Ad Widget

ಮಂಡೆಕೋಲು : ಶಾಲೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆಟಿ ಸಮ್ಮಿಲನ

ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಜನಪದ ಕಲೆ, ಜನಪದ ಸಂಸ್ಕೃತಿ, ಜನಪದ ಆಟಗಳನ್ನು ಒಳಗೊಂಡ “ಆಟಿ ಸಮ್ಮಿಲನ” ಕಾರ್ಯಕ್ರಮ ಜು.19 ರಂದು ನಡೆಯಿತು. ಚೆನ್ನಮಣೆ ಆಟದ ಉದ್ಘಾಟನೆಯನ್ನು ಜನಾರ್ಧನ ಬರೆಮೇಲು ನಡೆಸಿದರು. ಚೆನ್ನಮಣೆ ಆಟದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ  ಕರುಣಾಕರ ಪಾತಿಕಲ್ಲು ಸಹಕರಿಸಿದರು. ಮಕ್ಕಳಿಗೆ ಹಳೆ ವಸ್ತುಗಳ ಪ್ರದರ್ಶನ ನಡೆಯಿತು ಈ ಬಗ್ಗೆ ಮಾಹಿತಿಯನ್ನು  ಶಿವರಾಮ ಮಾಸ್ತರ್ ಕೇನಾಜೆ ನೀಡಿದರು. ಆಟಿ ಸಮ್ಮಿಲನದ ಪ್ರಯುಕ್ತ ಆಟಿ ಕಳಂಜ   ಪ್ರಾತ್ಯಕ್ಷಿಕೆಯನ್ನು ಸದಾನಂದ ಮೈತಡ್ಕ ಮತ್ತು ಬಳಗದವರು ನಡೆಸಿಕೊಟ್ಟರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

. . . . . . . . .

ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ  ಸುರೇಶ್ ಕಣೆಮರಡ್ಕ ವಹಿಸಿದ್ದರು. ಆಟಿ ಅಂದು-ಇಂದು ವಿಚಾರವಾಗಿ ಸುಳ್ಯ ರೈತ ಉತ್ಪಾದಕ ಕಂಪೆನಿಯ ನಿರ್ದೇಶಕಿ ಶ್ರೀಮತಿ ಮಧುರಾ ಜಗದೀಶ್ ಮಾತನಾಡಿದರು.

. . . . . . .

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ರೀಮತಿ ವಿನುತ ಪಾತಿಕಲ್ಲು ಪ್ರಾಸ್ತಾವಿಕ ಮಾತುಗಳನ್ನಾಡಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.  ಹಳೆ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಜಾನಕಿ ಕಣೆಮರಡ್ಕ ಸ್ವಾಗತಿಸಿ, ಸಂಘದ ಸದಸ್ಯೆ ಸುನಿತಾ ಕಣೆಮರಡ್ಕ ವಂದಿಸಿದರು. 


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading