Ad Widget

ವಿದ್ಯುತ್ ಸಮಸ್ಯೆಯ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದ ಶಾಸಕರು

ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮವಾಗಿ ಸುಳ್ಯದ ಬಹುತೇಕ ಎಲ್ಲಾ ಕಡೆಗಳಲ್ಲಿ ಮರಬಿದ್ದು  ವಿದ್ಯುತ್ ಕಂಬಗಳು ಹಾನಿಯಾದ ವರದಿಯನ್ನು ಮತ್ತು ಸಮಸ್ಯೆಗೊಳಗಾದ ಪ್ರದೇಶಕ್ಕೆ ಶೀಘ್ರವಾಗಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ಮೆಸ್ಕಾಂ ಎಮ್.ಡಿ ಜಯಕುಮಾರ್ ಅವರಿಗೆ ಕರೆ ಮಾಡಿ ಸುಳ್ಯ ಕಡಬ ಭಾಗದಲ್ಲಿ ಖಾಲಿ ಇರುವ ಪವರ್ ಮ್ಯಾನ್ ಹುದ್ದೆಗಳಿಗೆ ನೇಮಕಗೊಂಡಿರುವ ನೌಕರರನ್ನು ತಕ್ಷಣವೇ ಕೆಲಸಕ್ಕೆ ಹಾಜರಾಗುವಂತೆ ಸೂಚಿಸುವಂತೆ ಎಮ್.ಡಿ ಯರಿಗೆ ತಿಳಿಸಿದರು ಹಾಗೂ ಅರಣ್ಯ ಇಲಾಖೆಯಿಂದ ಲೈನ್ ಗೆ ಬೀಳಬಹುದಾದ ಮರಗಳನ್ನು ಕತ್ತರಿಸಲು  ಬೇಕಾಗುವ ಎಲ್ಲಾ ನೆರವನ್ನು ನೀಡುವಂತೆ ಸಭೆಯಲ್ಲಿ ಹಾಜರಿದ್ದ ರೇಂಜರ್ ಮಂಜುನಾಥ ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ಚನಿಯ ಕಲ್ತಡ್ಕ, ಸುಧಾಕರ ಕುರುಂಜಿ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ನೀಕೇಶ್ ರಾಜ್ ಉಬರಡ್ಕ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading