Ad Widget

ಸುಳ್ಯ ಕಸಾಪ ವತಿಯಿಂದ ಪರಿಸರ ಜಾಗೃತಿಯಾನ ಸರಣಿ ಕಾರ್ಯಕ್ರಮಗಳಿಗೆ ಚಾಲನೆ

ವಿದ್ಯಾರ್ಥಿಗಳು ಪರಿಸರ ಪ್ರೇಮಿಗಳಾಗಿ ಬದುಕಿ ಬಾಳಬೇಕು- ಡಾ.ಆರ್.ಕೆ.ನಾಯರ್

. . . . . . . . .

ಪ್ರಕೃತಿಯಲ್ಲಿರುವ ಪ್ರತಿಯೊಂದು ಸೂಕ್ಷ್ಮಾಣು ಜೀವಿಗಳು ಪರಿಸರವನ್ನು ಸ್ವಚ್ಛಂದಗೊಳಿಸಲು ಸಾಧ್ಯವಾಗುವುದಾದರೆ ಮನುಷ್ಯನಿಗೆ ಯಾಕಾಗಬಾರದು. ಅದಕ್ಕಾಗಿ ಪ್ರತಿಯೊಬ್ಬ ಮಾನವನು ಚಿಂತಿಸಿ ಅದನ್ನು ಉಳಿಸಿದಲ್ಲಿ ಮಾತ್ರ ಮುಂದಿನ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಪ್ರಕೃತಿಯನ್ನು ಪ್ರೀತಿಸಿದರೆ ಮಾತ್ರ ಅದು ನಮ್ಮನ್ನು ಕಾಪಾಡುತ್ತದೆ ಅದಕ್ಕಾಗಿ ವಿದ್ಯಾರ್ಥಿಗಳು ಅದನ್ನು ಪ್ರೀತಿಸಿ ಎಂದು ಖ್ಯಾತ ಪರಿಸರ ತಜ್ಞ ಹಾಗೂ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅಭಿಪ್ರಾಯಪಟ್ಟರು.
ಅವರು ಜು.14 ರಂದು ಸುಳ್ಯ ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಕೋ ಕ್ಲಬ್ ನ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮ ಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಕ್ಷೇತ್ರಕ್ಕೆ ವಿಷ ಬರೆಸುವ ಕೆಲಸ ಮಾಡಬೇಡಿ. ಪ್ರಕೃತಿ ಮುನಿಸಿಕೊಂಡರೆ ಆ ದುರಂತವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲವೆಂಬುದು ಇತ್ತೀಚೆಗಿನ ಪ್ರಕರಣವೇ ಸಾಕ್ಷಿ. ಪ್ರಕೃತಿಯ ವಿರುದ್ಧ ಹೋಗಿ ಬೇಕುಂತಲೇ ವಿಕೋಪಗಳನ್ನು ತರಿಸಿಕೊಳ್ಳುತ್ತೇವೆ ಎಂದ ಅವರು ಸಣ್ಣ ಗಾತ್ರದ ಇರುವೆ ಯನ್ನು ಸಂರಕ್ಷಣೆಯನ್ನು ಮಾಡಿದರೆ ಆನೆಯನ್ನು ಸಂರಕ್ಷಣೆ ಮಾಡಿದಂತೆ, ಅದರಂತೆ ಗಿಡಗಳನ್ನು‌ ರಕ್ಷಣೆ ಮಾಡಿ ಮರಗಳು ಅದರಷ್ಟಕ್ಕೆ ಉಳಿಯುತ್ತದೆ. ಪ್ರಕೃತಿ ಸಂರಕ್ಷಣೆಗೆ ನಮ್ಮ ಭಾವನೆ ಮುಖ್ಯ ಎಂದು ಹೇಳಿದರು.

. . . . . . .

ಸಭಾಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಅತಿಥಿಯಾಗಿದ್ದ ಸುಳ್ಯ ವಲಯಾರಣ್ಯಾಧಿಕಾರಿ ಎನ್.ಮಂಜುನಾಥ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಮೂಡಿತ್ತಾಯ, ಹಿರಿಯ ಶಿಕ್ಷಕ ಡಾ.ಸುಂದರ್ ಕೇನಾಜೆ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ. ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ, ಕಸಾಪ ಜಿಲ್ಲಾ ಪ್ರತಿನಿಧಿ ಶ್ರೀ ರಾಮಚಂದ್ರ ಪಲ್ಲತಡ್ಕ, ತಾ.ಘಟಕದ ಗೌ.ಕೋಶಾಧಿಕಾರಿ ಶ್ರೀ. ದಯಾನಂದ ಆಳ್ವ, ಇಕೋ ಕ್ಲಬ್ ನ ಸಂಚಾಲಕಿ ಶ್ರೀಮತಿ ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ.ಆರ್.ಕೆ‌.ನಾಯರ್ ಮತ್ತು ಶ್ರೀ‌. ಎನ್.ಮಂಜುನಾಥ ರವರನ್ನು ಗೌರವಿಸಲಾಯಿತು.
ಗಾಯಕಿಯರಾದ ಕು. ಶುಭದಾ ಆರ್‌.ಪ್ರಕಾಶ್ ಮತ್ತು ಕು. ಲಿಪಿಶ್ರೀ ಪರಿಸರ ಗೀತೆ ಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ. ರಾಮಚಂದ್ರ ಪಲ್ಲತ್ತಡ್ಕ ಸ್ವಾಗತಿಸಿ, ಶ್ರೀಮತಿ ಪೂರ್ಣಿಮ ವಂದಿಸಿದರು. ಕಸಾಪ ಗೌ.ಕಾರ್ಯದರ್ಶಿ ,ಶಿಕ್ಷಕಿ ಶ್ರೀಮತಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ನಿರ್ದೇಕರಾದ ಶ್ರೀ. ಕೇಶವ ಸಿ.ಎ., ಶ್ರೀ. ರಮೇಶ್ ನೀರಬಿದಿರೆ, ಶ್ರೀಮತಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಂದೆಸರಣಿ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು, ಸರಕಾರಿ ಪ್ರೌಢಶಾಲೆ ಎಲಿಮಲೆ, ರೋಟರಿ ಪದವಿ ಪೂರ್ವ ವಿದ್ಯಾಲಯ ಮಿತ್ತಡ್ಕ, ಸರಕಾರಿ ಪ್ರೌಢಶಾಲೆ ಅಜ್ಜಾವರ, ವಿದ್ಯಾ ಬೋದಿನಿ ಪ್ರೌಢಶಾಲೆ ಬಾಳಿಲ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಸ್ನೇಹ ಪ್ರೌಢಶಾಲೆ ಸುಳ್ಯ, ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು, ನೆಹರು ಮೆಮೋರಿಯಲ್ ಪದವಿ ಪೂರ್ವ ವಿದ್ಯಾಲಯ ಸುಳ್ಯ ಇಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯಲ್ಲಿದ್ದು, ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕ ಇಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading