Ad Widget

ಯೋಧರ ತ್ಯಾಗ ಬಲಿದಾನಗಳನ್ನು ವಿದ್ಯಾರ್ಥಿಗಳು ಸದಾ ನೆನೆಯಬೇಕು – ಕೆ.ಪಿ.ಜಗದೀಶ್ ; ಅರಂತೋಡು: ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿನ ಕಲಾ ಸಂಘ ಮತ್ತು ವಿಜ್ಞಾನ ಸಂಘಗಳ ಆಶ್ರಯದಲ್ಲಿ
ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವದಲ್ಲಿ ನಿವೃತ ಸೈನಿಕರಾದ ಶ್ರೀ ಕೆ ಪಿ ಜಗದೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಗಿಲ್ ಯೋಧರ ತ್ಯಾಗ ಬಲಿದಾನಗಳನ್ನು ವಿದ್ಯಾರ್ಥಿಗಳು ಸದಾ ನೆನೆಯಬೇಕು ಮತ್ತು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರಿ ಸೇವೆ ಸಲ್ಲಿಸಬೇಕೆಂದು ಹೇಳಿದರು ನಂತರ ಅವರು ಭಾರತೀಯ ಸೇನೆಗೆ ಹೇಗೆ ನೋಂದಾಯಿಸಿ ಕೊಳ್ಳಬೇಕು ಸೇನೆಗೆ ಸೇರಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕರಾದ ಶ್ರೀ ಸುರೇಶ್ ವಾಗ್ಲೆ ಸರ್ ವಹಿಸಿದ್ದರು ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಜಿ ಆರ್ ಸ್ವಾಗತಿಸಿ ಜೀವಶಾಸ್ತ್ರ ಉಪಾನ್ಯಾಸಕಿ ಶಾರೀಖಾ ತಾಸ್ನಿಮ್ ಧನ್ಯವಾದ ಸಲ್ಲಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಕು.ಕುಶಿ ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading