Ad Widget

ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆರವರ ಮೃತದೇಹವನ್ನು ಕುಮಾರಧಾರ ನದಿಯಲ್ಲಿ ಹುಡುಕಾಟ ನಡೆಸಿ ಹೊರತೆಗೆದ ಈಶ್ವರ್ ಮಲ್ಪೆಯವರಿಗೆ ಸನ್ಮಾನ

ಜು.22 ರಂದು ನಾಪತ್ತೆಯಾಗಿದ್ದ ಅಂಬ್ಯುಲೆನ್ಸ್ ಚಾಲಕರಾದ ಹೊನ್ನಪ್ಪ ದೇವರಗದ್ದೆ ಅವರ ಮೃತದೇಹ ಇಂದು(ಜು.25) ಕುಮಾರಧಾರ ನದಿಯಲ್ಲಿ ಪತ್ತೆಯಾಗಿದ್ದು, ಸತತ ನಾಲ್ಕು ದಿನಗಳಿಂದ ಕುಮಾರಧಾರ ನದಿಯಲ್ಲಿ ಹುಡುಕಾಟ ನಡೆಸಿದ ಈಶ್ವರ್ ಮಲ್ಪೆ ಹಾಗೂ ಅವರ ತಂಡವನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್.ಎನ್.ಎಸ್ ಇವರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಛೇರಿಯ ಮುಂಭಾಗದಲ್ಲಿ ಇಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಈಶ್ವರ್ ಮಲ್ಪೆ ಅವರಿಗೆ ಪಂಚಾಯತ್ ವತಿಯಿಂದ 10 ಸಾವಿರ ರೂಪಾಯಿ, ದಿನೇಶ್ ಮೊಗ್ರ 5 ಸಾವಿರ ರೂಪಾಯಿ, ಉದಯ ನೂಚಿಲ 5 ಸಾವಿರ ರೂಪಾಯಿ ಹಾಗೂ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 5 ಸಾವಿರ ರೂಪಾಯಿಗಳನ್ನು ನೀಡಿ ಗೌರವಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading