳ ಕುರಿತು ಪೋಷಕರಿಗೆ ಮಾಹಿತಿ ನೀಡುವ ಸಲುವಾಗಿ ಜು.26 ರಂದು ಪೋಷಕರ ಸಭೆ ನಡೆಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಭೀಮಗುಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ವೀಣಾ.ಎಂ.ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ದಿನಕರ.ಕೆ, ಕುಶಾಲಪ್ಪ.ಕೆ, ಮಹಾವೀರ ಇಂದ್ರ ಜೈನ್, ಹೇಮಕುಮಾರ್.ಕೆ, ದಿನೇಶ್.ಕೆ, ಶ್ರೀಮತಿ ಸುಚೇತ ರೈ, ಶ್ರೀಮತಿ ವಿಶಾಲಾಕ್ಷಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಹೊಸೊಳಿಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜ-ವಿಜ್ಞಾನ ಶಿಕ್ಷಕರಾದ ಶ್ರೀಮತಿ ರುಕ್ಮಿಣಿ ರವರು ಪಠ್ಯಧಾರಿತ ಮೌಲ್ಯಾಂಕನದ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು. ಕನ್ನಡ ಶಿಕ್ಷಕರಾದ ಶ್ರೀಮತಿ ವಿಜಯಲಕ್ಷ್ಮೀ ರವರು ಸಚೇತನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಇದರ ಅಂಗವಾಗಿ ಪೋಷಕರಿಗೆ ರಸಪ್ರಶ್ನೆ ಹಾಗೂ ಪದಬಂಡಿ ಚಟುವಟಿಕೆಯನ್ನು ಶಿಕ್ಷಕರಾದ ಮಲ್ಲಿಕಾ.ಟಿ ರವರು ನಡೆಸಿಕೊಟ್ಟರು.
ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್.ಎಂ.ಟಿ ರವರು ವಿವರಿಸಿ ಪ್ರತಿಜ್ಞಾವಿಧಿ ಬೋಧಿಸಿದರು.
ವಿಜ್ಞಾನ ಶಿಕ್ಷಕರಾದ ಶ್ರೀಮತಿ ಉಮಾ ಕುಮಾರಿ ರವರು ಮಕ್ಕಳ ಸ್ಕಾಲರ್ ಶಿಪ್ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕರಾದ ಶ್ರೀಮತಿ ವೀಣಾ.ಎಂ.ಟಿ ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ಚಿನ್ಮಯ ಹಾಗೂ ಅನಘ ಇವರು “ನನ್ನ ಕಲಿಕೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶ್ರೀಮತಿ ಉಮಾ ಕುಮಾರಿ ವಂದಿಸಿದರು. ಗಣೇಶ್.ಎಂ.ಟಿ ಕಾರ್ಯಕ್ರಮ ನಿರೂಪಿಸಿದರು. ಅಡುಗೆ ಸಿಬ್ಬಂದಿಗಳು ಸಹಕರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading