Ad Widget

ರೋಲ್ಸ್ ರಾಯ್ಸ್ ಕಂಪೆನಿಯಲ್ಲಿ ಉದ್ಯೋಗವನ್ನು ಪಡೆದ ರಿತುಪರ್ಣಾರಿಗೆ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಸನ್ಮಾನ

ವಿಶ್ವಶ್ರೇಷ್ಠ ಕಾರು ತಯಾರಿಕಾ ಕಂಪೆನಿ ಹಾಗೂ ವಿಮಾನದ ಇಂಜಿನ್ ತಯಾರಿಕಾ ಕಂಪನಿಯಾದ ರೋಲ್ಸ್ ರಾಯ್ಸ್ ಕಂಪೆನಿಯ ಜೆಟ್ ಇಂಜಿನ್ ಮಾನ್ಯುಪ್ರ್ಯಾಕ್ಚರ್ ಘಟಕದಲ್ಲಿ ತನ್ನ ಪರಿಶ್ರಮದಿಂದ ಭಾರತ ದೇಶದಿಂದ ಏಕೈಕಳಾಗಿ ಆಯ್ಕೆಗೊಂಡು ಅತೀ ಕಿರಿಯ ವಯಸ್ಸಿನ ಉದ್ಯೋಗಿಯಾಗಿ ವಾರ್ಷಿಕ ಸುಮಾರು 72.32 ಲಕ್ಷ ರೂಪಾಯಿ ಸಂಬಳ ದೊರೆಯುವ ಉದ್ಯೋಗವನ್ನು ಪಡೆದು ಹೆಗ್ಗಳಿಕೆಗೆ ಪಾತ್ರರಾದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಂಗಳೂರಿನ ಕುವರಿ ಸರೇಶ್ ಗೌಡ ಹಾಗೂ ಶ್ರೀಮತಿ ಗೀತಾ ದಂಪತಿಗಳ ಪುತ್ರಿಯಾದ ಕು.ರಿತುಪರ್ಣಾ ರವರನ್ನು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು ಇದರ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಸುಕುಮಾರ್, ಉಪಾಧ್ಯಕ್ಷರಾದ ಪದ್ಮನಾಭ ದೇವಸ್ಯ ಸಂಘದ ಕಾರ್ಯದರ್ಶಿ ಬಾಲಕೃಷ್ಣ.ಬಿ, ಖಜಾಂಜಿ ಇಂದಿರಾವತಿ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು ಇದರ ಯುವ ಘಟಕದ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು, ಯುವ ಘಟಕದ ನಿರ್ದೇಶಕರಾದ ದಿನೇಂದ್ರ ಉಳುವಾರು, ಮಹಿಳಾ ಘಟಕದ ಅಧ್ಯಕ್ಷರಾದ ಪೂರ್ಣಿಮಾ.ಎಂ, ಕಾರ್ಯದರ್ಶಿ ಸಾರಿಕಾ ಸುರೇಶ್, ಯುವ ಘಟಕದ ನಿರ್ದೇಶಕರಾದ ಸೌಮ್ಯ ಸುರೇಶ್, ಒಕ್ಕಲಿಗರ ಗೌಡ ಸೇವಾ ಸಂಘದ ನಿರ್ದೇಶಕರಾದ ಡಾ. ಪುರುಷೋತ್ತಮ.ಕೆ.ವಿ, ಕಲಾವತಿ, ರಕ್ಷಿತ್ ಪುತ್ತಿಲ, ದ.ಕ ಜಿಲ್ಲಾ ಒಕ್ಕಲಿಗರ ಮಾತೃ ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡ, ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಗುರುದೇವ.ಯು.ಬಿ ಹಾಗೂ ರಿತುಪರ್ಣ ರವರ ತಂದೆ ಸರೇಶ್, ತಾಯಿ ಶ್ರೀಮತಿ ಗೀತಾ ಹಾಗೂ ಸಹೋದರಿ ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading