Ad Widget

ಬೊಳುಬೈಲು : ಪ್ರಯಾಣಿಕರ ನೂತನ ಬಸ್ಸು ತಂಗುದಾಣ ಉದ್ಘಾಟನೆ

“ಯುವ ಸಮೂಹ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಸಾಗಿದಲ್ಲಿ ಗ್ರಾಮಗಳ ಅಭಿವೃದ್ಧಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಬೊಳುಬೈಲಿನ ಯುವಕ ಮಂಡಲದ ಸದಸ್ಯರ ಕಾರ್ಯ ಶ್ಲಾಘನೀಯ” ಎಂದು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಗೋಪಾಲ್ ಅಡ್ಕಾರು ಹೇಳಿದರು. ಅವರು ಜುಲೈ 13ರಂದು ಜಾಲ್ಸೂರು ಗ್ರಾಮ ಪಂಚಾಯತ್ ಮತ್ತು ನವಚೇತನ ಯುವಕ ಮಂಡಲ (ರಿ.) ಬೊಳುಬೈಲು ಇವರ ಸಹಭಾಗಿತ್ವದಲ್ಲಿ ನೂತನವಾಗಿ ಬೊಳುಬೈಲಿನಲ್ಲಿ ನಿರ್ಮಾಣಗೊಂಡ ನವಚೇತನ ಪ್ರಯಾಣಿಕರ ಬಸ್ಸು ತಂಗುದಾಣ ಉದ್ಘಾಟಿಸಿ, ಉದ್ಘಾಟನಾ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲುರವರು ಬಸ್ಸು ತಂಗುದಾಣ ನಿರ್ಮಾಣದ ಹಿಂದಿನ ಶ್ರಮದ ಕುರಿತಾಗಿ ವಿವರಿಸಿದರು. ಇನ್ನೊರ್ವ ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಚಂದ್ರಹಾಸ,  ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ ನಿರ್ದೇಶಕರಾದ ಕುಸುಮಾಧರ ಅರ್ಭಡ್ಕ ಮತ್ತು ನಿರಂಜನ ಬೊಳುಬೈಲು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನವಚೇತನ ಯುವಕ ಮಂಡಲದ ಅಧ್ಯಕ್ಷ ಶ್ರೀ ಪ್ರದೀಪ್ ಬೊಳುಬೈಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ಪದ್ಮನಾಭ ನೆಕ್ರಾಜೆ ಸ್ವಾಗತಿಸಿ, ನಿತಿನ್ ಕುಮಾರ್ ಅರ್ಭಡ್ಕ ವಂದಿಸಿದರು. ನಿರ್ದೇಶಕ ಪ್ರವೀಣ್ ಕಾಟೂರು ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಊರಿನ ಬಂಧುಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading