Ad Widget

ಸಂಪಾಜೆ : ಎರಕಡುಪು ಸೇತುವೆ ರಸ್ತೆ  ಸಂಚಾರಕ್ಕೆ ಮುಕ್ತ – ಆರ್.ಟಿ.ಐ ಕಾರ್ಯಕರ್ತರ ಹೋರಾಟಕ್ಕೆ ಫಲ

ಸಂಪಾಜೆ ಗ್ರಾಮದ ಎರಕಡುಪು ಎಂಬಲ್ಲಿ ನಿರ್ಮಿಸಿದ ಸೇತುವೆಗೆ ಕಿಂಡಿ ಅಣೆಕಟ್ಟು ವಾಹನ ಸಂಚಾರಕ್ಕೆ ದುಸ್ತರವಾಗಿರುವ ಬಗ್ಗೆ ಸ್ಥಳೀಯ ನಿವಾಸಿ ಮತ್ತು ಸಾಮಾಜಿಕ ಕಾರ್ಯಕರ್ತರಾದ ಕೆ.ಸೀತಾರಾಮ ಗೌಡರವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಮಂಗಳೂರು ಇವರಿಂದ ಟೆಂಡರ್ ಪ್ರಕಾರ ರೂ.4 ಕೋಟಿಗಳಿಗೆ ಸೇತುವೆ ಕಂ.ಕಿಂಡಿ ಅಣೆಕಟ್ಟು ನಿರ್ಮಿಸಿದ ಬಗ್ಗೆ ಮಾಹಿತಿ ಹಕ್ಕಿನಡಿ ಪಡೆದ ವಿವರಗಳೊಂದಿಗೆ ಮೇ.09 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಡಿ.ಯಂ.ಶಾರಿಖ್ ರವರ ನೇತೃತ್ವದಲ್ಲಿ ದೂರು ಸಲ್ಲಿಸಿದ್ದರು.
ಇದರ ಬಗ್ಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಸಹಾಯಕ ಕಮಿಷನರ್ ಪುತ್ತೂರು ಇವರಿಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸೂಚಿಸಿದ್ದು, ಸಹಾಯಕ ಕಮಿಷನರ್ ಸುಳ್ಯ ತಾಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆರ್ ಟಿ ಐ ಕಾರ್ಯಕರ್ತ ಡಿ.ಯಂ ಶಾರಿಖ್ ಸೇತುವೆಯ ಸಮೀಪ ರಸ್ತೆ ತೀರಾ ಇಕ್ಕಟ್ಟಾಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಸಮಸ್ಯೆಯನ್ನು ವಿವರಿಸಿದಾಗ ಸಹಾಯಕ ಕಮಿಷನರ್ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಕಂದಾಯ ನಿರೀಕ್ಷಕರಿಗೆ ಸೂಚಿಸಿದ್ದರು.
ಈ ಬಗ್ಗೆ ಕಂದಾಯ ಇಲಾಖೆ, ಪೋಲಿಸ್ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಕಾರ್ಯೋನ್ಮುಖರಾಗಿ ದೂರುದಾರರಾದ ಕೆ.ಸೀತಾರಾಮ ಗೌಡರು ಉಪಸ್ಥಿತಿಯಲ್ಲಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ವಾಹನಗಳ ಸುಗಮ ಸಂಚಾರಕ್ಕೆ ಜುಲೈ 23 ರಂದು ಮುಕ್ತಗೊಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading