Ad Widget

ಕಲ್ಮಡ್ಕ : ಉದ್ಯಮಿ ಸತೀಶ್ ಎನ್.ಎಸ್.‌  ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಬ್ಯಾಗ್ ವಿತರಣೆ

ಕಲ್ಮಡ್ಕ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ (ಮಾಸ್ಟರ್ ಕ್ರಾಪ್ಟ್ಸ್ ) ಉದ್ಯಮಿ ಸತೀಶ್ ಎನ್.ಎಸ್.‌ ಅವರು ಶಾಲೆಯ 62 ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಬ್ಯಾಗ್ ವಿತರಣೆ ಕಾರ್ಯಕ್ರಮ ಜು. 26 ರಂದು ಶಾಲೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಾಯಿನಾರಾಯಣ ಕೆ ವಹಿಸಿದ್ದರು. ಹಿ.ವಿ.‌ಸಂಘದ ನಿರ್ದೇಶಕರಾದ ಸುಬ್ರಾಯ ಓಣ್ಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಗ್ ಗಳನ್ನು ಕೊಡುಗೆಯಾಗಿ ಉದ್ಯಮಿ ಸತೀಶ್ ಎನ್ ಎಸ್ ರವರ ಪರಿಚಯವನ್ನು ಸಭೆಗೆ ನೀಡಿದರು. ಮುಖ್ಯ ಅತಿಥಿಗಳಾದ ನಿವೃತ್ತ ಮುಖ್ಯ ಶಿಕ್ಷಕಿ ಕಮಲಾ ಜೆ ನಡ್ಕ ಇವರು ಮಕ್ಕಳಿಗೆ ಬ್ಯಾಗ್ ಗಳನ್ನು ವಿತರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಬ್ಯಾಗ್ ಗಳನ್ನು ಕೊಡುಗೆಯನ್ನಾಗಿ ನೀಡಿದ ಉದ್ಯಮಿಗಳು ಶಾಲಾ ಮಕ್ಕಳ ಮೇಲಿನ ಪ್ರೀತಿಯಿಂದ ಕೊಡುಗೆ ನೀಡಿದ್ದನ್ನು ಕೃತಜ್ಞತಾಪೂರ್ವಕ ನೆನಪಿಸಿಕೊಂಡರು. ಆಂಗ್ಲ ಮಾಧ್ಯಮದ ಶಿಕ್ಷಣದ ಅನಿವಾರ್ಯತೆ ಇದೆ. ನಮ್ಮ ಶಾಲೆಯಲ್ಲೂ ಆಂಗ್ಲ ಮಾಧ್ಯಮದ ಶಾಖೆಯನ್ನು ಪ್ರಾರಂಭಿಸಿಬೇಕು. ಇದು ಶತಮಾನೋತ್ಸವ ಸಂಭ್ರಮಕ್ಕೆ ಬುನಾದಿಯಾಗಬೇಕು ಎಂದರು. ಹಿರಿಯ ವಿದ್ಯಾರ್ಥಿ ಸಂಘವು ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದನ್ನು ಶ್ಲಾಘಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಕಾಚಿಲ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಜ್ರಾಕ್ಷಿ ಎಂ., ಸಂಘದ ಉಪಾಧ್ಯಕ್ಷರಾದ ರವೀಂದ್ರ ಮಾಳಿಗೆ, ಸಂಘದ ನಿರ್ದೇಶಕರಾದ ನಂದನ್ ಎಂ.ಎಸ್. ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಸತ್ಯಮೂರ್ತಿ ಓಣ್ಯಡ್ಕ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ರಾಮ ಮೂರ್ತಿ ಪೈಲೂರ್ ಸ್ವಾಗತಿಸಿದರು. ಶಾಲಾ ಶಿಕ್ಷಕಿ ವನಜಾಕ್ಷಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading