Ad Widget

ಬೆಳ್ಳಾರೆ-ನಾಯಕರ ಶಿಬಿರ ಮತ್ತು ಖುರ್ರತ್ ತಂಙಲ್ ಅನುಸ್ಮರಣೆ

ಎಸ್ಸೆಸ್ಸೆಫ್ ಬೆಳ್ಳಾರೆ ಘಟಕದ ವತಿಯಿಂದ ನಾಯಕರ ಶಿಬಿರ ಮತ್ತು ಖುರ್ರತ್ ಸಾದಾತ್ ಖುರ್ರತ್ ತಂಙಲ್ ಅನುಸ್ಮರಣೆ ಸಮಾರಂಭವು ಜು 15ರಂದು ಬೆಳ್ಳಾರೆ ಸುನ್ನೀ ಸೆಂಟರ್ನಲ್ಲಿ ನಡೆಯಿತು.ಸುನ್ನೀ ಜಂಇಯತ್ತುಲ್ ಉಲಮಾ ಬೆಳ್ಳಾರೆ ವಲಯಾಧ್ಯಕ್ಷ ಹಸನ್ ಸಖಾಫಿ ಉದ್ಘಾಟಿಸಿದರು.ಈ ಸಮಾರಂಭದಲ್ಲಿ ಸುನ್ನೀ ತರಗತಿಯನ್ನು ನಡೆಸಿದ ಕೇರಳ ಎಸ್ಸೆಸ್ಸೆಫ್ಫಿನ ಹಣಕಾಸು ಕಾರ್ಯದರ್ಶಿ ಅನಸ್ ಅಮಾನಿ ಪುಷ್ಪಗಿರಿಯವರು ಸುನ್ನೀ ಮುಸ್ಲಿಮರು ಪಾಲಿಸಿ ನಡೆಯಬೇಕಾದ ನೀತಿ ನಿಯಮ ಕ್ರಮಗಳ ಕುರಿತು ವಿವರಿಸಿ ಹೇಳಿದರು.

. . . . . . . . .

ವೇದಿಕೆಯಲ್ಲಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ರಿಯಾನ್ ಸಅದಿ, ಎಸ್ವೈಎಸ್ ಬೆಳ್ಳಾರೆ ವೃತ್ತದ ಅಧ್ಯಕ್ಷರಾದ ಹನೀಫ್ ಮುಸ್ಲಿಯಾರ್,ದಾರುಲ್ ಹಿಕ್ಮ ಹಿಫ್ಲ್ ಕಾಲೇಜು ಬೆಳ್ಳಾರೆಯ ಮುದರ್ರಿಸರಾದ ಹಾಫಿಝ್ ಅಬ್ದುಲ್ ರಝಾಕ್ ಝುಹ್ರಿ ,ದಾರುಲ್ ಹಿಕ್ಮ ಮದರಸ ಬೆಳ್ಳಾರೆಯ ಸದರ್ ಮುಅಲ್ಲಿಂ ಇಬ್ರಾಹಿಂ ಹಿಶಮಿ,ಎಸ್ಎಂಎ ಬೆಳ್ಳಾರೆ ವಲಯಾಧ್ಯಕ್ಷ ಇಬ್ರಾಹಿಂ ಬೀಡು, ಮಹಮೂದ್ ಬೆಳ್ಳಾರೆ ಉಪಸ್ಥಿತರಿದ್ದರು. ಈ  ಸಮಾರಂಭದಲ್ಲಿ ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟೊರ್ ವತಿಯಿಂದ ಆಗಸ್ಟ್ 31ರಂದು ಜರುಗಲಿರುವ ಸಾಹಿತ್ಯೋತ್ಸವದ ಪೊಸ್ಟರನ್ನು ಅನಸ್ ಅಮಾನಿಯವರು ಬಿಡುಗಡೆ ಮಾಡಿದರು.ಈ ಸಮಾರಂಭದಲ್ಲಿ ಮುಝಮ್ಮಿಲ್ ಇಂದ್ರಾಜೆ ಸ್ವಾಗತಿಸಿದರು.

. . . . . . .

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading