Ad Widget

ಸುಬ್ರಹ್ಮಣ್ಯ : ಜು.14 ರಂದು “ನಾಯಿಗಳಿಗೆ ಹುಚ್ಚು ನಾಯಿ ರೋಗನಿರೋಧಕ ಉಚಿತ ಲಸಿಕಾ ಶಿಬಿರ”

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಡಬ, ಪಶು ಆಸ್ಪತ್ರೆ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತಾಶ್ರಯದಲ್ಲಿ ಜು.14 ಸೋಮವಾರದಂದು ಬೆಳಿಗ್ಗೆ 10:00 ಗಂಟೆಯಿಂದ “ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕಾ ಶಿಬಿರ” ನಡೆಯಲಿದ್ದು, ಬೆಳಿಗ್ಗೆ 10:00 ಗಂಟೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ಶಿಬಿರದ ಉದ್ಘಾಟನೆ ನಡೆದು, ಬೆಳಿಗ್ಗೆ 10:00 ಗಂಟೆಯಿಂದ 10:45 ರವರೆಗೆ ಸುಬ್ರಹ್ಮಣ್ಯ ದೇವರಗದ್ದೆ ಅಂಗನವಾಡಿ ಕೇಂದ್ರದ ಬಳಿ ಹಾಗೂ ಯೇನೆಕಲ್ಲು ಬಸ್ ತಂಗುದಾಣ ಮುತ್ತಾಜಡ್ಕ ದಲ್ಲಿ, ಬೆಳಿಗ್ಗೆ 11:00 ಗಂಟೆಯಿಂದ 11:15 ರವರೆಗೆ ನೂಚಿಲ ರಾಮಣ್ಣ ಗೌಡ ರವರ ಅಂಗಡಿಯ ಬಳಿ, ಬೆಳಿಗ್ಗೆ 11:00 ರಿಂದ 11:30 ರವರೆಗೆ ದೇವರಹಳ್ಳಿ ಅಂಗನವಾಡಿ ಕೇಂದ್ರದ ಬಳಿ, ಬೆಳಿಗ್ಗೆ 11:30 ರಿಂದ 11:45 ರವರೆಗೆ ಸುಬ್ರಹ್ಮಣ್ಯ ಪರ್ವತಮುಖಿ ಅಂಗನವಾಡಿ ಕೇಂದ್ರದ ಬಳಿ, ಮದ್ಯಾಹ್ನ 12:00 ರಿಂದ 12:15 ರವರೆಗೆ ಕುಲ್ಕುಂದ ಬಸ್ ತಂಗುದಾಣದ ಬಳಿ ಹಾಗೂ ಐನೆಕಿದು ಸಮುದಾಯ ಭವನದ ಬಳಿ ಲಸಿಕಾ ಶಿಬಿರವು ನಡೆಯಲಿದ್ದು, ಸಾಕು ನಾಯಿಗಳನ್ನು ಶಿಬಿರಕ್ಕೆ ತಂದು ಲಸಿಕೆ ಹಾಕಿಸಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದ್ದು, ನಾಯಿಗಳನ್ನು ಲಸಿಕೆಗೆ ಕರೆತರುವ ಸಂದರ್ಭದಲ್ಲಿ ನಾಯಿಯ ಮಾಲೀಕರ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ಲಸಿಕಾ ಶಿಬಿರದಲ್ಲಿ ನೀಡಬೇಕು ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading