Ad Widget

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪುತ್ತೂರು ಶಾಸಕರ ರಾಜಕೀಯ ಹಸ್ತಕ್ಷೇಪ ಸಲ್ಲದು – ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಇತ್ತೀಚಿನ ದಿನಗಳಲ್ಲಿ ಸುಳ್ಳು ಮತ್ತು ಇಲ್ಲಸಲ್ಲದ ವಿಚಾರಗಳನ್ನು ಮುಂದಿಟ್ಟು ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇವರು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನಮ್ಮ ಸಂಘಟನೆಯಿಂದ ಬೆಳೆದು ಪ್ರಯೋಜನ ಪಡೆದುಕೊಂಡು ನಾನು ಕಟ್ಟರ್ ಬಿ.ಜೆ.ಪಿಯೆಂದು ಜನರನ್ನು ಮೋಸ ಮಾಡಿದ್ದು, ಸುಳ್ಯದ ಜನತೆಗೆ ತಿಳಿದಿದೆ. ಈಗ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸುಳ್ಯದಲ್ಲಿ ನಮ್ಮ ಸಂಘಟನೆಯ ಅಧಿಕಾರವಿದ್ದು, ವಿಧಾನ ಸಭಾ ಕ್ಷೇತ್ರದ 76 ಗ್ರಾಮಗಳಲ್ಲಿಯು ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ನಮ್ಮ ಸರ್ಕಾರವಿದ್ದಾಗ ಸಾವಿರಾರು ಕೋಟಿ ಅನುದಾನದಲ್ಲಿ ಎಲ್ಲಾ ಹಳ್ಳಿಗಳ ಅಭಿವೃದ್ಧಿ ಆಗಿದೆ. ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಬೇಕಾದ ಎಲ್ಲಾ ಕಾರ್ಯಗಳನ್ನು ಬಹಳ ಒತ್ತು ಕೊಟ್ಟು ಮಾಡಲಾಗಿದೆ. ಇನ್ನೂ ಹಲವಾರು ಯೋಜನೆಗಳ ಅನುಷ್ಠಾನ ಬಾಕಿಯಿದೆ. ಇದನ್ನು ಬಿ.ಜೆ.ಪಿ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಮಾಡಲಿದ್ದೇವೆ.  ಬಿಜೆಪಿ ಸರ್ಕಾರವಿದ್ದಾಗ ಗ್ರಾಮೀಣ ಭಾಗದ ರಸ್ತೆಗಳಿಗೆ ನಮ್ಮ ಗ್ರಾಮ-ನಮ್ಮ ರಸ್ತೆ ಮೂಲಕ ಹಿಂದಿನ ಶಾಸಕರಾದ ಎಸ್.ಅಂಗಾರ ರವರು  ಹಲವಾರು ರಸ್ತೆಗಳ ಅಭಿವೃದ್ಧಿ ಮಾಡಿ ಜನರ ವಿಶ್ವಾಸ ಗಳಿಸಿದ್ದಾರೆ. ಉಳಿದಂತೆ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಈಗಿನ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರ ಮೂಲಕವೂ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನಗಳನ್ನು ಬಳಸಿ ಅಭಿವೃದ್ಧಿ ಮಾಡಲಿದ್ದೇವೆ. ಹಿಂದಿನ ಸಂಸದರ ನೇತೃತ್ವದಲ್ಲಿ ಆದರ್ಶ ಗ್ರಾಮದ ಯೋಜನೆಯ ಮೂಲಕ ಬಳ್ಪ ಗ್ರಾಮಕ್ಕೆ ಸರ್ಕಾರದ ಅನುದಾನದಿಂದ ಹಾಗೂ ಬೇರೆ ಮೂಲಗಳಿಂದ ಸುಮಾರು 70 ಕೋಟಿ ವ್ಯಯ ಮಾಡಲಾಗಿದೆ. ಮುಂದೆ ನಮ್ಮ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿ ಕೆಲಸ ಮಾಡಲಿದ್ದೇವೆ. ಪುತ್ತೂರಿನಲ್ಲಿ ಸಂಜೀವ ಮಠಂದೂರು ಅವಧಿಯಲ್ಲಿ  ಅಭಿವೃದ್ದಿಯಾಗಿ ಬಾಕಿ ಇರುವ ಹಳ್ಳಿಗಳ ಸಮಸ್ಯೆ ಸರಿಪಡಿಸಿ,  ಆಮೇಲೆ ವ್ಯಾಪ್ತಿ ಪ್ರದೇಶವನ್ನು ಮೀರಿ ಮಾತನಾಡುವುದು ಉತ್ತಮ ಎಂದು ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading