Ad Widget

ಹರಿಹರ ಪಳ್ಳತ್ತಡ್ಕ : ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನಮನೆ ರವರಿಗೆ ಬೀಳ್ಕೊಡುಗೆ ಸಮಾರಂಭ

ನಿವೃತ್ತರಾದ ಚಂದ್ರಶೇಖರ ಬಟ್ಟೋಡಿ, ರವೀಂದ್ರ.ಎಂ ಹಾಗೂ ಪುಷ್ಪಾವತಿ ಹೂವಪ್ಪ ಕಂಚುಗಾರಗದ್ದೆ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭ

“ಬಡತನದಿಂದ ಬೆಳೆದು ಬಂದು ಸಂಘವನ್ನು ಸಧೃಡವಾಗಿಸಿದ ಸಿಬ್ಬಂದಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯ” – ಡಾ. ಸೋಮಶೇಖರ ಕಟ್ಟೆಮನೆ

ಕಳೆದ 40 ವರ್ಷಗಳಿಂದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ನಿವೃತ್ತರಾದ ಅನಂತರಾಮ ಮಣಿಯಾನಮನೆ ರವರಿಗೆ ಬೀಳ್ಕೊಡುವ ಸಮಾರಂಭ ಹಾಗೂ ಸಂಘದ 2024-25ನೇ ಸಾಲಿನ ನಿವೃತ್ತ ಸಿಬ್ಬಂದಿಗಳಿಗೆ ಸಾರ್ವಜನಿಕ ಸನ್ಮಾನ ಸಮಾರಂಭವು ಜು.26 ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವರಾಮ ಕುಂಞೇಟಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಿರಿಯ ವೈದ್ಯರು ಹಾಗೂ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಡಾ| ಚಂದ್ರಶೇಖರ ಕಿರಿಭಾಗ ರವರು ಅನಂತರಾಮ ಮಣಿಯಾನಮನೆ ಹಾಗೂ ಶ್ರೀಮತಿ ಉಷಾ ದಂಪತಿಗಳನ್ನು ಸನ್ಮಾನಿಸಿದರು.
ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತಿಯಾದ ಚಂದ್ರಶೇಖರ ಬಟ್ಟೋಡಿ ದಂಪತಿಗಳನ್ನು, ರವೀಂದ್ರ.ಎಂ ದಂಪತಿಗಳನ್ನು ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೂವಪ್ಪ ಕಂಚುಗಾರಗದ್ದೆ ರವರ ಪರವಾಗಿ ಅವರ ಪತ್ನಿ ಪುಷ್ಪಾವತಿ ಅವರನ್ನು ಗೌರವಿಸಲಾಯಿತು.
ನಿವೃತ್ತ ಪ್ರಾಂಶುಪಾಲರಾದ ಪ್ರಭಾಕರ ಕಿರಿಭಾಗ ಅಭಿನಂದನಾ ಭಾಷಣ ಮಾಡಿದರು.
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ರವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಕೆ.ಜಿ ಶಂಭಯ್ಯ ಪನ್ನೆ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಛೇರಿಯ ಸ್ಥಳಧಾನಿಗಳಾದ ಶ್ರೀಮತಿ ಭವಾನಿ ಶಿವರಾಮ ಗೌಡ ಮುಂಡಾಜೆ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಿ.ಎಸ್ ಹರ್ಷಕುಮಾರ್ ದೇವಜನ, ವೈದ್ಯರಾದ ಡಾ| ಗಿರೀಶ್.ಕೆ.ಜಿ ಉರಿಮಜಲು, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ್ ಕುಮಾರ್ ಅಂಙಣ, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಕಟ್ಟ, ಹರಿಹರ ಪಳ್ಳತ್ತಡ್ಕ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರಾಮಚಂದ್ರ ಕಜ್ಜೋಡಿ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ವಿನೂಪ್ ಮಲ್ಲಾರ, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಪ್ರಗತಿಪರ ಕೃಷಿಕರಾದ ಚಂದ್ರಹಾಸ ಶಿವಾಲ, ಸುಳ್ಯ ಕೆ.ವಿ.ಜಿ ಪವರ್ ಹೌಸ್ ನ ಕಾರ್ಯನಿರ್ವಹಣಾಧಿಕಾರಿಗಳಾದ ವಸಂತ ಕಿರಿಭಾಗ ಹಾಗೂ ನಿವೃತ್ತ ಸಬ್ ಇನ್ಸ್ಪೆಕ್ಟರ್ ಸುಬ್ಬಣ್ಣ ಗೌಡ ಮಣಿಯಾನಮನೆ, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಸಹಕಾರಿ ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ ಮಣಿಯಾನ ಮನೆ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿಗಳಾದ ಗೌರೀಶ್ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೆಶಕರಾದ ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕಿರಿಭಾಗ, ಕಮಲಾಕ್ಷ ಮುಳ್ಳುಬಾಗಿಲು, ರೇಗನ್ ಶೆಟ್ಟಿಯಡ್ಕ, ಡ್ಯಾನಿ ಯಾಲದಾಳು, ಗೋಪಾಲಕೃಷ್ಣ ಚಾಂತಾಳ, ಮಹಾಲಿಂಗ ನಾಯ್ಕ ಶಿರೂರು, ಬೊಳಿಯ ಅಜಿಲ ಬೆಂಡೋಡಿ, ವೇದಾವತಿ ಮುಳ್ಳುಬಾಗಿಲು, ಮೇನಕಾ ಕೊಪ್ಪಡ್ಕ ಭಾಗವಹಿಸಿದ್ದರು.
ಸಂಘದ ನಿರ್ದೇಶಕರಾದ ಹಿಮ್ಮತ್ ಕಿರಿಭಾಗ ರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಂಘದ ನಿರ್ದೇಶಕರಾದ ಕಮಲಾಕ್ಷ ಮುಳ್ಳುಬಾಗಿಲು ವಂದಿಸಿದರು. 
ಸಿಬ್ಬಂದಿ ಅಪೂರ್ವ  ಸನ್ಮಾನಪತ್ರ ವಾಚಿಸಿದರು.
ಸಂಘದ ಸಿಬ್ಬಂದಿ ಪುಷ್ಪಲತಾ  ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading