- Saturday
- March 7th, 2026
ಇಂದು(ಜು.17) ಮಂಗಳೂರು ಆಕಾಶವಾಣಿಯ "ಯುವವಾಣಿ"ಯಲ್ಲಿ ಸುಬ್ರಹ್ಮಣ್ಯದ ಅನನ್ಯ.ಎಚ್ ಅವರ ಬಾಷಣ "ಜೋಳಿಗೆಯ ಕಂದಮ್ಮ" ರಾತ್ರಿ ಗಂಟೆ 8.00 ಕ್ಕೆ ಪ್ರಸಾರವಾಗಲಿದೆ.ಇವರು ಪುತ್ತೂರಿನ ವಿವೇಕಾನಂದ ವಿದ್ಯಾಲಯದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಕರ್ಕಾಟಕ (ಆಟಿ) ಚಿಕಿತ್ಸಾ ಶಿಬಿರವು ದಿನಾಂಕ 17.07.2025 ರಿಂದ 16.08.2025 ರವರೆಗೆ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 17.07.2025ರಂದು ಕೆವಿಜಿ ಆಯುರ್ವೇದ ಆಸ್ಪತ್ರೆಯಲ್ಲಿ ನೆರವೇರಿತು.ಈ ಚಿಕಿತ್ಸಾ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಕರ್ಕಾಟಕ ಮಾಸದಲ್ಲಿ...
https://youtu.be/9Sa_QZMI7go?si=5QwfYZodnjwXrG_I ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆ ಯಿಂದ ಬೆಂಗಳೂರು ನಾರಾಯಣ ಹೃದಯಾಲಯ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಮಗುವನ್ನು ವೆಂಟಿಲೇಟರ್ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಲಾಗುತ್ತಿದೆ. ಅಂಬ್ಯುಲೆನ್ಸ್ ಮಂಗಳೂರಿನಿಂದ 3.45 ಕ್ಕೆ ಹೊರಟಿದ್ದು ಪುತ್ತೂರು ಸುಳ್ಯ ಮಡಿಕೇರಿ ಮೈಸೂರು ಮಾರ್ಗವಾಗಿ ಬೆಂಗಳೂರು ತಲುಪಲಿದೆ. ವಾಹನ ಸವಾರರು ಮತ್ತು ಸಾರ್ವಜನಿಕರು ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಬೇಕಾಗಿ ಅಖಿಲ ಕರ್ನಾಟಕ...
ಬೆಳ್ಳಾರೆ ಗ್ರಾಮದ ಕಾವಿನಮೂಲೆ ವಿಶ್ವನಾಥ್ ಎಂಬವರ ಮನೆಗೆ ಜು 16 ರಂದು ಸಂಜೆ ಮರ ಬಿದ್ದು ಹಾನಿಯಾಗಿದೆ. ಈ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾರಿಗೂ ತೊಂದರೆಯಾಗಿಲ್ಲ. ಎಂಟು ಸಿಮೆಂಟ್ ಶೀಟ್, ಸಿಂಟೆಕ್ಸ್ ನೀರಿನ ಟಾಂಕಿ ಹಾಗೂ ಕಂಗಿನ ಗಿಡಗಳಿಗೆ, ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಸುಮಾರು ಮೂವತ್ತು ಸಾವಿರ ರೂ ನಷ್ಟವಾಗಿದೆ ಎಂದು ಮನೆಯವರು...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ರವರ ಜನ ಮಂಗಲ ಕಾರ್ಯಕ್ರಮದ ಅಡಿಯಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ "ಎ" ಒಕ್ಕೂಟದ ಕಾರ್ಯದರ್ಶಿಯಾದ ಅನಿತಾ ಬೊಂಬಿಲ ರವರ ಅತ್ತೆಯಾದ ಬಾಲಕಿ ರವರಿಗೆ ಸುಮಾರು 3 ತಿಂಗಳಿನಿಂದ ಮೂಳೆ ಸವೆತದಿಂದ ನಡೆದಾಡಲು ಕಷ್ಟವಾದ ಕಾರಣ ವೀಲ್ ಚೇರ್ ಗಾಗಿ ಯೋಜನೆಗೆ ಮನವಿ ಸಲ್ಲಿಸಿದ್ದರು....
ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ಸಾನಿಧ್ಯಕ್ಕೆ ಜು.16 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ರವರು ಭೇಟಿ ನೀಡಿ ದೈವದ ಆಶಿರ್ವಾದ ಪಡೆದರು.ಈ ಸಂದರ್ಭದಲ್ಲಿ ಸುರೇಶ್ ಉಜಿರಡ್ಕ ರವರು ಹರೀಶ್ ಇಂಜಾಡಿ ರವರನ್ನು ಗೌರವದಿಂದ ಬರಮಾಡಿಕೊಂಡರು.ಹರೀಶ್ ಇಂಜಾಡಿ ರವರು ಈ ಹಿಂದೆಯೂ ಕೂಡ ಸಾನಿಧ್ಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು.
ಸುಬ್ರಹ್ಮಣ್ಯ : ಸದಾ ಸಮವಸ್ತ್ರ ಧರಿಸಿ ಕಾಲೇಜಿನಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳು ಕೆಸರು ತುಂಬಿದ ಗದ್ದೆಗೆ ಇಳಿದು ರೈತರಂತೆ ಕೈಯಲ್ಲಿ ನೇಜಿ ಹಿಡಿದು ನೇಜಿ ನಾಟಿ ಮಾಡಿ ಖುಷಿಪಟ್ಟರು.ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾ ವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ, ಐಕ್ಯೂಎಸಿ ಘಟಕ ಆಶ್ರಯದಲ್ಲಿ ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನತೆಯ ಪಾತ್ರ ಕಾರ್ಯಕ್ರಮದ ಅಂಗವಾಗಿ ನೇಜಿ...
ಗುತ್ತಿಗಾರಿನಲ್ಲಿ ಕಸಾಪ ವತಿಯಿಂದ ಸರಣಿ ಕಾರ್ಯಕ್ರಮ; ಪರಿಸರ ಸಂರಕ್ಷಣೆಯಿಂದ ಆರೋಗ್ಯಕರ ಜೀವನ ಸಾಧ್ಯ – ಯಶೋಚಂದ್ರ ಪರಮಲೆ
ನಾವು ಎಷ್ಟೇ ತಾಂತ್ರಿಕವಾಗಿ ಬೆಳೆದರು ಪರಿಸರವೇ ನಮ್ಮ ಜೀವಾಳ ಅದನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವುದು ನಮ್ಮ ಕರ್ತವ್ಯ ಪರಿಸರವನ್ನು ಸಂರಕ್ಷಿಸೋಣ ಎಂದು ಪರಿಸರ ಪ್ರೇಮಿ, ಪ್ರಗತಿಪರ ಕೃಷಿಕ ಯಶೋಚಂದ್ರ ಪರಮಲೆ ಹೇಳಿದರು.ಅವರು ಜು.16 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಕಾಲೇಜಿನ ಸಹಯೋಗದಲ್ಲಿ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳಿಗೆ ವೀಲ್ ಚೇರ್ ವಿತರಣೆ ನಡೆಯಿತು.ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ "ಬಿ" ಒಕ್ಕೂಟದ ಸೌಭಾಗ್ಯ ಸಂಘದ ಸದಸ್ಯರಾದ ಲಲಿತಾ ರವರ ಪತಿ ಹುಕ್ರಪ್ಪ ಗೌಡ ಮಲ್ಲಾಜೆ ರವರಿಗೆ ಅನಾರೋಗ್ಯದಿಂದಾಗಿ ನಡೆದಾಡಲು ಕಷ್ಟವಾದ ಕಾರಣ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ...
Loading posts...
All posts loaded
No more posts
